1.ವರ್ತೂರು ಪ್ರಕಾಶ್ ಮೊಬೈಲ್ ಸೀಕ್ರೆಟ್, ಗುಲಾಬ್ ಜಾಮೂನ್ ತಂದ ಸಂಕಷ್ಟ
ಫೇಸ್ ಬುಕ್ ಗೆಳತಿಯಿಂದ ಮಾಜಿ ಸಚಿವ ವರ್ತೂರು ಪ್ರಕಾಶ್ ಗೆ ಸಂಕಷ್ಟ ಎದುರಾಗಿದೆ. ಅಲ್ಲದೇ ಪೊಲೀಸರಿಂದ ಬಂಧನ ಭೀತಿ ಎದುರಿಸುತ್ತಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗುವಂತೆ ಈಗಾಗಲೇ ವರ್ತೂರು ಗೆ 2 ನೋಟೀಸ್ ಕೂಡ ಬಂದಿದ್ದು, ಇಂದು ಎಸಿಪಿ ಗೀತಾ ಎದುರು ವಿಚಾರಣೆಗೆ ಎದುರಿಸಿದ್ದಾರೆ. ವರ್ತೂರು ಪ್ರಕಾಶ್ಗೆ ಹೀಗೆ ಸಂಕಷ್ಟ ಎದುರಾಗೋಕೆ ಕಾರಣ ಆಗಿದ್ದು ಅವರ ಫೇಸ್ಬುಕ್ ಗೆಳತಿ.. 6 ತಿಂಗಳ ಹಿಂದೆ ಫೇಸ್ ಬುಕ್ ನಲ್ಲಿ ವರ್ತೂರ್ ಪ್ರಕಾಶ್ ಗೆ ಶ್ವೇತಾಗೌಡ ಎಂಬುವರ ಪರಿಚಯವಾಗಿತ್ತು. ತಾನಾಗಿಯೇ ಫ್ರೆಂಡ್ ರಿಕ್ವೆಸ್ಟ್ , ಕಳುಹಿಸಿ ಮಾಜಿ ಸಚಿವರನ್ನ ಸ್ನೇಹದ ಬಲೆಗೆ ಶ್ವೇತಾ ಬೀಳಿಸಿದ್ರು. ಆ ಬಳಿಕ ಫೇಸ್ ಬುಕ್ ಮೆಸೆಂಜರ್ ನಲ್ಲಿ ಪರಸ್ಪರ ಚಾಟಿಂಗ್ ಕೂಡ ಶುರುವಾಗಿತ್ತು.. ಶ್ವೇತಾಳ ನಂಬರ್ ಪಡೆದ ವರ್ತೂರು ಪ್ರಕಾಶ್, ಅದನ್ನು ಗುಲಾಬ್ ಜಾಮೂನ್ ಅನ್ನೋ ಹೆಸರಲ್ಲೂ ಸೇವ್ ಮಾಡಿಕೊಂಡಿದ್ರು. ಇನ್ನು ಶ್ವೇತಾಗೌಡ, ಕಮರ್ಷಿಯಲ್ ಸ್ಟ್ರೀಟ್ ನಲ್ಲಿರುವ ಶ್ರೀ ಕೃಷ್ಣ ಡೈಮಂಡ್ ಆಂಡ್ ಜ್ಯುವೆಲರಿ ಶಾಪ್ ನಲ್ಲಿ 2.42 ಕೋಟಿ ಮೌಲ್ಯದ ಚಿನ್ನಾಭರಣ ಖರೀದಿಸಿದ್ರು.. ಆದ್ರೆ ಹಣ ಕೊಡದೆ ಮಾಲೀಕರಿಗೆ ವಂಚಿಸಿದ್ದಾಳೆ.. ಶ್ವೇತಾಗೌಡ ಕೆಲವೊಂದು ಆಭರಣಗಳನ್ನ ವರ್ತೂರ್ ಪ್ರಕಾಶ್ ಅವ್ರ ಡಾಲರ್ಸ್ ಕಾಲೋನಿ ನಿವಾಸದ ವಿಳಾಸಕ್ಕೆ ತರಿಸಿಕೊಂಡಿದ್ರು ಅನ್ನೋದು