Bidar News: ಬೀದರ್: ಬೀದರ್ ಜಿಲ್ಲೆಯ ಹುಲಸೂರು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯಕ್ಕೆ ಬೇಸತ್ತ ಜನರು, ಖುದ್ದು ಚರಂಡಿ ಸ್ವಚ್ಛ ಮಾಡಿದ ಘಟನೆ ನಡೆದಿದೆ.
ಈ ಗ್ರಾಮದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲವಾಗಿದ್ದು, ನೀರು ನಿಂತಲ್ಲೇ ನಿಂತು ದುರ್ವಾಸನೆ ಬೀರಿ ಮಲೇರಿಯಾ, ಕಾಲರಾ ರೋಗಗಳು ಹೆಚ್ಚಾಗಲು ಕಾರಣವಾಗಿದೆ. ಈ ಕಾರಣಕ್ಕೆ ಇಲ್ಲಿನ ಜನ ಹಲವಾರು ಬಾರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದ್ದಾರೆ. ಆದರೂ ಕೂಡ ಗ್ರಾಮ ಪಂಚಾಯಿತಿಯವರು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸುಮ್ಮನಿದ್ದಾರೆ. ಹಾಗಾಗಿ ವಾರ್ಡ್ ನಂಬರ್ 4ರ ಜನತೆ ಖುದ್ದು ಚರಂಡಿ ಸ್ವಚ್ಛ ಮಾಡುವ ಮೂಲಕ, ಗ್ರಾಮ ಪಂಚಾಯಿತಿಯವ ನಿರ್ಲಕ್ಷ್ಯಕ್ಕೆ ಉತ್ತರಿಸಿದೆ.
ಕಠಿಣ ಪರಿಶ್ರಮವೊಂದೇ ಯಶಸ್ಸಿನ ಕೀಲಿಕೈ : ವಿದ್ಯಾರ್ಥಿಗಳಿಗೆ ಸಚಿವ ಕೃಷ್ಣಭೈರೇಗೌಡ ಕಿವಿಮಾತು
ರಶೀದಿ ನೀಡದೆ ಲಂಚದ ರೂಪದಲ್ಲಿ ಹಣ ಪಡೆದ ಆರೋಪದ ಮೇಲೆ ಉತ್ತರ ಸಂಚಾರ ಠಾಣೆ ಎಎಸ್‌ಐ (ASI) ಅಮಾನತು
ಗೃಹಲಕ್ಷ್ಮಿ ಸರ್ವರ್ ಬಂದ್ ಆರೋಪ: ಮಹಿಳಾ ಸಿಬ್ಬಂದಿ, ಸೆಕ್ಯುರಿಟಿ ಗಾರ್ಡ್ ಮೇಲೆ ಸಾರ್ವಜನಿಕರಿಂದ ಹಲ್ಲೆ