Wednesday, April 2, 2025

Latest Posts

ಚಳಿಗಾಲದ ಸೀಸನಲ್‌ ಫ್ರೂಟ್ ಆಗಿರುವ ಕಿತ್ತಳೆ ಹಣ್ಣಿನ ಸೇವನೆಯಿಂದ ಎಷ್ಟೆಲ್ಲ ಆರೋಗ್ಯ ಲಾಭವಿದೆ ಗೊತ್ತಾ?

- Advertisement -

Health tips: ಚಳಿಗಾಲ ಶುರುವಾಗಿದೆ. ನಿಮಗೆ ರಸ್ತೆಯಲ್ಲಿ ಎಲ್ಲಿ ನೋಡಿದರಲ್ಲಿ ಗಾಡಿತುಂಬ ಕಿತ್ತಳೆ ಹಣ್ಣಿನ ಮಾರಾಟಗಾರರೇ ಕಾಣಸಿಗುತ್ತಾರೆ. ಏಕೆಂದರೆ, ಕಿತ್ತಳೆ ಚಳಿಗಾಲದ ಸೀಸನಲ್ ಫ್ರೂಟ್‌. ಇಂದು ನಾವು ಕಿತ್ತಳೆ ಹಣ್ಣಿನ ಸೇವನೆಯಿಂದ ಏನು ಲಾಭ ಅಂತಾ ಹೇಳಲಿದ್ದೇವೆ.

ಕಿತ್ತಳೆ ಹಣ್ಣಿನ ಸೇವನೆ ಮಾಡುವ ಮುನ್ನ ನಾವು ತಿಳಿದಿರಬೇಕಾದ ವಿಷಯ ಅಂದ್ರೆ, ಕಿತ್ತಳೆ ಹಣ್ಣನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಅಷ್ಟೇ ಸೇವಿಸಬೇಕು. ಸೂರ್ಯೋದಯದ ಬಳಿಕ ತಂಪಾದ ವಸ್ತುವಿನ ಸೇವನೆ ಮಾಡೋದು, ಆರೋಗ್ಯಕ್ಕೆ ಅಷ್ಟು ಉತ್ತಮವಲ್ಲ.

ದೇಹದಲ್ಲಿ ಉಷ್ಣ ಹೆಚ್ಚಾಗುವುದು, ಎದೆ ಉರಿ, ಹೊಟ್ಟೆ ಉರಿ, ಹೊಟ್ಟೆ ನೋವು ಇತ್ಯಾದಿ ಸಮಸ್ಯೆ ಇದ್ದಲ್ಲಿ, ಕಿತ್ತಳೆ ಹಣ್ಣನ್ನು ತಿಂದು ನೀವು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಏಕೆಂದರೆ, ಇದರಲ್ಲಿ ದೇಹವನ್ನು ತಂಪಾಗಿಸುವ ಗುಣವಿದ್ದು, ಇದೇ ಗುಣದಿಂದ ಹೊಟ್ಟೆ ಉರಿ, ಎದೆ ಉರಿ, ಎಲ್ಲವೂ ಮಾಯವಾಗುತ್ತದೆ.

ಇನ್ನು ನಿಮ್ಮ ಸ್ಕಿನ್ ಚೆನ್ನಾಗಿರಬೇಕು, ನಿಮ್ಮ ಕೂದಲು ಹೆಚ್ಚು ಉದುರಬಾರದು ಅಂದ್ರೆ ಕಿತ್ತಳೆ ಹಣ್ಣು ತಿನ್ನಿ. ಚಳಿಗಾಲದಲ್ಲಿ ತ್ವಚೆ ಒಣಗುತ್ತದೆ. ಕೂದಲು ಹೆಚ್ಚು ಉದುರುತ್ತದೆ. ಹೀಗಾಗಬಾರದು, ನಿಮ್ಮ ತ್ವಚೆ ಒಳಗಿನಿಂದಲೇ ಚೆನ್ನಾಗಿರಬೇಕು, ಕೂದಲ ಬುಡ ಗಟ್ಟಿಯಾಗಿರಬೇಕು ಅಂದ್ರೆ ನೀವು ಪ್ರತಿದಿನ ಒಂದರಿಂದ ಎರಡು ಕಿತ್ತಳೆ ಹಣ್ಣಿನ ಸೇವನೆ ಮಾಡಬೇಕು.

ಇನ್ನು ಮೂತ್ರ ವಿಸರ್ಜನೆಗೆ ತೊಂದರೆಯಾಗುತ್ತಿದೆ. ಸರಿಯಾಗಿ ಮೂತ್ರ ವಿಸರ್ಜನೆಯಾಗುತ್ತಿಲ್ಲ. ಉರಿಮೂತ್ರ ಸಮಸ್ಯೆ ಇದೆ ಎಂದಾದಲ್ಲಿ, ಕಿತ್ತಳೆ ಹಣ್ಣಿನ ಸೇವನೆ ಮಾಡಿ, ಇದರಿಂದ ಕೇವಲ ಒಂದೇ ದಿನದಲ್ಲಿ ನಿಮ್ಮ ಸಮಸ್ಯೆ ಕಡಿಮೆಯಾಗಲು ಶುರುವಾಗುತ್ತದೆ.

ಆದರೆ ನೀವು ಕಿತ್ತಳೆ ಹಣ್ಣು ತಿಂದು, ಚೆನ್ನಾಗಿ ಮಸಾಲೆ ಪದಾರ್ಥ, ಖಾರಾ ಪದಾರ್ಥ ತಿಂದರೆ, ನಿಮ್ಮ ದೇಹದ ಉಷ್ಣತೆ ಪೂರ್ತಿಯಾಗಿ ಕಡಿಮೆಯಾಗುವುದಿಲ್ಲ. ಹಾಗಾಗಿ ಮಸಾಲೆ ಪದಾರ್ಥ ಸೇವನೆ ಕಡಿಮೆ ಮಾಡಿ, ಕಿತ್ತಳೆ ಹಣ್ಣಿನ ಸೇವನೆ ಮಾಡಿ. ದಿನಕ್ಕೊಂದು ಕಿತ್ತಳೆ ಹಣ್ಣು ತಿಂದರೆ ಸಾಕು. ಇನ್ನು ನಿಮಗೆ ಕಿತ್ತಳೆ ಹಣ್ಣು ತಿಂದರೆ, ನಿಮಗೆ ಅಲರ್ಜಿ ಎಂದಾದಲ್ಲಿ ವೈದ್ಯರ ಬಳಿ ಪರೀಕ್ಷಿಸಿ, ಬಳಿಕ ಸೇವಿಸಿ.

- Advertisement -

Latest Posts

Don't Miss