ಗೊತ್ತಾಗಿದೆ.. ಈ ಸಂಬಂಧ ಆಭರಣ ಮಳಿಗೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ರು.. ಆರೋಪಿ ಶ್ವೇತಾಗೌಡ ಮಾಜಿ ಸಚಿವ ವರ್ತೂರು ಪ್ರಕಾಶ್ ಗೆಳತಿ ಅನ್ನೋದು ಗೊತ್ತಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ಶ್ವೇತಾ ಗೌಡ ಕೊಟ್ಟಿದ್ದ ಗಿಫ್ಟ್‌ಗಳನ್ನ ಅಂದ್ರೆ ನಗದು, ಚಿನ್ನಾಭರಣ ಎಲ್ಲವನ್ನೂ ಪೊಲೀಸರಿಗೆ ವಾಪಸ್ ಕೊಟ್ಟಿದ್ದಾರೆ. ಒಟ್ಟು 12.50 ಲಕ್ಷ ರೂ. ನಗದು, ಮೂರು ಬ್ರಾಸ್ ಲೆಟ್, 1 ಚಿನ್ನದ ಉಂಗುರವನ್ನ ಎಸಿಪಿ ಗೀತಾ ಎದುರಿಗೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೇ ವರ್ತೂರ್ ಪ್ರಕಾಶ್, ಎಂಗೇಜ್ಮೆಂಟ್ ವೇಳೆ ಹಾಕಬೇಕಿದ್ದ ಉಂಗುರದ ಫೋಟೋವನ್ನು ಸಹ ಶ್ವೇತಾಗೆ ಕಳುಹಿಸಿರುವುದು ಪತ್ತೆಯಾಗಿದೆ. ಅಲ್ಲದೇ ವರ್ತೂರು ಪ್ರಕಾಶ್ ವಿರುದ್ಧವೇ ಸ್ನೇಹಿತೆ ಶ್ವೇತಾ ಗೌಡ ನನ್ನ ಬಳಿ 10 ಲಕ್ಷ ಸಾಲ ಪಡೆದಿದ್ದಾರೆ ಅಂತ ಶ್ವೇತಾ ಆರೋಪಿಸಿದ್ದಾಳೆ. ಮೂರು ಬ್ರೇಸ್ಲೆಟ್, ಒಂದು ಉಂಗುರ ಸೇರಿ, ಬ್ಯಾಂಕ್ ಖಾತೆಗೆ 10 ಲಕ್ಷ ರೂ. ಹಾಕಿಸಿಕೊಂಡಿದ್ದರು ಅಂತ ಶ್ವೇತಾ ಆರೋಪಿಸಿದ್ದಾಳೆ. ಶ್ವೇತಾ ಜೊತೆ ತಿರುಪತಿಗೆ ಹೋಗಲು ವರ್ತೂರು ಪ್ರಕಾಶ್ ಟಿಕೆಟ್ ಕೂಡ ಬುಕ್ ಮಾಡಿದ್ದರಂತೆ, ಟಿಕೆಟ್ ಬುಕ್ ಮಾಡಿದ್ದ ಫೋಟೋ ಸಹ ಲಭ್ಯವಾಗಿದೆ… ಸದ್ಯ ಇಬ್ಬರೂ ಸೇರಿ ಕೋಟ್ಯಂತರ ರೂಪಾಯಿ ವಂಚಿಸಿರೋದು ಗೊತ್ತಾಗಿದೆ.
2. ಡಿ.ಕೆ.ಸುರೇಶ್ ತಂಗಿ ಹೆಸರಲ್ಲಿ ದೋಖಾ! ಮಿಮಿಕ್ರಿ ಮಾಡಿದ್ರಾ ನಟ ಧರ್ಮೇಂದ್ರ?
