Thursday, June 13, 2024

Latest Posts

ಸ್ಮಾರ್ಟ್ ಫೋನ್ ಇಲ್ಲದೆನೇ ವೀಡಿಯೋ ಮಾಡಿ ಫೇಮಸ್ ಆಗಿದ್ರಂತೆ ಅಲ್ಲು ರಘು..!

- Advertisement -

ಸಾಮಾಜಿಕ ಜಾಲತಾಣದಲ್ಲಿ ವೀಡಿಯೋಗಳನ್ನ ಮಾಡಿ ಫೇಮಸ್ ಆಗಿದ್ದ ಅಲ್ಲು ರಘು ಮತ್ತು ಸುಶ್ಮಿತಾ ಕರ್ನಾಟಕ ಟಿವಿಯೊಂದಿಗೆ ಮಾತನಾಡಿ, ತಾವು ಟಿಕ್‌ಟಾಕ್ ಸ್ಟಾರ್ ಆಗಿದ್ದು ಹೇಗೆ ಅನ್ನೋ ಬಗ್ಗೆ ಹೇಳಿದ್ದಾರೆ. ಇವರ ಕಥೆ ಎಷ್ಟು ಇಂಟರೆಸ್ಟಿಂಗ್ ಆಗಿದೆ ಅಂದ್ರೆ ಇವರ ಬಳಿ ಸ್ಮಾರ್ಟ್ ಫೋನ್ ಇಲ್ಲದಿರುವ ಸಮಯದಲ್ಲೂ ಇವರು ವೀಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ, ಫೇಮಸ್ ಆಗಿದ್ರಂತೆ.

ಅಲ್ಲು ರಘು ಅವರ ತಂಗಿಯ ಫ್ರೆಂಡ್ ಬಳಿ ಸ್ಮಾರ್ಟ್ ಫೋನ್ ಇತ್ತಂತೆ. ಆಗಷ್ಟೇ ಸ್ಮಾರ್ಟ್ ಫೋನ್ ಮಾರ್ಕೆಟ್‌ಗೆ ಬಂದ ಕಾರಣ, ಅಲ್ಲು ರಘು ಬಳಿ ಸ್ಮಾರ್ಟ್ ಫೋನ್ ಇರಲಿಲ್ಲ. ಇನ್ನು ತಂಗಿಯ ಫ್ರೆಂಡ್ ಮನೆಯಲ್ಲಿ ಆಕೆ ಸ್ಮಾರ್ಟ್ ಫೋನ್ ಬಳಸೋದು ಗೊತ್ತಿಲ್ಲದ ಕಾರಣ, ಆಕೆ ಫೋನನ್ನ ರಘು ಮನೆಯಲ್ಲೇ ಬಿಟ್ಟು ಹೋಗ್ತಿದ್ರು. ಹಾಗಾಗಿ ರಘು ಅವರ ಪರ್ಮಿಶನ್ ತೆಗೆದುಕೊಂಡು, ರಘು ಅದ್ರಲ್ಲಿ ಟಿಕ್‌ ಟಾಕ್ ವೀಡಿಯೋ ಮಾಡಿ, ಅದನ್ನ ಸೋಶಿಯಲ್ ಮೀಡಿಯಾಗೆ ಹರಿಬಿಟ್ಟಿದ್ರು.

ಇದರೊಂದಿಗೆ ಟ್ರೋಲ್ ಪೇಜ್‌ಗಳಲ್ಲೂ ಅಪ್ಲೋಡ್ ಮಾಡಿ, ಚೆನ್ನಾಗಿ ವೀಡಿಯೋ ಮಾಡಿದ್ದೀನಿ ಅಂತಾ ಹೇಳಿದ್ರೂ, ಯಾರೂ ಇವರ ವೀಡಿಯೋಗೆ ಅವಕಾಶ ನೀಡಿಲ್ಲವಂತೆ. ಆದ್ರೆ ಇಂದು ಅಲ್ಲು ರಘು ಮತ್ತು ಸುಶ್ಮಿತಾ ಅವ್ರನ್ನ ಲಕ್ಷಾಂತರ ಜನ ಫಾಲೋ ಮಾಡ್ತಾರೆ. ಇನ್ನು ಸುಶ್ಮಿತಾ ಮತ್ತು ರಘು ಹೇಗೆ ಮೀಟ್ ಆದ್ರೂ ಅಂದ್ರೆ. ಇವ್ರದ್ದೊಂದು ಗ್ರೂಪ್ ಇತ್ತಂತೆ. ಅದ್ರಲ್ಲಿ ರಘು ರವಿಚಂದ್ರನ್ ಮತ್ತು ಶಿವಣ್ಣನ ಸಾಂಗ್ ವೀಡಿಯೋ ಮಾಡಿ ಹಾಕ್ತಿದ್ರಂತೆ.

ಸುಶ್ಮಿತಾ ರವಿಚಂದ್ರನ್ ಫ್ಯಾನ್ ಆಗಿರೋದ್ರಿಂದ ಅಲ್ಲು ಮಾಡೋ ವೀಡಿಯೋ ಅವ್ರಿಗೆ ಇಷ್ಟವಾಯ್ತು. ಹಾಗಾಗಿ ಅಲ್ಲು ರಘು ವೀಡಿಯೋನಾ ಸುಶ್ಮಿತಾ ಕೊಲ್ಯಾಬೋರೇಟ್ ಮಾಡಿ, ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡ್ತಿದ್ರು. ನಂತರ ಇಬ್ಬರೂ ಸೇರಿ, ವೀಡಿಯೋ ಕೋಲ್ಯಾಬ್ ಮಾಡಿ ಅಪ್ಲೋಡ್ ಮಾಡ್ತಿದ್ರು. ಇವರಿಬ್ಬರ ಕಾಂಬಿನೇಶನ್ ಜನರಿಗೆ ಇಷ್ಟವಾಗಿ, ಇವರು ಕನ್ನಡದ ಫೇಮಸ್ ಟಿಕ್‌ಟಾಕ್ ಸ್ಟಾರ್ಸ್ ಆದ್ರು.

ಇನ್ನು ಮೊದ ಮೊದಲು ಅಲ್ಲು ಮತ್ತು ಸುಶ್ಮಿತಾ ಡಬ್‌ಸ್ಮ್ಯಾಶ್ ಮಾಡಿದ್ರೆ, ಒಂದೆರಡು ಲೈಕ್ಸ್ ಮತ್ತು 10 ರಿಂದ 12 ವೀವ್ಸ್ ಆಗ್ತಿತ್ತು. ಆದ್ರೆ ಸುಶ್ಮಿತಾ ಮತ್ತು ರಘು ತಾಳ್ಮೆಯಿಂದ ತಮ್ಮ ಕೆಲಸವನ್ನು ತಾವು ಮಾಡಿಕೊಂಡು ಹೋದರು. ಮೊದಲು ಸುಶ್ಮಿತಾಗೆ 10 ಸಾವಿರ ಫಾಲೋವರ್ಸ್ ಆದ್ರು. ಅದಾದ ಬಳಿಕ ಈಗ ಇಬ್ಬರಿಗೂ 4 ಲಕ್ಷಕ್ಕೂ ಮೀರಿದ ಫಾಲೋವರ್ಸ್ ಇದ್ದಾರೆ.

- Advertisement -

Latest Posts

Don't Miss