- Advertisement -
Dharwad News: ಧಾರವಾಡ. ನವಲಗುಂದ: ಇತಿಹಾಸ ಪ್ರಸಿದ್ಧ ಶ್ರೀ ರಾಮಲಿಂಗೇಶ್ವರ ಕಾಮದೇವರ ದರ್ಶನಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ದಂಡು ಆಗಮಿಸುತ್ತಿದ್ದು, ಸರದಿ ಸಾಲಿನಲ್ಲಿ ಭಕ್ತರು ದರ್ಶನಕ್ಕೆ ನಿಂತಿರುವ ದೃಶ್ಯ ಕಾಣಬಹುದು.
ರಾಜ್ಯ ಸೇರಿದಂತೆ ಬೇರೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ತಮ್ಮ ಹರಕೆಗಳನ್ನು ಕಟ್ಟಲು ಮತ್ತು ತೀರಿಸಲು ಇಲ್ಲಿ ಬರುತ್ತಾರೆ. ಕಾಮದೇವರ ದರ್ಶನಕ್ಕೆ ಯಾವುದೇ ರೀತಿಯಲ್ಲಿ ಅಡಚಣೆ ಉಂಟಾಗದ ರೀತಿಯಲ್ಲಿ ಕಮೀಟಿಯಿಂದ ಅಚ್ಚುಕಟ್ಟಾಗಿ ದೇವರ ದರ್ಶನದ ವ್ಯವಸ್ಥೆ ಇದೆ, ಇನ್ನು ಬಂದಂತ ಭಕ್ತರಿಗೆ ತೊಂದರೆಯಾಗದ ರೀತಿಯಲ್ಲಿ ಪ್ರಸಾದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಇನ್ನೂ ಈ ಬಾರಿ ವಿಶೇಷ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಜನದಟ್ಟಣೆ ನಿಯಂತ್ರಣ ಆಗುವಲ್ಲಿ ಸಹಕಾರಿಯಾಗಿ. ಇದರೊಂದಿಗೆ ಪೊಲೀಸ್ ಸಿಬ್ಬಂದಿ ನಿರಂತರವಾಗಿ ಕಾರ್ಯ ಪ್ರವೃತ್ತರಾಗಿದ್ದು ಬಂದ ಭಕ್ತರು ಕಾಮದೇವರ ದರ್ಶನ ಪಡೆದು ತೆರಳುತ್ತಿದ್ದಾರೆ.
- Advertisement -