Political News: ಜಾತಿಗಣತಿ ಕುರಿತು ಕಾಂತರಾಜು ವರದಿ ವಿಚಾರದ ಬಗ್ಗೆ ರಾಮನಗರದಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಸರ್ಕಾರ ಇನ್ನೂ ನಾಲ್ಕು ತಿಂಗಳು ಇದನ್ನ ಸ್ಟಡಿ ಮಾಡ್ತೀವಿ ಅಂದಿದ್ದಾರೆ. ಇದು ಪಾರ್ಲಿಮೆಂಟ್ ಚುನಾವಣೆ ವರೆಗೆ ಏನೂ ಆಗಲ್ಲ. ಯಾರೂ ಗಾಬರಿ ಆಗಬೇಕಾದ ಅವಶ್ಯಕತೆ ಇಲ್ಲ. ಇವರ ಕೈಯಲ್ಲಿ ಏನೂ ಆಗಲ್ಲ. ಇದೇ ಸಿದ್ದರಾಮಯ್ಯ 2018ರಲ್ಲಿ ಕಾಂತರಾಜು ವರದಿ ಕೊಡಲು ಬಂದಾಗ ಹೆಚ್ಡಿಕೆ ಸ್ವೀಕರಿಸಿಲ್ಲ ಎಂದಿದ್ರು. ಹಾಗಿದ್ರೆ ಆಗಲೇ ವರದಿ ಸಿದ್ದವಾಗಿತ್ತಲ್ವಾ.? ಸರ್ಕಾರ ಬಂದು 6ತಿಂಗಳಾಗಿದೆ, ಇನ್ನೂ ಯಾಕೆ ವರದಿ ಸ್ವೀಕಾರ ಮಾಡಿಲ್ಲ. ಮುಂದೆ ಚರ್ಚೆ ಮಾಡೋಣ ಬಿಡಿ ಎಂದಿದ್ದಾರೆ.
ರಾಮನಗರ ಎಸಿ ಕೋರ್ಟ್ ವರ್ಗಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಇದು ಚೈಲ್ಡ್ ಇಶ್ಯೂ.! ಎಸಿ ಕೋರ್ಟ ನ್ನ ವಾರದಲ್ಲಿ ಒಂದುದಿನ ಕನಕಪುರಕ್ಕೆ ತೆಗೆದುಕೊಂಡು ಹೋಗಿದ್ದೀರಿ. ಇದನ್ನ ಇಡೀ ರಾಜ್ಯದಲ್ಲಿ ಪ್ರತಿ ತಾಲೂಕಿನಲ್ಲೂ ಒಂದೊಂದು ಎಸಿ ಕೋರ್ಟ್ ಮಾಡಿ. ಇದು ಸರ್ವಾಧಿಕಾರಿ ಧೋರಣೆಯೋ, ಅಂತಹ ತರಾತುರಿ ಏನು.? ಎಲ್ಲಾ ಪೋಡಿ ಮಾಡಿಸೋಕೆ, ಲೂಟಿ ಮಾಡೋದಕ್ಕೆ ಹೀಗೆ ಮಾಡ್ತಿದ್ದಾರೆ. ಅದೆಂತದ್ದೋ ಗ್ಲೋಬಲ್ ಸಿಟಿ ಮಾಡಲು, ಲೂಟಿ ಮಾಡೋಕೆ ಈ ಕೆಲಸ ಎಂದು ಡಿಸಿಎಂ ಡಿಕೆಶಿ ವಿರುದ್ಧ ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.
ಚನ್ನಪಟ್ಟಣದಲ್ಲಿ ಅನ್ನಭಾಗ್ಯದ ಅಕ್ಕಿ ಕಳವು ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ,
ಈ ಬಗ್ಗೆ ಆ್ಯಕ್ಚನ್ ತೆಗೆದುಕೊಳ್ಳಲ್ಲಿ. ಇದು ಕೇವಲ ಚನ್ನಪಟ್ಟಣದಲ್ಲಿ ಮಾತ್ರವಲ್ಲ, ರಾಜ್ಯದ ಹಲವೆಡೆ ನಡೆಯುತ್ತಿದೆ. ಸರ್ಕಾರ ಜವಾಬ್ದಾರಿಯಿಂದ ಕ್ರಮವಹಿಸಲಿ ಎಂದಿದ್ದಾರೆ.
ಮಂಡ್ಯಕ್ಕೆ ಮತ್ತೆ ನಿಖಿಲ್ ಸ್ಪರ್ಧೆ ವಿಚಾರದ ಬಗ್ಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಇವಾಗ ಯಾಕೆ ಅವನ ವಿಷಯ..? ಅವನ ಪಾಡಿಗೆ ಅವನು ಎಲ್ಲೋ ಇದ್ದಾನೆ. ಅವನ ಯಾಕೆ ಈ ವಿಚಾರದಲ್ಲಿ ಎಳಿತೀರಾ..? ಎಂದು ಪ್ರಶ್ನಿಸಿದ್ದಾರೆ.
‘ಅನ್ನಭಾಗ್ಯ ಅಂತೀರಿ.. ನನಗೆ ರೇಷನ್ ಕಾರ್ಡೇ ಮಾಡಿ ಕೊಡ್ತಿಲ್ಲ.. ಏನ್ ಸ್ವಾಮಿ ಇದು?’
ಡಿಸಿಎಂ ಡಿಕೆಶಿ ಸಿಬಿಐ ತನಿಖೆ ಹಿಂಪಡೆದ ಬಗ್ಗೆ ಸಚಿವ ಸಂತೋಷ್ ಲಾಡ್ ಹೇಳಿದ್ದೇನು..?
‘ಮೋದಿ ವಿರುದ್ಧ ಹೇಳಿಕೆ ನೀಡಿದಷ್ಟು, ಮೋದಿಯವರ ಮೇಲೆ ಜನಾಶೀರ್ವಾದ ಹೆಚ್ಚಾಗುತ್ತೆ’