Thursday, November 30, 2023

Latest Posts

Kuruba community: ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಲಕ್ಷ್ಮಣ್ ರಾವ್ ಆಗ್ರಹ..!

- Advertisement -

ಚಿಕ್ಕೋಡಿ ; ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ಸಿಎಂ ಆಪ್ತ ಮತ್ತು ಚಿಕ್ಕೋಡಿ ಸಂಘಟನಾತ್ಮಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಅವರು ಕುರಿಬ ಸಮಾಜವನ್ನು ಎಸ್ ಟಿ ಸಮುದಾಯಕ್ಕೆ ಸೇರಿಸಬೇಕು ಎಂದು ಸಿದ್ದರಾಮಯ್ಯ ಮುಖಾಂತರ ಕೆಂದ್ರಕ್ಕೆ ಬೇಡಿಕೆ ಇಟ್ಟಿದ್ದಾರೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಕುರುಬ ಸಮುದಾಯದ ಎಸ್‌ಟಿ ಮೀಸಲಾತಿ ಹೋರಾಟ ಮತ್ತೆ ಮುನ್ನಲೆಗೆ ಬರುತ್ತಿದ್ದು ಎಸ್‌ಟಿ ಮೀಸಲಾತಿ ಜೊತೆ ಲೋಕಸಭೆ ಟಿಕೆಟ್‌ಗೂ ಬೆಳಗಾವಿಯ ಕುರುಬ ಸಮಾಜದ ಕಾಂಗ್ರೆಸ್ ನಾಯಕರ ಡಿಮ್ಯಾಂಡ್ ಮಾಡುತ್ತಿದ್ದಾರೆ.

ಬೆಳಗಾವಿಯಲ್ಲಿ ಅಕ್ಟೋಬರ್ 3 ರಂದು ಅಖಿಲ ಭಾರತ ರಾಷ್ಟ್ರೀಯ ಕುರುಬ ಸಮುದಾಯದ ಮಹಾ ಅಧಿವೇಶನ ನಡೆಯಲಿದ್ದು ಅಧಿವೇಶನದಲ್ಲಿ ಕುರುಬ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡಲು ಕೇಂದ್ರಕ್ಕೆ ಆಗ್ರಹ ಮಾಡಲಿದ್ದಾರೆ.

ಕುರುಬ ಸಮುದಾಯಕ್ಕೆ ಎಸ್ ಟಿ ಮೀಸಲಾತಿ ಕುರಿತು ಕುಲಶಾಸ್ತ್ರೀಯ ಅಧ್ಯಯನ ವರದಿ ಕೇಂದ್ರಕ್ಕೆ ಸಲ್ಲಿಸಲಾಗಿದೆ. ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿ ಕಳಿಸಿದ್ದಾರೆ ಕೇಂದ್ರ ಸರ್ಕಾರ ಜಾರಿ ಮಾಡಬೇಕೆಂಬುದು ನಮ್ಮ ಮೊದಲನೇ ಬೇಡಿಕೆ ಎಂದಿದ್ದಾರೆ.

ಕಳೆದ 50 ವರ್ಷಗಳ ರಾಜಕೀಯ ರಂಗದಲ್ಲಿ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ. ಲೋಕಸಭೆ, ರಾಜ್ಯಸಭೆ, ವಿಧಾನ ಪರಿಷತ್‌ನಲ್ಲಿ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ಸಿಕ್ಕಿಲ್ಲ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕುರುಬ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಬೆಳಗಾವಿ, ಚಿಕ್ಕೋಡಿ ಎರಡು ಲೋಕಸಭಾ ಕ್ಷೇತ್ರ ಪೈಕಿ ಒಂದನ್ನ ಕುರುಬ ಸಮುದಾಯಕ್ಕೆ ನೀಡಬೇಕು. ಅ.3ರಂದು ನಡೆಯುವ ಮಹಾಅಧಿವೇಶನದಲ್ಲಿ ಈ ಕುರಿತು ಒತ್ತಾಯ ಮಾಡ್ತೇವೆ.

ಈಗಾಗಲೇ ಕುಲ ಶಾಸ್ತ್ರೀಯ ಅಧ್ಯಯನ ವರದಿ ಬಸವರಾಜ ಬೊಮ್ಮಾಯಿ ಪಡೆದಿದ್ರು ಹೊಸ ಸರ್ಕಾರ ಬಂದ ಬಳಿಕ ಸಂಪುಟ ಒಪ್ಪಿಗೆ ಪಡೆದು ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರ ಇದನ್ನು ಜಾರಿ ಮಾಡಬೇಕೆಂದು ಸಮಾವೇಶ ಮೂಲಕ ಒತ್ತಾಯ ಮಾಡ್ತೀವಿ ಎಂದು ಬೆಳಗಾವಿ ಜಿಲ್ಲೆ ಚಿಕ್ಕೋಡಿಯಲ್ಲಿ ಲಕ್ಷ್ಮಣರಾವ್ ಚಿಂಗಳೆ ಹೇಳಿಕೆ ನೀಡಿದ್ದಾರೆ.

Shetter: ಪಕ್ಷ ಬಿಟ್ಟು ಹೋದ ಶೆಟ್ಟರ್ ಅವರಿವರನ್ನು ಕರೆತರುತ್ತೇನೆ ಅಂತ ಓಡಾಡುತ್ತಿದ್ದಾರೆ.!

I.N.D.I.A :ಈ ಒಕ್ಕೂಟದಲ್ಲಿ ಇರುವವರೆಲ್ಲ ಸನಾತನ ಧರ್ಮದ ವಿರೋಧಿಗಳು..!

ಕಲ್ಲು ತೂರಾಟದಲ್ಲಿ ಕಾಂಗ್ರೆಸ್ ನ ಕೈವಾಡವಿದೆ ಎಂಬ ಈಶ್​ವರಪ್ಪ ಹೇಳಿಕೆಗೆ ಟಾಂಗ್ ಕೊಟ್ಟ ಸವದಿ

- Advertisement -

Latest Posts

Don't Miss