Health Tips: ಚಟ ನಮ್ಮನ್ನು ಚಟ್ಟ ಸೇರಿಸುತ್ತದೆ ಅಂತಾ ಹೇಳಲಾಗುತ್ತದೆ. ಅದು ಸತ್ಯ ಕೂಡ, ಅಗತ್ಯಕ್ಕಿಂತ ಹೆಚ್ಚು ಧೂಮಪಾನ, ಮದ್ಯಪಾನ ಸೇವನೆ ಮಾಡುವುದು, ಅಥವಾ ಇನ್ಯಾವುದೋ ಚಟ ಏರಿಸಿಕೊಂಡವರು, ಬದುಕನ್ನು ಅರ್ಧಕ್ಕೆ ನಿಲ್ಲಿಸಿ ಹೋಗುತ್ತಾರೆ. ಹಾಾಗಾದರೆ, ತಂಬಾಕು ಮತ್ತು ಧೂಮಪಾನ ಸೇವನೆ ಹೆಚ್ಚಾದಾಗ ಏನಾಗುತ್ತದೆ ಅನ್ನೋ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
ಯಾರಿಗೆ ಮದ್ಯಪಾನ ಮತ್ತು ಧೂಮಪಾನ ಮಾಡುವ ಚಟ ಹೆಚ್ಚಾಗಿರುತ್ತದೆಯೋ, ಅಂಥವರಿಗೆ ಪಾರ್ಶ್ವ ವಾಯು ಬರುತ್ತದೆ. ಅದರಲ್ಲೂ ತಂಬಾಕನ್ನು ಹೆಚ್ಚು ಸೇವನೆ ಮಾಡುವವರಿಗೆ ಪಾರ್ಶ್ವವಾಯು ಬರುವುದು ಖಚಿತ ಅಂತಾರೆ ವೈದ್ಯರು.
ಇನ್ನು ಕಾಫಿ, ಟೀ, ಸೇವನೆ ಹೆಚ್ಚಾದರೆ, ಅಂಥಥವರಲ್ಲಿ ನರ ದೌರ್ಬಲ್ಯ ಹೆಚ್ಚಾಗುತ್ತದೆ. ಗಂಟೆಗೊಂದು ಅಥವಾ ಗಂಟೆಗೆ ಎರಡು ಬಾರಿ ಟೀ ಕುಡಿಯುವ ಅಭ್ಯಾಸ ಹಲವರಿಗಿರುತ್ತದೆ. ಅಂಥವರು ಮುಂದೆ ನರದೌರ್ಬಲ್ಯ ಸಮಸ್ಯೆ ಎದುರಿಸಬಹುದು ಅಂತಾರೆ ವೈದ್ಯರು.
ವೈದ್ಯರು ಹೇಳುವ ಪ್ರಕಾರ, ರೋಗಗಳು ಮೈಗೆ ಅಂಟಿದ ಬಳಿಕ ಪಶ್ಚಾತಾಪ ಪಡುವ ಬದಲು, ರೋಗ ಬರದಿರುವ ರೀತಿ ನೋಡಿಕೊಳ್ಳುವುದು ಉತ್ತಮ. ಹಾಗಾಗಿ ನಾವು ಆದಷ್ಟು ಕಾಫಿ, ಟೀ ಸೇವನೆ ಕಡಿಮೆ ಮಾಡುವುದು. ಮದ್ಯಪಾನ ಧೂಮಪಾನ ಸೇವನೆ ಕಡಿಮೆ ಮಾಡುತ್ತ, ತ್ಯಜಿಸಿಬಿಡುವುದು. ಮತ್ತು ಆರೋಗ್ಯಕರ ಆಹಾರ ಸೇವನೆ, ಶುದ್ಧ ಕುಡಿಯುವ ನೀರಿನ ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಅಂತಾರೆ ವೈದ್ಯರು.