ಮಾಜಿ ಸಂಸದ ಡಿಕೆ ಸುರೇಶ್ ತಂಗಿ ಅಂತ ಹೇಳಿಕೊಂಡು ಮಹಿಳೆಯೊಬ್ಬರು ಚಿನ್ನಾಭರಣ ಖರೀದಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಐಶ್ವರ್ಯ ಗೌಡ ಅವ್ರು 8.41 ಕೋಟಿ ರೂಪಾಯಿ ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದಾರೆ ಅಂತ ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಶಾಪ್ ನ ಓನರ್ ವನಿತಾ ಐತಾಳ್ ಆರೋಪಿಸ್ದಾರೆ. ಐಶ್ವರ್ಯ ಗೌಡ ಸೇರಿದಂತೆ ನಟ ಧರ್ಮೇಂದ್ರ ಹಾಗೂ ಹರೀಶ್ ವಿರುದ್ಧ ಚಂದ್ರಲೇಔಟ್ ಪೊಲೀಸ್ ಸ್ಟೇಷನ್ ನಲ್ಲಿ ಎಫ್ ಐ ಆರ್ ದಾಖಲಾಗಿದೆ.
3. ಅಧಿವೇಶನದಲ್ಲಿ ಅಶ್ಲೀಲ ಪದ ಬಳಕೆ ವಿಚಾರ, ಸಿಟಿ ರವಿ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡ್ಲಿ
ವಿಧಾನ ಪರಿಷತ್ ನಲ್ಲಿ ಎಂ.ಎಲ್.ಸಿ ಸಿಟಿ ರವಿ ಅವಾಚ್ಯ ಪದ ಬಳಕೆ ಆರೋಪ ಸದ್ಯ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದ ಚಳಿಗಾಲದ ಅಧಿವೇಶನ ಕೊನೆಯ ದಿನ, ಸಿ.ಟಿ.ರವಿ ನನ್ನ ವಿರುದ್ಧ ಆವಾಚ್ಯ ಪದಬಳಕೆ ಮಾಡಿದ್ರು ,ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆರೋಪ ಮಾಡಿದ್ರು. ಆದ್ರೆ ಸಿ.ಟಿ.ರವಿ ಈ ಆರೋಪವನ್ನ ಅಲ್ಲಗಳೆದು ನಾನು ಆ ಪದ ಬಳಕೆ ಮಾಡಿಲ್ಲ ಅಂತ ವಾದಿಸ್ತಿದ್ದಾರೆ. ಸದ್ಯ ಈ ವಿಚಾರ ರಾಜ್ಯದಲ್ಲಿ ಸಂಚಲನ ಮೂಡಿಸ್ತಿದೆ. ಈ ವಿಚಾರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಶ್ಲೀಲ ಪದ ಬಳಕೆ ಮಾಡಿಲ್ಲ ಅಂತ ಧರ್ಮಸ್ಥಳ ಮಂಜುನಾಥನ ಮೇಲೆ ಪ್ರಮಾಣ ಮಾಡಿ ಹೇಳಿ, ನೋಡೋಣ. ಬನ್ನಿ ಧರ್ಮಸ್ಥಳಕ್ಕೆ ಪ್ರಮಾಣ ಮಾಡಿ ಹೇಳಿ. ಧರ್ಮಸ್ಥಳಕ್ಕೆ ಬನ್ನಿ, ನಾನೂ ಕೂಡ ಬರುತ್ತೇನೆ ಅಂತ ಸಿಟಿ ರವಿ ಗೆ ಬಹಿರಂಗ ಆಹ್ವಾನ ನೀಡಿದರು.
4.ಸಿ.ಟಿ.ರವಿ ಬಂಧನ ಪ್ರಕರಣ,ಕಾನೂನು ಹೋರಾಟಕ್ಕಿಳಿದ ಬಿಜೆಪಿ..!
