Belagavi News: ಬೆಳಗಾವಿ: ಬೆಳಗಾವಿಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಮಳೆ ಸುರಿಯುವ ಭರಕ್ಕೆ, ಮನೆಗಳು ಮುಳುಗುತ್ತಿದೆ. ಮನೆಗಳಿಗೆ ನೀರು ನುಗ್ಗಿ, ಜನ ಮನೆ ಬಿಟ್ಟು ಸ್ಥಳಾಂತರಗೊಳ್ಳುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಬೆಳಗಾವಿ ಜಿಲ್ಲೆಯ ಮಬಡಲಗಿ ತಾಲೂಕಿನ ಮುಸಗುಪ್ಪಿ ಗ್ರಾಮದಲ್ಲಿ ಬರೋಬ್ಬರಿ 500 ಮನೆಗಳು ಜಲಾವೃತಗೊಂಡಿದೆ. ಹಲವರು ಮನೆ ಖಾಲಿ ಮಾಡಿಕೊಂಡು, ಊರು ಬಿಟ್ಟಿದ್ದಾರೆ. ಇನ್ನು ಇದು ಇಂದು ನಿನ್ನೆಯ ಕಥೆಯಲ್ಲ. ಪ್ರತೀ ವರ್ಷ ಮಳೆಗಾಲದಲ್ಲಿ ಇಲ್ಲಿ ಇಂಥ ಕಷ್ಟಗಳು ಎದುರಿಸಲೇಬೇಕಾಗುತ್ತದೆ. ಘಟಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಮನೆಗೆ ನೀರು ನುಗ್ಗುತ್ತದೆ.
ಕಳೆದೆರಡು ಗ್ರಾಮದಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ, ಒಂದೇ ರಾತ್ರಿಯಲ್ಲಿ ಅರ್ಧದಷ್ಟು ಗ್ರಾಮ ಮುಳುಗಿದೆ. ನೀರು ಏರಿಕೆ ಹಿನ್ನೆಲೆ ಇಡೀ ಗ್ರಾಮವೇ ಮುಳುಗುವ ಆತಂಕದಲ್ಲಿದೆ. ಇದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ನಡು ನೀರಿನಲ್ಲೇ ನಿಂತು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.