Sunday, December 1, 2024

Latest Posts

New Delhi : ಸಾಲದ ಸುಳಿಯಲ್ಲಿ ದೇಶದ ಟಾಪ್ 10 ರಾಜ್ಯಗಳು: ಕರ್ನಾಟಕಕ್ಕೆ ಎಷ್ಟನೇ ಸ್ಥಾನ?

- Advertisement -

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚಿನ ಬಂಡವಾಳ ವಿನಿಯೋಗ ಮತ್ತು ಮಧ್ಯಮ ಆದಾಯದ ಬೆಳವಣಿಗೆ ನಡುವೆಯೂ ದೇಶದ ಹಲವು ರಾಜ್ಯಗಳು ಸಾಲದ ಸುಳಿಯಲ್ಲಿ ಸಿಕ್ಕಿ ವಿಲವಿಲ ಒದ್ದಾಡುತ್ತಿವೆ. ರಿಸರ್ವ್ ಬ್ಯಾಂಕ್​ ಆಫ್ ಇಂಡಿಯಾ (RBI) ಪ್ರಕಾರ 2024ರ ಮಾರ್ಚ್​ವರೆಗೆ ಭಾರತದ ಎಲ್ಲಾ ರಾಜ್ಯ ಸರ್ಕಾರಗಳ ಒಟ್ಟು ಸಾಲ ಬರೋಬ್ಬರಿ 75 ಲಕ್ಷ ಕೋಟಿಯಷ್ಟಿದೆ. 2025ರ ಮಾರ್ಚ್ ವೇಳೆಗೆ ರಾಜ್ಯಗಳ ಈ ಸಾಲ 83.31 ಲಕ್ಷ ಕೋಟಿ ರೂಪಾಯಿ ಮೀರುವ ಸಾಧ್ಯತೆಯಿದೆ.

