News: ನಾವು ನೀವೆಲ್ಲ ಬಿಸ್ಕೇಟ್ ಪ್ಯಾಕೇಟ್ ತಂದು ಅದನ್ನು ಡೈರೆಕ್ಟ್ ಆಗಿ ತಿಂದು ಬಿಡುತ್ತೇವೆ. ಆದರೆ ಚೆನ್ನೈನ ಓರ್ವ ವ್ಯಕ್ತಿ ಬಿಸ್ಕೇಟ್ ಪ್ಯಾಕೇಟ್ ಓಪನ್ ಮಾಡಿ, ಎಷ್ಟು ಬಿಸ್ಕೇಟ್ ಇದೆ ಎಂದು ಎಣಿಸಿ, ಅದರಲ್ಲಿ ಒಂದು ಬಿಸ್ಕೇಟ್ ಕಡಿಮೆ ಇದೆ ಎಂದು ಕಂಡು ಹಿಡಿದಿದ್ದಾನೆ. ಬಳಿಕ ಸಾಕ್ಷಿ ಸಮೇತ ಕೇಸ್ ಹಾಕಿದ್ದಾನೆ. ಒಂದು ಬಿಸ್ಕೇಟ್ ಕಡಿಮೆಯಾಗಿದ್ದಕ್ಕೆ, 1 ಲಕ್ಷ ರೂಪಾಯಿ ಪರಿಹಾರ ಸಿಕ್ಕಿತ್ತು. ಆ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ನೋಡಿ.
ಇದು ಒಂದು ವರ್ಷದ ಹಿಂದೆ ನಡೆದಿದ್ದ ಘಟನೆ. ಚೆನ್ನೈನ ನಿವಾಸಿಯಾಗಿರುವ ಪಿ.ದಿಲೀಪ್ ಬಾಬು ಎಂಬುವವರು ನಾಲ್ಕೈದು ಬಿಸ್ಕೇಟ್ ಪ್ಯಾಕೇಟ್ ಖರೀದಿಸಿದ್ದರು. ಅದರಲ್ಲಿ 1ಪ್ಯಾಕೇಟ್‌ನಲ್ಲಿ 16 ಬಿಸ್ಕೀಟ್ಸ್ ಇರಬೇಕಿತ್ತು. ಆದರೆ ಅದರಲ್ಲಿ 15 ಬಿಸ್ಕೇಟ್ಸ್ ಇತ್ತು. ಇದೇ ರೀತಿ ಇನ್ನೂ ಎರಡು ಬಿಸ್ಕೇಟ್ ಪ್ಯಾಕೇಟ್ ಓಪನ್ ಮಾಡಿದಾಗ, ಅದರಲ್ಲೂ ಒಂದೊಂದು ಬಿಸ್ಕೇಟ್ ಕಡಿಮೆ ಇತ್ತು.
ಇನ್ನುಳಿದ ಬಿಸ್ಕೇಟ್ ಪ್ಯಾಕೇಟ್ ಓಪನ್ ಮಾಡದೇ, ಬಿಸ್ಕೇಟ್ ಎಣಿಸಿದಾಗ, ಅದರಲ್ಲೂ ಬಿಸ್ಕೇಟ್ ಕಡಿಮೆ ಇತ್ತು. ಇದನ್ನೇ ಸಾಕ್ಷಿಯಾಗಿ ಇರಿಸಿಕೊಂಡು, ಬಿಸ್ಕೇಟ್ ಕಂಪನಿ ವಿರುದ್ಧ ದೂರು ದಾಖಲಿಸಲಾಯ್ತು. ಈ ಕಂಪನಿ ದಿನಕ್ಕೆ 50 ಲಕ್ಷಕ್ಕೂ ಹೆಚ್ಚು ಬಿಸ್ಕೇಟ್ ಪ್ಯಾಕೇಟ್ ತಯಾರಿಸುತ್ತದೆ. ಎಲ್ಲ ಪ್ಯಾಕೇಟ್‌ನಲ್ಲೂ ಒಂದೊಂದು ಬಿಸ್ಕೇಟ್ ಖಾಲಿ ಆದ್ರೆ, 50 ಲಕ್ಷ ಬಿಸ್ಕೇಟ್ ಲಾಭ ಮಾಡುತ್ತಾರೆ.
ಅಂದರೆ ಒಂದು ಬಿಸ್ಕೇಟ್ ಬೆಲೆ 0.75 ಇರುತ್ತದೆ. ಅದನ್ನು ಲೆಕ್ಕ ಹಾಕಿದರೆ, ಈ ಕಂಪನಿ ಪ್ರತಿದಿನ 29 ಲಕ್ಷ ರೂಪಾಯಿ ಜನರಿಗೆ ಪಂಗನಾಮ ಹಾಕಿ, ತಾನು ಲಾಭ ಪಡೆದುಕೊಳ್ಳುತ್ತದೆ ಎಂದು ದಿಲೀಪ್ ವಾದ ಮಾಡಿದರು. ಆದರೆ ಕಂಪನಿ, ನಾನು ಎಷ್ಟು ಬಿಸ್ಕೇಟ್ ಹಾಕುತ್ತೇವೆ ಎಂದು ಲೆಕ್ಕ ಹಾಕಿ ಸೇಲ್ ಮಾಡುವುದಿಲ್ಲ. ಬದಲಾಗಿ ಬಿಸ್ಕೇಟ್ ಪ್ಯಾಕೇಟ್ ಎಷ್ಟು ತೂಕವಿದೆ ಎಂದು ಲೆಕ್ಕ ಹಾಕಿ, ಸೇಲ್ ಮಾಡುತ್ತೇವೆ ಎಂದಿತು.
ಆದರೆ ಈ ಹೇಳಿಕೆ, ಕಂಪನಿಗೇ ತಿರುಗು ಬಾಣವಾಯ್ತು. ಒಂದು ಪ್ಯಾಕೇಟ್ ಬಿಸ್ಕೇಟ್ ತೂಕ, 76 ಗ್ರಾಮ್ ಎಂದು ಪ್ಯಾಕೇಟ್ ಮೇಲೆ ಬರೆದಿತ್ತು. ಆದರೆ ತೂಕ ಮಾಡಿ ನೋಡಿದಾಗ, ಆ ತೂಕ 76 ಗ್ರಾಮ್‌ಗಿಂತಲೂ ಕಡಿಮೆ ಇತ್ತು. ಈ ವೇಳೆ ಕೋರ್ಟ್ ದಿಲೀಪ್ ಬಾಬು ಪರ ಆದೇಶ ನೀಡಿ, ಕಂಪನಿ ದಿಲೀಪ್‌ಗೆ 1 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಸೂಚಿಸಿತು.