Health Tips: ಎಷ್ಟೋ ತಾಯಂದಿರು, ನಮ್ಮ ಮಗುವಿಗೆ 2 ವರ್ಷ ತುಂಬಿದರೂ ಮಗು ಇನ್ನು ಅಮ್ಮ ಅಂತ ಹೇಳಲೂ ಕಷ್ಟಪಡುತ್ತಿದೆ ಎನ್ನುತ್ತಾರೆ. ಅಲ್ಲದೇ, ಮಗುವಿಗೆ ಮೂರು ವರ್ಷ ತುಂಬಿದರು, ಮಾತನಾಡಲು ಕಷ್ಟ ಪಡುವ ಎಷ್ಟೋ ಉದಾಹರಣೆಗಳಿದೆ. ಹಾಗಾದ್ರೆ ಯಾಕೆ ಮಗುವಿಗೆ ವರ್ಷ ತುಂಬಿದರೂ ಮಾತನಾಡಲು ಸಾಧ್ಯವಾಗುವುದಿಲ್ಲ..? ಇದಕ್ಕೆ ಕಾರಣವಾದ್ರೂ ಏನು ಅಂತಾ ತಿಳಿಯೋಣ ಬನ್ನಿ..
ಮೊದಲನೇಯದಾಗಿ ಮಗುವಿಗೆ ತೊದಲುವ ಸಮಸ್ಯೆ ಬರಲು ಕಾರಣ ಅಥವಾ ಮಾತು ಬೇಗ ಬಾರದಿರಲು ಕಾರಣ, ಗರ್ಭಾವಸ್ಥೆಯಲ್ಲಿ ತಾಯಿ ಮಾಡುವ ತಪ್ಪು. ತಾಯಿ ಗರ್ಭಿಣಿಯಾಗಿದ್ದಾಗ, ಆರೋಗ್ಯಕರ ಆಹಾರ ಸೇವಿಸದೇ ಇದ್ದಲ್ಲಿ, ಹೆಚ್ಚು ಜಂಕ್ ಫುಡ್ ಸೇವನೆ ಮಾಡಿದ್ದಲ್ಲಿ ಅಥವಾ ಉಪವಾಸವಿದ್ದಲ್ಲಿ, ಅಥವಾ ಊಟ ಸರಿಯಾದ ಸಮಯಕ್ಕೆ ಮಾಡದಿದ್ದಲ್ಲಿ, ಮಗುವಿಗೆ ಸರಿಯಾದ ಪೌಷ್ಠಿಕಾಂಶ ಸಿಗುವುದಿಲ್ಲ.
ಹಾಗಾಗಿ ಮಗುವಿನಲ್ಲಿ ಹಲವು ಸಮಸ್ಯೆ ಕಾಣಿಸುತ್ತದೆ. ಮಗುವಿನ ನರದಲ್ಲಿ ಸಮಸ್ಯೆ ಕಾಣಿಸಿಕೊಂಡಾಗ, ಮಗುವಿಗೆ ಮಾತನಾಡಲು ಕಷ್ಟವಾಗುತ್ತದೆ. ಹಾಗಾಗಿ ಮಗುವಿಗೆ ವರ್ಷ ತುಂಬಿದ ಬಳಿಕ, ನರಗಳಿಗೆ ಶಕ್ತಿ ನೀಡುವುದರ ಜೊತೆಗೆ, ಮಗುವಿನ ದೈಹಿಕ ಬೆಳವಣಿಗೆ ಕಡೆ ಗಮನ ಕೊಡಬೇಕು. ಆಗ ಮಗುವಿಗೆ ಮಾತಿನ ಸಮಸ್ಯೆ ಸರಿಯಾಗುತ್ತದೆ ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.