Friday, July 4, 2025

Latest Posts

ಪ್ರಶಾಂತ್ ನೀಲ್ ಹಾಗೂ ರಾಮ್ ಚರಣ್ ಚಿತ್ರಕ್ಕೆ ‘ಫ್ರಾಂಚೈಸ್’ ಎಂಬ ಟೈಟಲ್.

- Advertisement -

ಕೆ,ಜಿ,ಎಫ್ ಚಾಪ್ಟರ್ -1 ಸಿನಿಮಾದ ಬಹುದೊಡ್ಡ ಸಕ್ಸೆಸ್ ನ ನಂತರ, ಪ್ರಶಾಂತ್ ನೀಲ್ ಅವರೊಟ್ಟಿಗೆ ಸಿನಿಮಾ ಮಾಡಲು ಅನೇಕ ಸ್ಟಾರ್ ಗಳು ಬೇಡಿಕೆ ಇಟ್ಟಿದ್ದರು. ಆದರೆ ಯಾರೊಂದಿಗೂ ಅವರು ಸಿನಿಮಾ ಮಾಡುವುದು ಖಚಿತವಾಗಿರಲಿಲ್ಲ. ನಂತರ ಕೆ,ಜಿ,ಎಫ್ ಚಾಪ್ಟರ್ -2 ಕೆಲಸಗಳೆಲ್ಲ ಮುಗಿಸಿ, ರಿಲೀಸ್ ದಿನಾಂಕವನ್ನು ಅಂತಿಮ ಗೊಳಿಸಿದ್ದ ನೀಲ್, ಡಾರ್ಲಿಂಗ್ ಪ್ರಭಾಸ್ ಜೊತೆ ‘ಸಲಾರ್’ ಸಿನಿಮಾ ಘೋಷಿಸಿ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು.

ಇದೆಲ್ಲದರ ಜೊತೆ ಕೆಲದಿನಗಳ ಹಿಂದೆ ರಾಮ್ ಚರಣ್ ಅವರನ್ನು ಭೇಟಿ ಮಾಡಿದ್ದ ಪ್ರಶಾಂತ್ ನೀಲ್, ಅವರೊಂದಿಗೆ ಸಿನಿಮಾ ಮಾಡುತ್ತಾರೆ ಎನ್ನುವ ಮಾತುಗಳು ಬಾರಿ ಜೋರಾಗೆ ಕೇಳುತ್ತಿದ್ದವು. ಯಾಕೆಂದರೆ ಚಿರಂಜೀವಿ ಹಾಗೂ ರಾಮ್ ಚರಣ್ ಅವರ ಜೊತೆಗಿನ ಫೋಟೋವನ್ನು ಪ್ರಶಾಂತ್ ನೀಲ್ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ರಾಮ್ ಚರಣ್ ತೇಜ ಕೂಡ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಹಾಗೂ ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಪ್ರಶಾಂತ್ ನೀಲ್, “ನಾನು ಲೆಜೆಂಡ್ ಚಿರಂಜೀವಿ ಅವರನ್ನು ಭೇಟಿ ಮಾಡಿದೆ. ಸುಂದರ ಸಂಜೆಯಂದು ಆತಿಥ್ಯ ನೀಡಿದ್ದಕ್ಕೆ ಧನ್ಯವಾದಗಳು, ಚಿರಂಜೀವಿ ನೋಡುವ ಮೂಲಕ ನನ್ನ ಬಾಲ್ಯದ ಕನಸು ನನಸಾಯಿತು” ಎಂದು ಹೇಳಿದ್ದಾರೆ. ಈ ಭೇಟಿ ನೋಡಿದರೆ ಮೆಗಾಸ್ಟಾರ್ ಚಿರಂಜೀವಿ, ರಾಮ್ ಚರಣ್ ತೇಜ ಜೊತೆಗೆ ಪ್ರಶಾಂತ್ ನೀಲ್ ಸಿನಿಮಾ ಮಾಡಲಿದ್ದಾರಾ ಎಂಬ ಕುತೂಹಲ ಶುರುವಾಗಿತ್ತು, ಅಷ್ಟೇ ಅಲ್ಲದೆ ಅವರು ಆರ್‌ಆರ್‌ಆರ್ ಸಿನಿಮಾದ ಡಿ,ವಿ,ವಿ ಪ್ರೊಡಕ್ಷನ್ ಹೌಸ್‌ನ್ನು ಟ್ಯಾಗ್ ಮಾಡಿದ್ದರು, ಇದು ಪ್ರಶಾಂತ್ ಹಾಗೆ ಚರಣ್ ಕಾಂಬಿನೇಷನ್ ಸಿನಿಮಾ ಬರುವುದು ಬಹುತೇಕ ಖಚಿತ ಎನ್ನಲಾಗುತ್ತಿತ್ತು.