ಎಂಎಲ್.ಸಿ, ಸಿ.ಟಿ.ರವಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ವಿರುದ್ಧ ಬಿಜೆಪಿ ರಾಜಭವನದ ಮೆಟ್ಟಿಲೇರಿದೆ. ಲಕ್ಷ್ಮೀ ಹೆಬ್ಬಾಳ್ಕರ್ಗೆ ನಿಂದನೆ ಮಾಡಿದ ಆರೋಪ ಪ್ರಕರಣದಲ್ಲಿ ಸಿಟಿ ರವಿ ಯನ್ನ ರಾಜ್ಯ ಸರ್ಕಾರ ನಡೆಸಿಕೊಂಡು ರೀತಿ ವಿರುದ್ಧ ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇಂದು ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭೇಟಿ ಮಾಡಿ ರಾಜ್ಯ ಸರ್ಕಾರದ ವಿರುದ್ಧ ದೂರು ನೀಡಿದ್ದಾರೆ. ಈ ಪ್ರಕರಣದ ತನಿಖಗೆ ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ ಬೆನ್ನಲ್ಲೇ ಇತ್ತ ಬಿಜೆಪಿ ನಾಯಕರು ರಾಜ್ಯಪಾಲರಿಗೆ ದೂರು ನೀಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ರವಿಕುಮಾರ್, ಕೇಶವ ಪ್ರಸಾದ್ ಅವರು ರಾಜಭವನದಲ್ಲಿ ಗವರ್ನರ್ ಭೇಟಿಯಾಗಿ ಸರ್ಕಾರದ ವಿರುದ್ಧ ದೂರು ನೀಡಿದರು. ಬಿಜೆಪಿ ಎಂಎಲ್‌ಸಿ ಸಿಟಿ ರವಿ ಬಂಧನ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ಖಂಡನೀಯ. ಬಂಧನದ ವೇಳೆ ಸಾಂವಿಧಾನಿಕ ಹಾಗೂ ಕಾನೂನು ಉಲ್ಲಂಘನೆ ಆಗಿದೆ. ಪೊಲೀಸ್ ಇಲಾಖೆ ಮೂಲಕ ಅಧಿಕಾರ ದುರ್ಬಳಕೆ ಆಗಿದೆ. ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ಬಂಧನ ಪ್ರಕರಣದಲ್ಲಿ ಸತ್ಯ ಶೋಧನೆ ನಡೆಸಬೇಕು ಎಂದು ಮನವಿ ಸಲ್ಲಿಸಲಾಗಿದೆ.
5.ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ,ಸರ್ಕಾರಕ್ಕೆ ಸ್ವಾಮೀಜಿ ಎಚ್ಚರಿಕೆ !
ಪಂಚಮಸಾಲಿಗರಿಗೆ 2ಎ ಮೀಸಲಾತಿ ಹೋರಾಟ ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ರಾಜ್ಯ ಸರ್ಕಾರದ ದೌರ್ಜನ್ಯ ಖಂಡಿಸಿ ರಾಜ್ಯದ ಪ್ರತಿ ಗ್ರಾಮದಲ್ಲಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಜನವರಿ 14ರಂದು ಕೂಡಲಸಂಗಮದಿಂದ ‘ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ ಆರಂಭಿಸಲಾಗುವುದು’ ಅಂತ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ. ಅಲ್ಲದೇ ಸರ್ಕಾರದ ವಿರುದ್ಧ ಹೋರಾಟ ನಡೆಸಿ ‘ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಂವಾದ ಮಾಡಿ, ಜಾಗೃತಿ ಮೂಡಿಸಲಾಗುವುದು. ಹಾಗೆ ತಾಲ್ಲೂಕು ಕೇಂದ್ರಗಳಲ್ಲೂ ಸಭೆ ನಡೆಸಿ ಜನರ ಸಲಹೆ–ಸೂಚನೆಗಳನ್ನು ಕ್ರೋಡೀಕರಿಸಿ ಮುಂದಿನ ಹೋರಾಟ ನಿರ್ಧರಿಸಲಾಗುವುದು’ ಅಂತ ಸ್ವಾಮೀಜಿ ತಿಳಿಸಿದರು.