ಡಿ.ಕೆ. ಶಿವಕುಮಾರ್ ಬಂಧನದ ಸಂದರ್ಭದಲ್ಲಿ ಪ್ರತಿಭಟನೆ ನೆಪದಲ್ಲಿ ಸಾರ್ವಜನಿಕ ಆಸ್ತಿ, ವಯಕ್ತಿಕ ಆಸ್ತಿ ನಷ್ಟ ಮಾಡಿದವರಿಂದಲೇ ಆದ ನಷ್ಟ ವಸೂಲಿ ಮಾಡುವ ಸಲುವಾಗಿ ಹೈಕೋರ್ಟ್ ಆದೇಶದ ಮೇರೆಗೆ ನಿವೃತ್ತ ನ್ಯಾಯಾಧೀಶರನ್ನು ಕ್ಲೇಮು ಕಮಿಷನರ್ ಆಗಿ ನೇಮಕ ಮಾಡಿ, ರಾಮನಗರ ಜಿಲ್ಲೆ ಪೊಲೀಸ್ ಭವನದ 3 ನೇ ಮಹಡಿಯಲ್ಲಿ (ಪೊಲೀಸ್ ಅಧೀಕ್ಷಕರ ಕಚೇರಿ) ಸಾರ್ವಜನಿಕರಿಗೆ ನಷ್ಟದ ಬಗ್ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಡಿ.ಕೆ.ಶಿವಕುಮಾರ್ ಅರೆಸ್ಟ್ ಆಗಿದ್ದ ವೇಳೆ, ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದ ಸಮಯದಲ್ಲಿ, ಹಲವು ಸಾರ್ವಜನಿಕ ಆಸ್ತಿಗೆ ಹಾನಿಯಾಗಿತ್ತು. ಈ ನಷ್ಟವನ್ನು ಪ್ರತಿಭಟನಾಕಾರರೇ ತುಂಬಿ ಕೊಡಬೇಕು ಎಂದು ಆರ್‌ಟಿಐ ಕಾರ್ಯಕರ್ತ ರವಿಕುಮಾರ್ ಎಂಬುವವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಪ್ರತಿಭಟನೆ ನಡೆದ 5 ದಿನಗಳಲ್ಲಿ ಇಡೀ ರಾಜ್ಯದಲ್ಲಿ 82 ಕೋಟಿ ನಷ್ಟವಾಗಿದ್ದು, ಕನಕ ಪುರದಲ್ಲಿ ಅತೀ ಹೆಚ್ಚು ನಷ್ಟವಾಗಿದೆ ಎಂದು ಹೇಳಲಾಗಿತ್ತು.
ಈ ನಷ್ಟವನ್ನ ತುಂಬಿಕೊಡಲು ನಿವೃತ್ತ ನ್ಯಾಯಾಧೀಶರನ್ನು ನೇಮಿಸಿ, ಅವರ ಸಮ್ಮುಖದಲ್ಲಿ ಆಸ್ತಿಯ ವಿವರ ಸಲ್ಲಿಸುವಂತೆ, ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಲಾಗಿತ್ತು. ಅದರಂತೆ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಮೂರನೇಯ ಮಹಡಿಯಲ್ಲಿ ನ್ಯಾಯಾಧಿಶರಾದ ಬೆನಕನಹಳ್ಳಿಯವರಿಗೆ ಕೊಠಡಿ ನೀಡಲಾಗಿದ್ದು, ಇಲ್ಲಿಯೇ ಪೋಸ್ಟರ್ ಅಂಟಿಸಿ, ಕ್ಲೇಮ್ ಕಮಿಷನ್ ಹೆಸರಿನಲ್ಲಿ ಪೋಸ್ಟರ್ ಅಂಟಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಈ ಪ್ರತಿಭಟನೆಯಲ್ಲಿ ನಷ್ಟ ಅನುಭವಿಸಿದವರು, ಲಿಖಿತವಾಗಿ, ಆಡಿಯೋ, ವೀಡಿಯೋ ಮೂಲಕವೂ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು 60 ದಿನ ಸಮಯವಿದ್ದು, ಸರ್ಕಾರಿ ರಜಾ ದಿನ ಹೊರತು ಪಡಿಸಿ, ಉಳಿದ ದಿನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ಅರ್ಜಿ ಸಲ್ಲಿಸಬಹುದಾಗಿದೆ.