Sunday, December 22, 2024

Latest Posts

Tiger: ದನ ಮೇಯಿಸಲು ಹೋದ ರೈತ ಹುಲಿಗೆ ಆಹಾರವಾದ..!

- Advertisement -

ಹುಣಸೂರು: ನಾಗರಹೊಳೆ ಉದ್ಯಾನದ ಮುದ್ದನಹಳ್ಳಿ ಅರಣ್ಯ ಪ್ರದೇಶದ ಬಫರ್ ಜೋನ್ ನಲ್ಲಿ ಜಾನುವಾರು ಮೇಯಿಸಲು ತೆರಳಿದ್ದ ರೈತರೊಬ್ಬರನ್ನು ಹುಲಿ ಬಲಿ ಪಡೆದಿರುವ ಘಟನೆ ಸೋಮವಾರ ನಡೆದಿದೆ. ನಾಗರಹೊಳೆ ಉದ್ಯಾನದಂಚಿನ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಉಡುವೆಪುರದ ದಿ.ದಾಸೇಗೌಡರ ಪುತ್ರ ಗಣೇಶ್(58) ಮೃತ ರೈತ, ಇವರಿಗೆ ಪತ್ನಿ, ಮೂವರು ಗಂಡು ಮಕ್ಕಳಿದ್ದಾರೆ.

ಗಣೇಶ್ ಉಡುವೆಪುರದ ಪಕ್ಕದಲ್ಲೇ ಇರುವ ಮುದ್ದನಹಳ್ಳಿ ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸಲು ಹೋಗಿದ್ದರು. ಸಂಜೆ ಜಾನುವಾರುಗಳು ಮನೆಗೆ ವಾಪಸ್ ಆದರೂ ಗಣೇಶ್ ಬಂದಿರಲಿಲ್ಲ. ಗಾಬರಿಗೊಂಡ ಮನೆಯವರು ತತ್ ಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅವರೊಟ್ಟಿಗೆ ಅರಣ್ಯದಲ್ಲಿ ಹುಡುಕಾಟ ನಡೆಸಿದ ವೇಳೆ ಮುದ್ದನಹಳ್ಳಿ ಅರಣ್ಯದ ಬಫರ್ ಏರಿಯಾದ ಪ್ರದೇಶದ ಕೆರೆ ಬಳಿ ಗಣೇಶ್‌ರ ಶವ ಪತ್ತೆಯಾಗಿದೆ.

ಮಾತಿನ ಚಕಮಕಿ: ವಿಷಯ ತಿಳಿದ ಗ್ರಾಮಸ್ಥರು ಸ್ಥಳಕ್ಕೆ ದೌಡಾಯಿಸಿದರು. ಶವವನ್ನು ಊರಿಗೆ ಕೊಂಡೊಯ್ಯಲು ಅನುವಾಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಹಿರಿಯ ಅಧಿಕಾರಿಗಳು ಬರುವವರೆಗೆ ಶವವನ್ನು ಕೊಂಡೊಯ್ಯಲು ಬಿಡದಿದ್ದಾಗ ಗ್ರಾಮಸ್ಥರು ಹಾಗೂ ಅರಣ್ಯ ಸಿಬಂದಿ ನಡುವೆ ಮಾತಿನ ಚಕಮಕಿ ನಡೆಯಿತು.

ವಿಷಯ ತಿಳಿದು ಸ್ಥಳಕ್ಕೆ ಹುಲಿ ಯೋಜನೆ ನಿರ್ದೇಶಕ ಹರ್ಷಕುಮಾರ್‌ ಚಿಕ್ಕನರಗುಂದ, ಡಿವೈಎಸ್‌ಪಿ ಮಹೇಶ್, ಇನ್ಸ್ಪೆಕ್ಟರ್ ಸಿ.ವಿ.ರವಿ, ಎ.ಸಿ.ಎಫ್.ದಯಾನಂದ್, ಆರ್.ಎಫ್.ಓ. ಸುಬ್ರಹ್ಮಣ್ಯ ಮತ್ತಿತರೆ ಅಧಿಕಾರಿಗಳು ಭೇಟಿ ಇತ್ತು ಪರಿಶೀಲಿಸಿದ್ದು, ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು.