ಇನ್ನು ಲಾಠಿಚಾರ್ಜ್‌ನಲ್ಲಿ ಗಾಯಗೊಂಡವರ ಮನೆಗೆ ಭೇಟಿ ನೀಡಿ ‘ಬಸವ ರಕ್ಷಾ’ ಪತ್ರ ಕೊಟ್ಟು ಧೈರ್ಯ ತುಂಬುತ್ತಿದ್ದೇನೆ. ‘ರಕ್ತ ಚೆಲ್ಲಿದ್ದೀರಿ ಮೀಸಲಾತಿ ಪಡೆಯೋಣ’ ಎಂಬ ಘೋಷ ವಾಕ್ಯದೊಂದಿಗೆ ನಮ್ಮ ಹೋರಾಟ ಆರಂಭವಾಗಲಿದೆ. ಮೀಸಲಾತಿ ಕೊಡುವುದು ಅಸಾಂವಿಧಾನಿಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ, ಅವರ ಹೇಳಿಕೆಯೇ ಅಸಾಂವಿಧಾನಿಕ’ ಅಂತ ಸ್ವಾಮೀಜಿ ಹರಿಹಾಯ್ದರು.‘ಲಾಠಿಚಾರ್ಜ್ ಮಾಡಿದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲು ವಿನಂತಿಸಿದ್ದೆವು. ಆದರೆ, ಅವರಿಗೆ ₹10 ಸಾವಿರ ಬಹುಮಾನ ನೀಡಿ ಪ್ರಚೋದನೆ ನೀಡಿದ್ದಾರೆ. ಪಂಚಮಸಾಲಿ ವಕೀಲರ ಪರಿಷತ್ ಮೂಲಕ ಲಾಠಿಚಾರ್ಜ್ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದ್ದೇವೆ. ರಾಜ್ಯ ಗೃಹ ಇಲಾಖೆಯನ್ನೇ ಹೈಕೋರ್ಟ್ ಪ್ರತಿವಾದಿ ಮಾಡಿ, ಸ್ಪಷ್ಟೀಕರಣ ಕೇಳಿದೆ’ ಅಂತ ಅಂದ್ರು.‘ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ, ವೀರಪ್ಪ ಮೊಯ್ಲಿ, ಬಸವರಾಜ್ ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ಜಾತಿ–ಜನಾಂಗಗಳಿಗೆ ಮೀಸಲಾತಿ ಕಲ್ಪಿಸಲಾಗಿದೆ. ಆಗ ಯಾವುದೇ ಆಯೋಗದ ವರದಿ ಪಡೆದಿಲ್ಲ. ಆಗ ಅಸಾಂವಿಧಾನಿಕ ಎಂದೂ ಪರಿಗಣಿಸಿಲ್ಲ. ಈಗ ಪಂಚಮಸಾಲಿಗಳಿಗೆ ಮಾತ್ರ ಈ ನಿಯಮಗಳು ಅಡ್ಡಬಂದಿವೆ’ ಅಂತ ಆರೋಪ ಮಾಡಿದ್ರು.
6. ರಾಮನಗರದಲ್ಲಿ ಮೈತ್ರಿಗೆ ಮತ್ತೆ ಹೊಡೆತ, ನಗರಸಭೆ ಗೆದ್ದು ಬೀಗಿದ ಕಾಂಗ್ರೆಸ್
ಹೆಚ್ .ಡಿ.ಕೆ ಗೆ ಮತ್ತೆ ಮುಖಭಂಗವಾಗಿದೆ. ದಳಪತಿಗಳ ಕೋಟೆಯಾಗಿದ್ದ ರಾಮನಗರದಲ್ಲಿ ಜೆಡಿಎಸ್ ಒಂದೊಂದೇ ಸ್ಥಾನವನ್ನ ಕಳೆದುಕೊಳ್ತಿದೆ. ಈ ಹಿಂದೆ ರಾಮನಗರ ಗೆದ್ದಿದ್ದ ಹೆಚ್ಡಿ ಕುಮಾರಸ್ವಾಮಿ, ಕ್ಷೇತ್ರವನ್ನ ಕಳೆದುಕೊಂಡಿದ್ರು.. ಈಗ ನಗರಸಭೆಯೂ ಕಾಂಗ್ರೆಸ್ ಪಾಲಾಗಿದೆ. ಪ್ರತಿಷ್ಠಿತ ರಾಮನಗರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಗೆಲುವಿನ ಹೊಳೆ ಹರಿಸಿದೆ. ನಗರಸಭೆ ಅಧ್ಯಕ್ಷನಾಗಿ ಕಾಂಗ್ರೆಸ್‌ನ ಕೆ.