Mysuru News: ಹುಣಸೂರು: ನಾಗರಹೊಳೆ ಹುಲಿ ಸುರಕ್ಷಿತ ಪ್ರದೇಶದ ನಾಗರಹೊಳೆ ವಲಯದಲ್ಲಿ ಹುಲಿ-ಚಿರತೆ ನಡುವಿನ ಕಾದಾಟದಲ್ಲಿ 8 ರಿಂದ 9ವರ್ಷದ ಒಂದು ಹೆಣ್ಣು ಚಿರತೆ ಸಾವನ್ನಪ್ಪಿದೆ.
ನಾಗರಹೊಳೆ ಉದ್ಯಾನದ ನಾಗರಹೊಳೆ ಶಾಖೆಯ ದೊಡ್ಡಹಳ್ಳಿ ಗಸ್ಸಿನ ದೊಡ್ಡಹಳ್ಳಿ ರಸ್ತೆ ಬಳಿ ೮ರಿಂದ 9ವರ್ಷ ಪ್ರಾಯದ ಹೆಣ್ಣು ಚಿರತೆಯು ಹುಲಿ ದಾಳಿಯಿಂದ ಮೃತಪಟ್ಟಿರುವ ಕಳೆಬರಹ ಗಸ್ತಿನಲ್ಲಿದ್ದ ಸಿಬ್ಬಂದಿಗಳಿಗೆ ಗೋಚರಿಸಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ನಾಗರಹೊಳೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ, ಎ.ಸಿ.ಎಫ್. ಕೆ.ಪಿ.ಗೋಪಾಲ್, ಆರ್.ಎಫ್.ಓ.ಮಹಮ್ಮದ್ ಜೀಷಾನ್ ಭೇಟಿ ಇತ್ತು ಪರಿಶೀಲಿಸಿದರು.
ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರಾಧಿಕಾರ ನಾಮನಿರ್ದೇಶಿತರಾದ ಕೆ.ಎನ್.ಮಾದಪ್ಪ, ನಾಮನಿರ್ದೇಶಿತ ಮುಖ್ಯ ವನ್ಯಜೀವಿ ಪರಿಪಾಲಕರ ಡಾ.ಸಿ.ಕೆ.ತಮ್ಮಯ್ಯ, ಸಮ್ಮುಖದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ನಿಗಧಿಪಡಿಸಿರುವ ಎಸ್.ಓ.ಪಿ.ನಿಯಮದಂತೆ ನಾಗರಹೊಳೆ ಪಶು ವೈದ್ಯಾಧಿಕಾರಿಯಾದ ಆನೆ ಪ್ರಭಾರಕ ಡಾ.ಎಚ್.ರಮೇಶ್, ಕೊಡಗಿನ ಕಾನೂರು ಪಶುಆಸ್ಪತ್ರೆ ವೈದ್ಯಾಧಿಕಾರಿ ಡಾ.ಚಂದ್ರಶೇಖರ್ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಚಿರತೆಯ ಅಂತ್ಯಕ್ರಿಯೆ ನಡೆಸಲಾಯಿತೆಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.
ಒಡಹುಟ್ಟಿದ ತಮ್ಮನನ್ನೇ ಕೊಚ್ಚಿ ಕೊಲೆಗೈದ ಅಣ್ಣ: ಕೊಡಲಿ ಸಮೇತ ಠಾಣೆಗೆ ಬಂದು ಶರಣಾಗತಿ