ನಂ.1 ಸಾಲಗಾರ ರಾಜ್ಯ: ತಮಿಳುನಾಡು
ಸಾಲದ ಮೊತ್ತ: ₹8.34 ಲಕ್ಷ ಕೋಟಿ

ನಂ.2 ಸಾಲಗಾರ ರಾಜ್ಯ: ಉತ್ತರ ಪ್ರದೇಶ
ಸಾಲದ ಮೊತ್ತ: ₹7.69 ಲಕ್ಷ ಕೋಟಿ

ನಂ.3 ಸಾಲಗಾರ ರಾಜ್ಯ: ಮಹಾರಾಷ್ಟ್ರ
ಸಾಲದ ಮೊತ್ತ: ₹7.22 ಲಕ್ಷ ಕೋಟಿ

ನಂ.4 ಸಾಲಗಾರ ರಾಜ್ಯ: ಪಶ್ಚಿಮ ಬಂಗಾಳ
ಸಾಲದ ಮೊತ್ತ: ₹6.58 ಕೋಟಿ

ನಂ.5 ಸಾಲಗಾರ ರಾಜ್ಯ: ಕರ್ನಾಟಕ
ಸಾಲದ ಮೊತ್ತ: ₹5.97 ಲಕ್ಷ ಕೋಟಿ

ನಂ.6 ಸಾಲಗಾರ ರಾಜ್ಯ: ರಾಜಸ್ಥಾನ
ಸಾಲದ ಮೊತ್ತ: ₹5.62 ಲಕ್ಷ ಕೋಟಿ

ನಂ.7 ಸಾಲಗಾರ ರಾಜ್ಯ: ಆಂಧ್ರ ಪ್ರದೇಶ
ಸಾಲದ ಮೊತ್ತ: ₹4.85 ಲಕ್ಷ ಕೋಟಿ

ನಂ.8 ಸಾಲಗಾರ ರಾಜ್ಯ: ಗುಜರಾತ್
ಸಾಲದ ಮೊತ್ತ: ₹4.67 ಲಕ್ಷ ಕೋಟಿ

ನಂ.9 ಸಾಲಗಾರ ರಾಜ್ಯ: ಕೇರಳ
ಸಾಲದ ಮೊತ್ತ: ₹4.29 ಲಕ್ಷ ಕೋಟಿ

ನಂ.10 ಸಾಲಗಾರ ರಾಜ್ಯ: ಮಧ್ಯಪ್ರದೇಶ
ಸಾಲದ ಮೊತ್ತ: ₹4.18 ಲಕ್ಷ ಕೋಟಿ

ರಾಜ್ಯಗಳು ಈ ರೀತಿ ಸಾಲದ ಸುಳಿಗೆ ಸಿಲುಕಲು ಅಸಲಿ ಕಾರಣಗಳೇನು ಅನ್ನೋ ಪ್ರಶ್ನೆಗೆ ಉತ್ತರ ಆರ್ಥಿಕ ಶಿಸ್ತು ಇಲ್ಲದಿರುವುದು. ರಾಜ್ಯಗಳ ಆದಾಯ ಕಡಿಮೆಯಿದ್ದು, ವೆಚ್ಚ ಮಾತ್ರ ದುಪ್ಪಟ್ಟು ಇರುವುದೇ ಈ ರೀತಿ ಸಾಲದ ಕೂಪಕ್ಕೆ ಸಿಲುಕಲು ಮುಖ್ಯ ಕಾರಣ. ರಾಜ್ಯಗಳು ಪಡೆದ ಸಾಲದ ಹಣವನ್ನು ಸರಿಯಾಗಿ ನಿರ್ವಹಿಸದಿದ್ರೆ ಅಥವಾ ಯಾವುದೇ ಆದಾಯದ ಮೂಲವೂ ಇಲ್ಲದಿದ್ರೆ ಆ ರಾಜ್ಯದ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಹದಗೆಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ರಾಜ್ಯಗಳ ಆರ್ಥಿಕ ನಿರ್ವಹಣೆ ಹಳಿ ತಪ್ಪಲು ಕಾರಣವಾಗುವ ಸಂಗತಿ ಅಂದ್ರೆ ಉಚಿತ ಕೊಡುಗೆಗಳು. ಚುನಾವಣೆ​ಗೂ ಮುನ್ನ ಸಾಲು ಸಾಲು ಉಚಿತ ಭರವಸೆಗಳನ್ನು ಜನರಿಗೆ ಕೊಡೋ ಸರ್ಕಾರಗಳು ಗೆದ್ಮೇಲೆ ತಮ್ಮ ಕುರ್ಚಿಯನ್ನ ಉಳಿಸಿಕೊಳ್ಳಲು ಹಠಕ್ಕೆ ಬಿದ್ದು ಉಚಿತ ಯೋಜನೆಗಳಿಗೆ ಖಜಾನೆಯಲ್ಲಿ ಇರೋ ಬರೋ ಹಣವನ್ನೆಲ್ಲಾ ವ್ಯಯಿಸುತ್ತವೆ. ಫ್ರೀ ಕರೆಂಟ್​, ಉಚಿತ ನೀರು, ಉಚಿತ ಪಡಿತರ, ಉಚಿತ ಸಂಚಾರ, ನಗದು ರವಾನೆ, ಫ್ರೀ ಗ್ಯಾಸ್, ಉಚಿತ ಲ್ಯಾಪ್‌ಟಾಪ್‌, ಸ್ಮಾರ್ಟ್‌ಫೋನ್‌ ಅಥವಾ ಟಿವಿ, ನಿರುದ್ಯೋಗಿಗಳಿಗೆ ಭತ್ಯೆ ಹೀಗೆ ಸಾಲು ಸಾಲು ಫ್ರೀಬಿಸ್​ಗಳಿಗೆ ಹಣ ಹೊಂದಿಸೋ ಭರದಲ್ಲಿ ರಾಜ್ಯಗಳಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣವಾಗಿ ಹಳ್ಳ ಹಿಡಿಯುತ್ತವೆ. ಬಹುತೇಕ ರಾಜ್ಯಗಳ ಆರ್ಥಿಕ ಬಿಕ್ಕಟ್ಟಿಗೆ ಈ ಉಚಿತ ಕೊಡುಗೆಗಳೇ ಕಾರಣ ಅನ್ನೋದು ಆರ್ಥಿಕ ತಜ್ಞರ ವಾದವಾಗಿದೆ.

- Advertisement -

Latest Posts

Don't Miss