ಶೇಷಾದ್ರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 31 ಸದಸ್ಯರ ಸಂಖ್ಯಾಬಲವಿರುವ ರಾಮನಗರ ನಗರಸಭೆಯಲ್ಲಿ ಕಾಂಗ್ರೆಸ್‌ನ 20 ಸದಸ್ಯರು ಹಾಗೂ ಜೆಡಿಎಸ್‌ನ 11 ಸದಸ್ಯರಿದ್ದಾರೆ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ಇರುವ ಹಿನ್ನೆಲೆ ಅಧ್ಯಕ್ಷರಾಗಿ ಕೆ.ಶೇಷಾದ್ರಿ, ಉಪಾಧ್ಯಕ್ಷರಾಗಿ ಆಯಿಷಾ ಬಾನು ಅವಿರೋಧ ಆಯ್ಕೆಯಾಗಿದ್ದಾರೆ. ಜೆಡಿಎಸ್‌ಗೆ ಬಹುಮತ ಇಲ್ಲದ ಕಾರಣ ಯಾವೊಬ್ಬ ಸದಸ್ಯರೂ ನಾಮಪತ್ರ ಸಲ್ಲಿಸಿರಲಿಲ್ಲ. ಜೊತೆಗೆ ಇಬ್ಬರು ಜೆಡಿಎಸ್ ಸದಸ್ಯರು ತಟಸ್ಥವಾಗಿದ್ದರಿಂದ ಕಾಂಗ್ರೆಸ್ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿಕೊಂಡಿದೆ. ನೂತನ ಅಧ್ಯಕ್ಷರು, ಉಪಾಧ್ಯಕ್ಷರಿಗೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಸಿಹಿ ತಿನಿಸಿ, ಶುಭಕೋರಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದ್ದಾರೆ..
7. ಬಾಣಂತಿಯರ ಸರಣಿ ಸಾವು , ಆತಂಕದಲ್ಲಿ ಸರ್ಕಾರ
ಬಳ್ಳಾರಿ ಜಿಲ್ಲಾ ಆಸ್ಪತ್ರೆ ಯಲ್ಲಿ ಐವರು ಬಾಣಂತಿಯರು ಮೃತಪಟ್ಟಿದ್ದ ಘಟನೆ ಕರ್ನಾಟಕ ಸರ್ಕಾರದ ನಿದ್ದೆಗೆಡಿಸಿದೆ. ಬಿಮ್ಸ್ನಲ್ಲಿ ಬಾಣಂತಿಯರ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದೆ. ಈ ನಡುವೆ ಮತ್ತೊಂದು ಆಘಾತಕಾರಿ ಅಂಶ ಬಹಿರಂಗಗೊಂಡಿದೆ. ಬಳ್ಳಾರಿ ಜಿಲ್ಲೆಯಲ್ಲಿ 8 ತಿಂಗಳ ಅವಧಿಯಲ್ಲಿ 23 ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದ ಅಡಿಟ್ ವರದಿಯಲ್ಲಿ ಉಲ್ಲೇಖವಾಗಿದೆ. 2024ರ ಏಪ್ರಿಲ್‌ನಿಂದ ಈವರೆಗೆ ಬಳ್ಳಾರಿ ಜಿಲ್ಲೆಯಲ್ಲಿ 23 ಬಾಣಂತಿಯರು ಮೃತಪಟ್ಟಿದ್ದಾರೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಅಪೌಷ್ಟಿಕತೆ, ಅನಿಮಿಯಾ ಸೇರಿ ಇತರೆ ಕಾಯಿಲೆಯಿಂದ ಬಾಣಂತಿಯರು ಸಾವಿಗೀಡಾಗಿದ್ದಾರೆ ಅಂತ ತಿಳಿಸಿದ್ದಾರೆ. ಇನ್ನು ಬೆಂಗಳೂರು ಸೇರಿದಂತೆ ರಾಯಚೂರಿನಲ್ಲಿ 10, ಬೆಳಗಾವಿಯಲ್ಲಿ 29 ಬಾಣಂತಿರ ಸಾವು ಆಗಿದೆ.
