ಟೊಮ್ಯಾಟೊ ರೀ… ಟೊಮ್ಯಾಟೊ…: ಹತ್ತು ರೂಪಾಯಿಗೆ ಒಂದು ಬುಟ್ಟಿ..!

Hubballi News: ಹುಬ್ಬಳ್ಳಿ: ಸಾಕಷ್ಟು ಸದ್ದು ಮಾಡಿದ್ದ ಕೆಂಪು ಸುಂದರಿ ಟೊಮ್ಯಾಟೊ ಬೆಲೆ ಹುಬ್ಬಳ್ಳಿಯ ಜನರನ್ನು ಬೇರಗಾಗುವಂತೆ ಮಾಡಿದೆ. ನೂರು ಎರಡನೂರು ರೂಪಾಯಿ ಮಾರಾಟವಾಗಿದ್ದ ಟೊಮ್ಯಾಟೊ ಈಗ ಹತ್ತು ರೂಪಾಯಿಗೆ ಬುಟ್ಟಿಯಲ್ಲಿ ಮಾರಾಟ ಮಾಡುವ ಮೂಲಕ ಮಹಿಳೆಯೊಬ್ಬಳು ಗ್ರಾಹಕರನ್ನು ಬೆರಗಾಗುವಂತೆ ಮಾಡಿದ್ದಾಳೆ.

ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಸೇಬು ಹಣ್ಣನ್ನು ಹಿಂದಿಕ್ಕಿದ್ದ ಟೊಮ್ಯಾಟೊ ಮೂರಂಕಿಯ ಬೆಲೆಯಲ್ಲಿ ಮಾರಾಟವಾಗುತ್ತಾ ಬಂದಿತ್ತು. ಆದರೆ ಹುಬ್ಬಳ್ಳಿಯ ಜನತಾ ಬಜಾರ್ ಮಾರ್ಕೆಟ್ ನಲ್ಲಿ ಮಹಿಳೆಯೊಬ್ಬಳು ಹತ್ತು ರೂಪಾಯಿಗೆ ಒಂದು ಬುಟ್ಟಿಯಲ್ಲಿ ಟೊಮ್ಯಾಟೊ ಹಣ್ಣನ್ನು ಮಾರಾಟ ಮಾಡುವ ಮೂಲಕ ಎಲ್ಲರ ಗಮನ ತನ್ನತ್ತ ಸೆಳೆಯುವಂತೆ ಮಾಡಿದ್ದಾಳೆ‌.

ಜನರು ಟೊಮ್ಯಾಟೊ ಬೆಲೆಗೆ ಸಾಕಷ್ಟು ಆತಂಕಗೊಂಡು ಮನೆಗೆ ತರಕಾರಿ ಖರೀದಿಸಲು ಚಿಂತಿಸುವಂತಾಗಿತ್ತು. ಆದರೆ ಏಕಾಏಕಿ ಟೊಮ್ಯಾಟೊ ದರ ಇಳಿಕೆಯಾಗಿದ್ದು, ಎಲ್ಲೋ ಒಂದು ಕಡೆಯಲ್ಲಿ ಗ್ರಾಹಕರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ನಿಮಗೆ ಪೆಟ್ಟಾಗಿಲ್ಲಾ ತಾನೇ..?: ಬೈಕ್ ಮೇಲಿಂದ ಬಿದ್ದ ವ್ಯಕ್ತಿಯನ್ನು ವಿಚಾರಿಸಿದ ರಾಹುಲ್‌ ಗಾಂಧಿ..

‘ಕೆಂಪಣ್ಣನವರ ಕೃಪಾಕಟಾಕ್ಷದಿಂದಲೇ ಅಧಿಕಾರಕ್ಕೆ ಬಂದಿದ್ದೀರಿ. ಈಗ ಅವರನ್ನೇ ಬೆಂಕಿಗೆ ಹಾಕಲು ಹೊರಟಿದ್ದೀರಿ’

ಭಗವಂತನನ್ನು ಪ್ರಶ್ನೆ ಮಾಡಲಾಗದು, ಆದರೆ ಸ್ಪಂದನಾ ಸಾವು ಘೋರ ಅನ್ಯಾಯ: ಡಿಸಿಎಂ ಡಿ.ಕೆ. ಶಿವಕುಮಾರ್

About The Author