ಈಗ ಇದಕ್ಕೆ ಸಂಬಂಧಿಸಿದಂತೆ ನೀಲ್ ಈಗಾಗಲೇ ರಾಮ್ ಚರಣ್ ಮತ್ತು ಚಿರಂಜೀವಿಯವರನ್ನು ಭೇಟಿಮಾಡಿ ಕಥೆಯ ಬಗ್ಗೆ ಚರ್ಚೆ ಮಾಡಿದ್ದಾರೆ. ಹಾಗೆ ಕೆಲಮಾಹಿತಿಗಳು ಹೊರಬಿದ್ದಿದ್ದು, ರಾಮ್ ಚರಣ್, ಪ್ರಶಾಂತ್ ಜೊತೆ ಮಾಡಲಿರುವ ಚಿತ್ರಕ್ಕೆ ‘ ಫ್ರಾಂಚೈಸ್ ‘ ಎಂಬ ಟೈಟಲ್ ಇಟ್ಟಿದ್ದಾರೆ ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ.

ಇನ್ನೂ ಇದೆಲ್ಲದಕ್ಕೂ ಕೆಲ ತಿಂಗಳುಗಳ ಹಿಂದೆ ಜೂನಿಯರ್ NTR ಅವರನ್ನು ಭೇಟಿ ಮಾಡಿದ್ದ ನೀಲ್, ಮೇ ತಿಂಗಳಲ್ಲಿ ಅವರ ಹುಟ್ಟಿದ ದಿನದಂದು ಶುಭಕೋರಿ NTR ಅವರ 31 ಸಿನಿಮಾ ಮಾಡುವ ಸೂಚನೆ ಕೊಟ್ಟಿದ್ದರು. ಈ ವಿಷಯವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.ನೀಲ್ ಈ ಹಿಂದೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಕೂಡ ಭೇಟಿ ಮಾಡಿದ್ದರು.

ಕೆಜಿಎಫ್: ಚಾಪ್ಟರ್ 2′ ಹಾಗೂ ‘ಸಲಾರ್’ ಚಿತ್ರಗಳ ಬಳಿಕ ಜೂ. ಎನ್‌ಟಿಆರ್ ಜೊತೆಗಿನ ಚಿತ್ರಕ್ಕೆ ಪ್ರಶಾಂತ್ ನೀಲ್ ಚಾಲನೆ ನೀಡಲಿದ್ದಾರೆ ಎನ್ನುವ ವಿಷಯಗಳು ಕೇಳಿಬಂದಿವೆ. ಪ್ರಶಾಂತ್ ನೀಲ್ ಸಲಾರ್ ಸಿನಿಮಾದ ಕೆಲಸಗಳು ಮುಗಿದ ನಂತರ ಮೊದಲು ಯಾರೊಡನೆ ಸಿನಿಮಾ ಮಾಡುತ್ತಾರೆ .ಎಂಬ ಪ್ರಶ್ನೆಗಳು ಕಾಡುತ್ತಿವೆ.

ಒಟ್ಟಿನಲ್ಲಿ ಪ್ರಶಾಂತ್ ಜೊತೆ ಕೆಲಸ ಮಾಡಲು ಸ್ಟಾರ್ ನಟರು ಕೂಡ ಸರದಿಯಲ್ಲಿ ನಿಂತಿದ್ದಾರೆ ಎನ್ನಬಹುದು ಮತ್ತು ಇದೆಲ್ಲದರ ಬಗ್ಗೆ ಪ್ರಶಾಂತ್ ಅಧಿಕೃತವಾಗಿ ಮಾಹಿತಿಯನ್ನು ಯಾವಾಗ ಹೊರಹಾಕಲಿದ್ದಾರೆ ಎಂದು ಕಾದುನೋಡಬೇಕಿದೆ.

- Advertisement -

Latest Posts

Don't Miss