8. ಸ್ಟೋಟ ಪ್ರಕರಣದಲ್ಲಿ ಜಾಮೀನು, ನನ್ನ ಮೇಲೆ ಮಾತ್ರ ಕ್ರಮ ಯಾಕೆ
ಕೃಷಿ ಹೊಂಡದಲ್ಲಿ ಸೋಡಿಯಂ ಮೆಟಲ್ ಬಳಸಿ ಸ್ಫೋಟ ಮಾಡಿದ್ದ ಪ್ರಕರಣದಲ್ಲಿ, ಮಾಜಿ ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಜೈಲು ಪಾಲಾಗಿದ್ರು. ಸದ್ಯ ಜೈಲಿನಲ್ಲಿದ್ದ ಡ್ರೋನ್ ಪ್ರತಾಪ್ ಗೆ ನ್ಯಾಯಾಲಯದಿಂದ ಜಾಮೀನು ದೊರಕಿದೆ. ಜಾಮೀನು ಪ್ರಕ್ರಿಯೆ ಮುಗಿದ ಬಳಿಕ ಇಂದು ಜೈಲಿನಿಂದ ರಿಲೀಫ್ ಸಿಕ್ಕಿದೆ. ಜೈಲಿನಿಂದ ಬಿಡುಗಡೆಯಾದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಬೇರೆಯರ ಮೇಲೆ ಆಗದ ಕ್ರಮ ನನ್ನ ವಿರುದ್ಧ ಮಾತ್ರ ಯಾಕೆ ಆಗಿದೆ ಅಂತ ಡ್ರೋನ್ ಪ್ರತಾಪ್ ಪ್ರಶ್ನಿಸಿದ್ದಾರೆ. ನಾನು ಕೇವಲ 500 ಗ್ರಾಂ ಮಾತ್ರ ಸ್ಫೋಡಿಯಂ ಸ್ಫೋಟ ಮಾಡಿದ್ದೇನೆ. ಅದರೇ ದೇಶದಲ್ಲಿ ಹಲವು ಮಂದಿ ಯೂಟ್ಯೂಬರ್‌ಗಳು 1 ಕೆಜಿಗಿಂತಲೂ ಹೆಚ್ಚಿನ ಸೋಡಿಯಂ ಸ್ಫೋಟ ಮಾಡಿದ್ದಾರೆ. ಯೂಟ್ಯೂಬ್ ನೋಡಿದರೆ ವಿಶ್ವದಲ್ಲಿ ಹಲವು ಮಂದಿ ಈ ರೀತಿ ಬ್ಲ್ಯಾಸ್ಟ್ ಮಾಡಿದ್ದಾರೆ. ಅವರ ಮೇಲೂ ಆಗದ ಕ್ರಮ ನನ್ನ ಮೇಲೆ ಮಾತ್ರ ಯಾಕೆ ಅಂತ ಅಂದಿದ್ದಾರೆ. ಅಲ್ಲದೇ ಅದು ಅರ್ಟಿಫಿಶಿಯಲ್ ಪಾಂಡ್. ವಿಜ್ಞಾನ ಪ್ರಯೋಗಕ್ಕೆ ಸಂಬಂಧಿಸಿದಂತೆ ಸ್ಫೋಟ ಮಾಡಿದ್ದೇನೆ ಅಂತ ಯೂಟ್ಯೂಬ್‌ನಲ್ಲೇ ತಿಳಿಸಿದ್ದೇನೆ. ಈ ವಿಚಾರ ಹೈಸ್ಕೂಲ್ ಮಕ್ಕಳ ಪಠ್ಯದಲ್ಲಿದೆ. ಯೂಟ್ಯೂಬ್ ಓಪನ್ ಮಾಡಿದರೆ ಹಲವು ಮಂದಿ ಈ ರೀತಿಯ ಪ್ರಯೋಗ ಮಾಡಿದ್ದಾರೆ. ಆದರೆ ನನ್ನನ್ನು ಮಾತ್ರ ಬಂಧಿಸಿದ್ದು ಯಾಕೆ? ನನಗೆ ನ್ಯಾಯ ಬೇಕು ಅಂತ ಅಳಲು ತೋಡಿಕೊಂಡರು.
