Sunday, February 9, 2025

Latest Posts

Tirupati News: ತಿರುಪತಿ ಲಡ್ಡು ಕೌಂಟರ್‌ನಲ್ಲಿ ಕಾಣಿಸಿಕೊಂಡ ಬೆಂಕಿ: ಸ್ವಲ್ಪದರಲ್ಲಿ ಬಚಾವ್

- Advertisement -

Tirupati News: ತಿರುಪತಿಯಲ್ಲಿ ಕೆಲ ದಿನಗಳ ಹಿಂದಷ್ಟೇ ವೈಕುಂಠ ಏಕಾದಶಿ ದಿನ ಸ್ಪೆಶಲ್ ದರ್ಶನಕ್ಕಾಗಿ ಟಿಕೇಟ್ ಪಡೆಯುತ್ತಿದ್ದ ವೇಳೆ ಕಾಲ್ತುಳಿತ ಉಂಟಾಗಿ, ಕೆಲವರು ಮೃತಪಟ್ಟಿದ್ದರು. ಮತ್ತೆ ಕೆಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಇದೀಗ ತಿರುಪತಿ ಲಡ್ಡು ಕೌಂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ನಿರಂತರ ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು, ಕೆಲ ಸಮಯದಲ್ಲೇ ಅದನ್ನು ನಿಯಂತ್ರಣಕ್ಕೆ ತರಲಾಗಿದೆ. ಭಕ್ತರೆಲ್ಲ ಪ್ರಸಾದ ಪಡೆಯುತ್ತಿದ್ದ ಸಂದರ್ಭದಲ್ಲೇ ಈ ಘಟನೆ ನಡೆದಿದೆ. ಕಂಪ್ಯೂಟರ್ ಮೂಲಕ ಶಾರ್ಟ್ ಸರ್ಕ್ಯೂಟ್ ಆದ ಕಾರಣ, ಲಡ್ಡು ಪ್ರಸಾದದ ಕೌಂಟರ್‌ನಲ್ಲಿ ಬೆಂಕಿ ಹೊತ್ತಿಕೊಂಡಿತ್ತು.

ಘಟನೆ ನಡೆಯುತ್ತಿದ್ದಂತೆ, ಪ್ರಸಾದ ಕೊಳ್ಳಲು ಬಂದವರು, ಸ್ಥಳದಿಂದ ಓಡಿ ಹೋಗಿದ್ದಾರೆ. ಆದರೆ ಬೆಂಕಿ ಹಬ್ಬುವ ಮುನ್ನ, ಅದನ್ನು ನಿಯಂತ್ರಣಕ್ಕೆ ತರಲಾಗಿದೆ. ಶುಕ್ರವಾರದಿಂದ 10 ದಿನಗಳ ಕಾಲ ವೈಕುಂಠ ದ್ವಾರ ಸರ್ವದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಟಿಕೇಟ್ ತೆಗೆದುಕೊಳ್ಳುವಾಗ, ಕೆಲ ಭಕ್ತರು ಎಡವಟ್ಟು ಮಾಡಿದ ಕಾರಣ, ಟಿಕೇಟ್ ಕೌಂಟರ್ ಬಳಿ ನೂಕುನುಗ್ಗಲು ಉಂಟಾಗಿದೆ. ಈ ವೇಳೆ ಕಾಲ್ತುಳಿತ ಉಂಟಾಗಿ ಹಲವರಿಗೆ ಗಾಯವಾಗಿ, ಆಸ್ಪತ್ರೆ ಸೇರಿದ್ದು, 7 ಮಂದಿ ಮೃತಪಟ್ಟಿದ್ದಾರೆ.

- Advertisement -

Latest Posts

Don't Miss