Wednesday, June 12, 2024

Latest Posts

ಶಾಲಾ ಕಾಲೇಜುಗಳಿಗೆ ಬೆದರಿಕೆ ಕರೆಗಳು ಬರುತ್ತಿರುವುದು ಗಂಭೀರ ವಿಚಾರ: ಪ್ರಮೋದ್ ಮುತಾಲಿಕ್

- Advertisement -

Dharwad News: ಧಾರವಾಡ: ಬೆಂಗಳೂರಿನ ಶಾಲೆಗಳಿಗೆ ಇಸ್ಲಾಂಗೆ ಮತಾಂತರ ಆಗಲು ಮೇಲ್ ಬಂದ ವಿಚಾರದ ಬಗ್ಗೆ ಧಾರವಾಡದಲ್ಲಿ ಪ್ರತಿಕ್ರಿಯಿಸಿದ, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, 17 ಶಾಲೆಗಳಿಗೆ ಇಸ್ಮಾಮಿಕ್ ಸಂಘಟನೆಯಿಂದ ಮತಾಂತರ ಆಗುವ ಬಗ್ಗೆ ಮೇಲ್ ಬಂದಿದೆ.

ಮೇಲ್‌ ನಲ್ಲಿ ಮತಾಂತರ ಆಗಿ ಇಲ್ಲಾ ಸಾಯಲು ತಯಾರಾಗಿ ಎಂದಿದೆ. ಇಡೀ ಹಿಂದೂಗಳಿಗೆ ಮೇಲ್ ಮೂಲಕ ಆಹ್ವಾನ‌ ನೀಡಿದ್ದಾರೆ. ಈ ದೇಶವನ್ನು ಇಸ್ಲಾಂ ಮಾಡುತ್ತೇವೆ, ಖಡ್ಗದ ಆಧಾರದ ಮೇಲೆ ಮತಾಂತರ ಮಾಡುತ್ತೇವೆ ಎಂಬ ಸಂದೇಶ ಇದೆ. ಮುಜಾಹಿದ್ದಿನ್ ಎನ್ನುವ ಹಿಂದೂ ವಿರೋಧಿಯಿಂದ ಈ‌ ಮೇಲ್ ಬಂದಿದೆ. ಇದು ದೊಡ್ಡ ಆತಂಕದ ಸಂಗತಿ, ಇದಕ್ಕೆ ಈ ಕಾಂಗ್ರೆಸ್ ಸರ್ಕಾರ ಕಾರಣ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನ ತುಷ್ಟಿಕರಣ ಪರಿಣಾಮದಿಂದ ಮುಸ್ಲಿಮರು ನಮ್ಮದೇ ರಾಜ್ಯ ಎನ್ನುವ ಭ್ರಮೆಯಲ್ಲಿ ಇದ್ದಾರೆ. ಶಾಲಾ ಕಾಲೇಜ್ ಗಳಿಗೆ ಬೆದರಿಕೆ ಕರೆಗಳು ಬರುತ್ತಿರುವುದು ಗಂಭೀರ ವಿಚಾರ. ಜನರ ಸುರಕ್ಷತೆ ವಿಚಾರದಲ್ಲಿ ಯೋಚನೆ‌ ಮಾಡಬೇಕು. ಕೇವಲ ಅಧಿಕಾರಿ, ಕುರ್ಚಿ, ದುಡ್ಡು, ಭ್ರಷ್ಟಾಚಾರ ಅಷ್ಟೇ ಅಲ್ಲ. ಏಳು ಕೋಟಿ ಜನರ ದೃಷ್ಟಿಯಿಂದ ಯೋಚನೆ ಮಾಡಬೇಕು. ಈ ಮೇಲ್ ಎಲ್ಲಿಂದ, ಯಾರಿಂದ ಬಂದಿದೆ‌‌ ಎಂಬುದನ್ನು ಪತ್ತೆ ಹಚ್ಚಬೇಕು. ಇದೊಂದು ಭಯೋತ್ಪಾದನೆಗೆ ಸಂಭಂಧ ಪಟ್ಟಿದ್ದು. ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಘಟನೆ ಆಗುವ ಕೃತ್ಯ ಬಗ್ಗೆ ಈ‌ ಮೇಲ್ ನಲ್ಲಿ ಸೂಚನೆ ಇದೆ. ಸರ್ಕಾರ ಇಂತಹವರನ್ನು ಹದ್ದು ಬಸ್ತಲ್ಲಿ ಇಡಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೇ, ಇವರನ್ನು ಒದ್ದು ಒಳಗೆ ಹಾಕಬೇಕು. ಮೂರ್ತಿ ಉಪಾಸಕರನ್ನು ಕೊಲ್ಲಬೇಕೆಂದು ಕುರಾನ್ ನಲ್ಲಿ ಬರೆದಿದೆ. ಇದಕ್ಕೆ ಪುಷ್ಟಿಯಾಗಿ ಈ ಮೇಲ್ ಕಳಿಸಿದ್ದಾರೆ. ಇದಕ್ಕೆ ನಾನು ವಿರೋಧಿಸುತ್ತೇನೆ ಎಂದಿದ್ದಾರೆ.

‘ಭೈರತಿ ಸುರೇಶ್ ಅವರಿಗೆ ನಾನು ಯಾರು ಅಂತ ತಿಳಿಯಬೇಕಿಲ್ಲ ಜನರಿಗೆ ತಿಳಿದಿದೆ’

ಬೆಂಗಳೂರಿನ 35 ಶಾಲೆಗಳಿಗೆ ಬಾಂಬ್ ಬೆದರಿಕೆ ಕರೆ: ಇಮೇಲ್‌ನಲ್ಲಿತ್ತು ಮುಜಾಹಿದ್ದೀನ್ ಹೆಸರು

‘ಘನ ನ್ಯಾಯಾಲಯವನ್ನ ಕಾಮೆಂಟ್ ಮಾಡುವುದಕ್ಕೆ ಯಾರಿಗೂ ಅರ್ಹತೆ ಇಲ್ಲ’

- Advertisement -

Latest Posts

Don't Miss