Thursday, November 21, 2024

Latest Posts

ತಿರುಪತಿ ತಿರುಮಲ ದೇವಸ್ಥಾನದಿಂದ 300 ಮಂದಿ ಹಿಂದೂಯೇತರ ಉದ್ಯೋಗಿಗಳ ವಜಾ

- Advertisement -

Tirupati News: ತಿರುಪತಿ ತಿರುಮಲ ದೇವಸ್ಥಾನದಲ್ಲಿ ನೀಡಲಾಗುವ ಲಡ್ಡು ಪ್ರಸಾದದಲ್ಲಿ ದನದ ಕೊಬ್ಬು ಇರುವ ಬಗ್ಗೆ ಸುದ್ದಿಯಾಗಿ, ತಿರುಮಲದಲ್ಲಿ ಕೆಲಸ ಮಾಡುವ ಹಿಂದೂಯೇತರ ಉದ್ಯೋಗಿಗಳನ್ನು ತೆಗೆದು ಹಾಕಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ಇದೀಗ ಆ ನಿರ್ಧಾರವನ್ನು ಟಿಟಿಡಿ ಮಾಡಿದ್ದು, 300ಕ್ಕೂ ಹೆಚ್ಚು ಹಿಂದೂಯೇತರ ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ.

ಈ ಬಗ್ಗೆ ಚೇರ್‌ಮೆನ್ ಆಗಿರುವ ಬಿ.ಆರ್. ನಾಯ್ಡು ಆದೇಶ ನೀಡಿದ್ದು, ಹಿಂದೂಗಳ ದೇವಸ್ಥಾನದಲ್ಲಿ ಹಿಂದೂಯೇತರರಿಗೆ ಕೆಲಸ ನೀಡುವುದು ಸಮ್ಮತವಲ್ಲ. ಹಿಂದೂ ದೇವರ ಮೇಲೆ ನಂಬಿಕೆ ಇಲ್ಲದವರು, ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಕೆಲಸ ಮಾಡುವುದಿಲ್ಲ ಎಂದಿದ್ದಾರೆ.

ಇಲ್ಲಿ ಸುಮಾರು 7 ಸಾವಿರ ಖಾಯಂ ಉದ್ಯೋಗಿಗಳಿದ್ದಾರೆ. ಅದರಲ್ಲಿ ಇದೀಗ 300 ಮಂದಿಗೆ ಕೆಲಸದಿಂದ ತೆಗೆದು ಹಾಕಬೇಕು ಎಂದು ಟಿಟಿಡಿ ಆದೇಶಿಸಿದೆ. ಜೊತೆಗೆ ತಾವೇ ನಿವೃತ್ತಿ ತೆಗೆದುಕೊಳ್ಳಬೇಕು. ಅಥವಾ ಇಲಾಖೆಯ ಬೇರೆ ಕೆಲಸಕ್ಕೆ ಸೇರಬೇಕು ಎಂದು ಟಿಟಿಡಿ ಆದೇಶಿಸಿದೆ.

ಜಗನ್ ಮೋಹನ್ ರೆಡ್ಡಿ ಅಧಿಕಾರದಲ್ಲಿದ್ದಾಗ, ಲಡ್ಡುವಿಗೆ ಮೀನಿನ ಎಣ್ಣೆ, ದನದ ಕೊಬ್ಬು ಬಳಸಿ, ಭಕ್ತರ ನಂಬಿಕೆಗೆ ಧಕ್ಕೆ ತರಲಾಗಿದೆ ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಈ ಬಗ್ಗೆ ತನಿಖೆ ನಡೆದಾಗ, ಆರೋಪ ಸತ್ಯವೆಂದು ಸಾಬೀತಾಗಿದೆ. ಅಲ್ಲದೇ ಚಂದ್ರಬಾಬು ನಾಯ್ದು ಸಿಎಂ ಆದಾಗಿಂದಲೂ, ದೇವಸ್ಥಾನದಲ್ಲಿ ಸ್ಟ್ರಿಕ್ಟ್ ಆಗಿರುವ ನಿರ್ಧಾರಗಳು ತೆಗೆದುಕೊಳ್ಳಲಾಗುತ್ತಿದೆ.

- Advertisement -

Latest Posts

Don't Miss