Health Tips: ನಮ್ಮ ಆರೋಗ್ಯ ಚೆನ್ನಾಗಿರಬೇಕು. ನಾವು ಗಟ್ಟಿಮುಟ್ಟಾಗಿರಬೇಕು ಅಂದ್ರೆ, ನಮ್ಮ ದೇಹದ ಎಲ್ಲಾ ಭಾಗಗಳು ಸರಿಯಾಗಿ ಇರಬೇಕು. ಹಾರ್ಟ್ ಚೆನ್ನಾಗಿದ್ರೆ ಸಾಕು, ಲಿವರ್ ಚೆನ್ನಾಗಿದ್ರೆ ಸಾಕು ಅಂತಾ ಹೇಳಲು ಸಾಧ್ಯವಿಲ್ಲ. ಏಕೆಂದರೆ, ದೇಹದ ಒಂದು ಭಾಗ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದರೆ, ಅಥವಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲವೆಂದಲ್ಲಿ, ನಮ್ಮ ಆರೋಗ್ಯ ಪೂರ್ತಿಯಾಾಗಿ ಹಾಳಾಗುತ್ತದೆ. ಹಾಗಾಗಿ ಮನುಷ್ಯ ಆರೋಗ್ಯವಾಗಿ ಇರಬೇಕು ಅಂದ್ರೆ, ನಮ್ಮ ಎಲ್ಲ ಆರ್ಗನ್ಸ್ ಚೆನ್ನಾಗಿರಬೇಕು. ಈ ಬಗ್ಗೆ ವೈದ್ಯರೇ ಸಂಪೂರ್ಣ ಮಾಹಿತಿ ನೀಡಿದ್ದಾರೆ ನೋಡಿ.
ನಮ್ಮ ದೇಹದಲ್ಲಿ ಎಲ್ಲಕ್ಕಿಂತ ಮುಖ್ಯವಾದ ಅಂಗ ಅಂದ್ರೆ, ಕಿಡ್ನಿ. ಕಿಡ್ನಿ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದಲ್ಲಿ, ನಿಮ್ಮೆಲ್ಲ ದೇಹದ ಅಂಗಾಂಗಗಳು ಆರೋಗ್ಯವಾಗಿದೆ ಎಂದರ್ಥ. ಆದರೆ ಕಿಡ್ನಿ ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಿಲ್ಲವೆಂದಲ್ಲಿ, ಅದರ ಎಫೆಕ್ಟ್ ದೇಹದ ಎಲ್ಲ ಭಾಗಗಳ ಮೇಲೂ ಆಗುತ್ತದೆ. ಹಾಗಾಗಿ ಕಿಡ್ನಿಯನ್ನು ಆರೋಗ್ಯವಾಗಿ ಇಟ್ಟುಕೊಳ್ಳಬೇಕು ಎನ್ನಲಾಗುತ್ತದೆ.
ಹಾಗಾಗಿ ವರ್ಷಕ್ಕೆ ಒಮ್ಮೆಯಾದರೂ ಕಿಡ್ನಿ ಚೆಕಪ್ ಮಾಡಿಸಿಕೊಳ್ಳಬೇಕು. ಆರೋಗ್ಯಕರ ಆಹಾರ ಸೇವಿಸಬೇಕು. ಹೆಚ್ಚು ನೀರು ಕುಡಿಯಬೇಕು. ತಿಂದ ಊಟ ಸರಿಯಾಗಿ ಜೀರ್ಣವಾಗುತ್ತಿದೆಯಾ..? ಮಲ ಮೂತ್ರ ವಿಸರ್ಜನೆ ಚೆನ್ನಾಗಿ ಆಗುತ್ತಿದೆಯಾ..? ಹಸಿವೆಯಾಗುತ್ತಿದೆಯಾ..? ದೇಹದ ಎಲ್ಲಾ ಭಾಗಗಳೂ ಸರಿಯಾಗಿ ಇದೆಯಾ..? ಎಂದು ಗಮನಿಸಬೇಕು. ಇವೆಲ್ಲ ಸರಿಯಾಗಿ ಇದ್ದಾಗ ಮಾತ್ರ ನಿಮ್ಮ ಕಿಡ್ನಿ ಆರೋಗ್ಯವಾಗಿರುತ್ತದೆ.
ಇನ್ನು ನೀವು ಮೂತ್ರ ತಡೆದುಕೊಳ್ಳುವುದರಿಂದ ಕಿಡ್ನಿ ಆರೋಗ್ಯ ಹಾಳಾಗುತ್ತದೆ. ಮೂತ್ರದಲ್ಲಿರುವ ಉಪ್ಪಿನ ಅಂಶ ಜಮೆಯಾಗಿ, ಕಿಡ್ನಿಯಲ್ಲಿ ಕಲ್ಲಾಗುತ್ತದೆ. ಹಾಗಾಗಿ ಕಿಡ್ನಿ ಆರೋಗ್ಯ ಹಾಳಾಗಬಾರದು ಅಂದ್ರೆ, ಮೂತ್ರ ವಿಸರ್ಜನೆ ಸರಿಯಾಗಿ ಮಾಡಬೇಕು. ಮತ್ತು ಹೆಚ್ಚು ನೀರು ಕುಡಿಯಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.