9. ಅಲ್ಲು ಅರ್ಜುನ್‌ಗೆ ಖಾಕಿ ಡ್ರಿಲ್ , ಪೊಲೀಸರಿಂದ ಪ್ರಶ್ನೆಗಳ ಸುರಿಮಳೆ
ಪುಷ್ಪ 2′ ಪ್ರೀಮಿಯರ್ ಶೋ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣದ ಕಾವು ದಿನೇ ದಿನೇ ಹೆಚ್ಚಾಗ್ತಿದೆ. ಇಂದು ಹೈದರಾಬಾದ್‌ನ ಚಿಕ್ಕಡಪಲ್ಲಿ ಪೊಲೀಸರು ನಟ ಅಲ್ಲು ಅರ್ಜುನ್ ಅವರನ್ನು ಸತತ 4 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ಚಿಕ್ಕಡಪಲ್ಲಿ ಪೊಲೀಸ್ ಠಾಣೆಯಲ್ಲಿ ಎಸಿಪಿ ರಮೇಶ್ ಕುಮಾರ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ನಾಯಕ್ ಅವರಿಂದ ಅಲ್ಲು ಅರ್ಜುನ್ ಅವರ ವಿಚಾರಣೆ ನಡೆಸಲಾಗಿದೆ. ಡಿ.4ರಂದು ಸಂಭವಿಸಿದ ಕಾಲ್ತುಳಿತ ದುರಂತದ ಬಗ್ಗೆ ಪ್ರಶ್ನೆ ಮಾಡಲಾಗಿದೆ. ವಿಚಾರಣೆ ವೇಳೆ ಥಿಯೇಟರ್‌ಗೆ ಬರಬೇಡಿ ಎಂದು ಥಿಯೇಟರ್ ಮ್ಯಾನೇಜ್‌ಮೆಂಟ್ ಮೊದಲೇ ಹೇಳಿದ್ದಾರಾ, ಥಿಯೇಟರ್‌ಗೆ ಬರಲು ಪೊಲೀಸ್ ಅನುಮತಿ ಕೇಳಿದ್ದೀರಾ, ಅದರ ಪ್ರತಿ ಇದೆಯೇ?,ಅಲ್ಲಿನ ಪರಿಸ್ಥಿತಿ ಬಗ್ಗೆ ನಿಮ್ಮ ತಂಡ ನಿಮಗೆ ಮಾಹಿತಿ ನೀಡಿತ್ತೇ, ನಿಮ್ಮ ಆಗಮನದ ಹಿನ್ನೆಲೆ ಭದ್ರತೆ ಹೆಚ್ಚಿಸಲಾಗಿತ್ತೆ, ಎಷ್ಟು ಜನ ಬೌನ್ಸರ್ ನೇಮಕ ಮಾಡಲಾಗಿತ್ತು, ನಿಮ್ಮ ಆಗಮನಕ್ಕೆ ಅನುಮತಿ ನೀಡಲು ಪೊಲೀಸರು ನಿರಾಕರಿಸಿದ್ದರು. ಇದರ ಮಾಹಿತಿ ನಿಮ್ಮಗಿತ್ತಾ? ಕಾಲ್ತುಳಿತ ಸಂಭವಿಸಿದ್ದು ಗೊತ್ತಾದರೂ, ಥಿಯೇಟರ್‌ನಿಂದ ಯಾಕೆ ನೀವು ಹೊರಗೆ ಹೋಗಲಿಲ್ಲ ಅನ್ನೋ ಪ್ರಶ್ನೆ ಗಳನ್ನ ಕೇಳಲಾಗಿದೆ. ಅಂದಹಾಗೆ, ಡಿ.13ರಂದು ಕಾಲ್ತುಳಿತ ಪ್ರಕರಣ ಸಂಬಂಧ ಅಲ್ಲು ಅರ್ಜುನ್‌ರನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದರು. ಬೇಲ್ ಸಿಕ್ಕ ಹಿನ್ನೆಲೆ ನಟ ರಿಲೀಸ್ ಆಗಿದ್ದರು. ಈಗಾಗಲೇ ಮೃತ ರೇವತಿ ಕುಟುಂಬಕ್ಕೆ ಅಲ್ಲು ಅರ್ಜುನ್ 25 ಲಕ್ಷ ರೂ. ಪರಿಹಾರ ಘೋಷಿಸಿದ್ದರು. ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ತಮ್ಮ ಇಡೀ ತಂಡ ನೋಡಿಕೊಳ್ಳಲಿದೆ ಅಂತಲೂ ಹೇಳಿದ್ರು