Monday, December 23, 2024

Latest Posts

ಮುಸ್ಲಿಮರ ಬಗ್ಗೆ ಆ ಪೊಲೀಸರಿಗೆ ಎಷ್ಟು ದ್ವೇಷವಿದೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ: ಓವೈಸಿ

- Advertisement -

National Political News: ದೆಹಲಿಯ ರಸ್ತೆಯಲ್ಲಿ ನಮಾಜ್ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಪೊಲೀಸರು ಒದ್ದು ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಸದ ಅಸಾದುದ್ದಿನ್ ಓವೈಸಿ ಮಾತನಾಡಿದ್ದು, ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸದೆ ಎಂದು ಹೇಳಿದ್ದಾರೆ.

ನಾನು ಆ ವೀಡಿಯೋವನ್ನು ನೋಡಿದ್ದೇನೆ. ಮುಸ್ಲಿಮರ ಬಗ್ಗೆ ಆ ಪೊಲೀಸರಿಗೆ ಎಷ್ಟು ದ್ವೇಷವಿದೆ ಅನ್ನೋದು ಗೊತ್ತಾಗುತ್ತದೆ. ಆತ ಮುಸ್ಲಿಂರನ್ನು ಎಷ್ಟು ದ್ವೇಷಿಸುತ್ತಾನೆಂದು ಗೊತ್ತಾಗುತ್ತದೆ. ಈ ದೇಶದಲ್ಲಿ ಮುಸ್ಲಿಂಮರಿಗೆ ಎಷ್ಟು ಘನತೆ ಗೌರವವಿದೆ ಅನ್ನೋದು ತೋರಿಸುತ್ತದೆ. ಹೀಗೆ ಒದೆಯುವುದು ಹಿಂಸೆ ಮಾಡುವ ವ್ಯಕ್ತಿ ಯಾವ ಕುಟುಂಬಕ್ಕೆ ಸೇರಿದವರು ಅಂತಾ ನಾನು ಪ್ರಧಾನಿ ಮೋದಿಯವರಲ್ಲಿ ಕೇಳಬಯಸುತ್ತೇನೆ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ಉತ್ತರದೆಹಲಿಯ, ಇಂದ್ರಲೋಕ ಏರಿಯಾದಲ್ಲಿ ರಸ್ತೆಯ ಮೇಲೆ ನಮಾಜಿಗೆ ಕುಳಿತಿದ್ದವರ ಮೇಲೆ ಪೊಲೀಸ್ ಹಲ್ಲೆ ನಡೆಸಿದ್ದ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿತ್ತು. ಇದರ ವಿರುದ್ಧ ಹಲವರು ಪ್ರತಿಭಟನೆ ನಡೆಸಿದ್ದರು. ಕೆಲ ದಿನಗಳಲ್ಲೇ ಹಲ್ಲೆ ನಡೆಸಿದ್ದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು.

ಆಂಧ್ರಪ್ರದೇಶ ಲೋಕಸಭೆ ಚುನಾವಣೆಗೆ ಬಿಜೆಪಿ, ಟಿಡಿಪಿ,ಜೆಎಸ್‌ಪಿ ಮೈತ್ರಿ ಸ್ಪರ್ಧೆ

ಜಪಾನ್‌ನಲ್ಲಿ ಅಮೀರ್ ಖಾನ್ ಮಗ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ ಪಾರ್ಟಿ..

ನಿವೃತ್ತಿ ಬಗ್ಗೆ ಮಾತನಾಡಿದ ಕ್ರಿಕೇಟಿಗ ರೋಹಿತ್ ಶರ್ಮಾ..

- Advertisement -

Latest Posts

Don't Miss