ರೈತನ ಮೇಲೆ ದಾಳಿ ನಡೆಸಿದ್ದ ಹುಲಿ.!

ಕಳೆದ ಸೆ.21 ರಂದು ಇದೇ ಅರಣ್ಯ ವ್ಯಾಪ್ತಿಯಲ್ಲಿ ಮುದ್ದನಹಳ್ಳಿಯ ರಮೇಶ್ ಎಂಬುವವರ ಮೇಲೆ ಹುಲಿ ದಾಳಿ ನಡೆಸಿ ತೀವ್ರಗಾಯಗೊಂಡು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆಯೇ ಮತ್ತೆ ರೈತನ ಮೇಲೆ ದಾಳಿ ನಡೆಸಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದೇ ಹುಲಿ ಇರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದೇ ಅರಣ್ಯ ಪ್ರದೇಶದಲ್ಲಿ ಮೂರು ವರ್ಷದ ಹಿಂದೆ ಅಯ್ಯನ ಕೆರೆ ಹಾಡಿಯ ಆದಿವಾಸಿ ಗಣೇಶ್ ಎಂಬಾತನನ್ನು ಬಹಿರ್ದೆಸೆಗೆ ತೆರಳಿದ್ದ ವೇಳೆ ಕೊಂದು ತಿಂದು ಹಾಕಿ ರುಂಡ ಪತ್ತೆಯಾಗಿದ್ದನ್ನು ಸ್ಮರಿಸಬಹುದು

ಹತ್ತು ದಿನಗಳ ಹಿಂದೆ ರಮೇಶ್ ಮೇಲೆ ಹುಲಿ ದಾಳಿ ನಡೆಸಿದ ನಂತರ ಆ ಭಾಗದಲ್ಲಿ ರೈತರು ಅರಣ್ಯ ಪ್ರವೇಶಿಸದಂತೆ, ಜಾನುವಾರುಗಳನ್ನು ಬಿಡದಂತೆ ಸೂಚನೆ ನೀಡಿದ್ದರೂ ಕೇಳದ ರೈತರು ಅರಣ್ಯ ಪ್ರವೇಶಿಸುತ್ತಿರುವುದು ಇಲಾಖೆಗೆ ತಲೆಬೇನೆಯಾಗಿದೆ ಎಂದು ಡಿಸಿಎಫ್ ಹರ್ಷಕುಮಾರ್‌ ಚಿಕ್ಕನರಗುಂದ ಹೇಳಿದ್ದಾರೆ.

ವಿಷಯ ತಿಳಿದ ಶಾಸಕ ಜಿ.ಡಿ.ಹರೀಶ್ ಗೌಡ ಭೇಟಿ ನೀಡಿ ಕುಟುಂಬಕ್ಕೆ ವೈಯಕ್ತಿಕವಾಗಿ 50 ಸಾವಿರ ರೂ.ನೀಡಿ ಸಾಂತ್ವನ ಹೇಳಿದರು. ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಡಿಸಿಎಫ್‌ ಅಧಿಕಾರಿಗೆ ಸೂಚಿಸಿದರು.

Kuruba community: ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಲಕ್ಷ್ಮಣ್ ರಾವ್ ಆಗ್ರಹ..!

ಆಕ್ಷೇಪಾರ್ಹ ಪದ ಬಳಕೆ ಆರೋಪ: ಕ್ಷಮೆ ಕೇಳಿದ ಶಾಸಕ ಎಸ್ ಕೆ ಸುರೇಶ್..!

Aravind bellad : ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ದೇಶ ದ್ರೋಹಿಗಳಿಗೆ ಬಲ ಬಂದಿದೆ..!

- Advertisement -

Latest Posts

Don't Miss