ತುಮಕೂರಿನಲ್ಲಿ ಮೂರು ತಿಂಗಳ ಗರ್ಭಿಣಿ ಅನುಮಾನಾಸ್ಪದ ಸಾವು

Tumakuru News: ತುಮಕೂರು: ತುಮಕೂರಿನಲ್ಲಿ ಮೂರು ತಿಂಗಳ ಗರ್ಭಿಣಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ತಿಪಟೂರು ಮೂಡಲ್ ಕೊಪ್ಪಲು ಗ್ರಾಮದಲ್ಲಿ ಈ ದುರಂತ ಸಂಭವಿಸಿದ್ದು, ಪತಿ ಮತ್ತು ಮಾವ ಕೊಲೆ ಮಾಡಿ, ನೇಣು ಹಾಕಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಚಿಕ್ಕನಾಯಕನಹಳ್ಳಿ ತಾಲೂಕು ಬೊಮ್ಮೇನಹಳ್ಳಿಯ ಸೌಮ್ಯ (22 ) ಜೊತೆ ಪ್ರಸಾದ್ (40) ಮದುವೆಯಾಗಿತ್ತು. ಕೌಟುಂಬಿಕ ಕಲಹ ಹಿನ್ನಲೆ ದಂಪತಿ ನಡುವೆ ರಾಜಿ ಪಂಚಾಯತಿಗಳು ಮಾಡಲಾಗಿತ್ತು. ಆದರೆ ಕಳೆದ ರಾತ್ರಿ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಸೌಮ್ಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ತಿಪಟೂರಿನ ಶವಗಾರದಲ್ಲಿ ಸೌಮ್ಯಳ ಶವ ರವಾನೆ ಮಾಡಲಾಗಿದ್ದು, ನೋಣವಿನ ಕೆರೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ನಾಯಿ ತಿನ್ನದ ಬಿಸ್ಕೀಟನ್ನು ಕಾಂಗ್ರೆಸ್ ಕಾರ್ಯಕರ್ತನಿಗೆ ನೀಡಿದ ರಾಹುಲ್ ಗಾಂಧಿ

ಮದುವೆಯಾಗಲಿದ್ದಾರಾ ಸ್ಪೋರ್ಟ್ಸ್ ಸ್ಟಾರ್ಸ್ ಪಿವಿ ಸಿಂಧು- ನೀರಜ್ ಛೋಪ್ರಾ..?

ಚಿಲಿಯಲಿ ಸಂಭವಿಸಿದ ಕಾಡ್ಗಿಚ್ಚಿಗೆ 100ಕ್ಕೂ ಹೆಚ್ಚು ಜನ ಬಲಿ, 200ಕ್ಕೂ ಹೆಚ್ಚು ಜನರು ಕಾಣೆ

About The Author