Tumakuru:ತಿಪಟೂರು: ನಗರದ ಬಿ ಎಚ್ ರಸ್ತೆ ಹುಳಿಯಾರು ರಸ್ತೆ ಹಾಗೂ ಬಸ್ ನಿಲ್ದಾಣಗಳ ರಸ್ತೆಗಳಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ಅಂಗಡಿಗಳನ್ನು ನಗರಸಭೆ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಚರಣೆ ಮೂಲಕ ತೆರವು ಗೊಳಿಸುತ್ತಿರುವುದು ಸ್ವಾಗತ. ಆದರೆ ಇಂತಹ ಕಾನೂನು ಎಲ್ಲರಿಗೂ ಒಂದೇ ಎಂಬಂತೆ ವರ್ತಿಸಬೇಕಾದ ಅಧಿಕಾರಿಗಳು ಇಂದು ದಿವ್ಯ ಮೌನಕ್ಕೆ ಒಳಗಾಗಿರುವುದು ಆಶ್ಚರ್ಯಕ್ಕೆ ಎಡೆ ಮಾಡಿಕೊಟ್ಟಿದೆ.
ತಿಪಟೂರು ನಗರದ ಸಂತೆಪೇಟೆ ಎಲೆ ಆಸರ ದೊಡ್ಡಪೇಟೆ ಹಾಗೂ ಈ ಭಾಗದಲ್ಲಿ ಬರುವ ಪ್ರಮುಖ ವವ್ಯಾಪಾರ ಕೇಂದ್ರಗಳಲ್ಲಿ ಅಂಗಡಿ ಮಾಲೀಕರು ಅತಿಕ್ರಮವಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ರಸ್ತೆಗೆ ತಂದು ಪಾದಾಚಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯನ್ನು ಉಂಟು ಮಾಡುತ್ತಿದ್ದರು ಕೂಡ, ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ತಾವೊಬ್ಬ ತಾವು ಬಲಾಡ್ಯರ ಪರ ಎಂಬುದಾಗಿ ಬಿಂಬಿಸಿಕೊಳ್ಳುತಿದೆ ಎಂದು ನಗರಸಭೆ ಮಾಜಿ ನಗರಸಭಾ ಸದಸ್ಯೆ ಪದ್ಮ ತಿಮ್ಮೇಗೌಡ ಆಕ್ರೋಶ ವ್ಯಕ್ತಪಡಿಸಿದರು.
ಈ ಭಾಗವು ನಗರಸಭಾ ಮಾಜಿ ಅಧ್ಯಕ್ಷರ ವಾರ್ಡ್ ಆಗಿರುವುದರಿಂದ ಯಾವುದೇ ಅಧಿಕಾರಿಗಳು ಇತ್ತ ಸುಳಿಯದೇ ಕೇವಲ ಇಲ್ಲದವರ ಮೇಲೆ ದರ್ಪ ತೋರಿಸಿ ಬಲಾಢ್ಯಾರ ಮೇಲೆ ದರ್ಪ ತೋರಿಸದೆ ಅವರ ರಕ್ಷಣೆ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಮಾಜಿ ನಗರಸಭಾ ಅಧ್ಯಕ್ಷರ ಒತ್ತಡದ ಮೇಲೆ ಇಲ್ಲಿ ಯಾವುದೇ ರೀತಿಯ ಒತ್ತುವರಿ ತೆರವು ಕಾರ್ಯಾಚರಣೆ ಗೊಳಿಸದೆ ಇರುವುದು ನಗರಸಭಾ ಅಧಿಕಾರಿಗಳ ದೌರ್ಬಲ್ಯಕ್ಕೆ ಹಿಡಿದ ಕೈಗನ್ನಡಿ ಎಂದರೆ ತಪ್ಪಾಗಲಾರದು.
ಈ ಕೂಡಲೇ ನಗರಸಭಾ ಅಧಿಕಾರಿಗಳು ಯಾವುದೇ ಮಾಜಿ ನಗರಸಭಾ ಅಧ್ಯಕ್ಷರ ಮುಲಾಜಿಗೆ ಒಳಗಾಗದೆ ಈ ಭಾಗಗಳಲ್ಲಿ ತೆರವು ಕಾರ್ಯಚರಣೆಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.




