Saturday, December 21, 2024

Latest Posts

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಟ್ಟು ₹15,145 ಕೋಟಿ ಅನುದಾನ: ಸಚಿವ ದಿನೇಶ್ ಗುಂಡೂರಾವ್

- Advertisement -

Political News: ಇಂದು ಸಿಎಂ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಿದ್ದು, ಈ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿದ್ದಾರೆ.

ರಾಜ್ಯದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆಗಳನ್ನು ನೀಡಲು ಅನುಕೂಲಕರವಾದ ಬಜೆಟ್‌ ಮಂಡಿಸಲಾಗಿದೆ. ಆರೋಗ್ಯ ಇಲಾಖೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬಜೆಟ್‌ನಲ್ಲಿ ಮಹತ್ವದ ಯೋಜನೆಗಳನ್ನು ಘೋಷಿಸಿರುವುದು ಸಂತಸ ತಂದಿದೆ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದಂತಹ, ತಾರತಮ್ಯವಿಲ್ಲದ ಬಜೆಟ್‌ ನೀಡುವಲ್ಲಿ ನಮ್ಮ ಸರ್ಕಾರ ಯಶಸ್ವಿಯಾಗಿದೆ.

ಇನ್ನು ಆರೋಗ್ಯ ಕೇಂದ್ರಕ್ಕೆ ಬಜೆಟ್‌ನಲ್ಲಿ ಏನೇನು ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..

  • 2024-25ನೇ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಟ್ಟು ₹15,145 ಕೋಟಿ ಅನುದಾನ.
  • 7 ತಾಲೂಕುಗಳಲ್ಲಿ ₹280 ಕೋಟಿ ವೆಚ್ಚದಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆ ನಿರ್ಮಾಣ.
  • 7 ಜಿಲ್ಲೆಗಳಲ್ಲಿ ₹187 ಕೋಟಿ ವೆಚ್ಚದಲ್ಲಿ ಕ್ರಿಟಿಕಲ್‌ ಕೇರ್‌ ಬ್ಲಾಕ್‌ ಕಟ್ಟಡ ನಿರ್ಮಾಣ.
  • ₹20 ಕೋಟಿ ವೆಚ್ಚದಲ್ಲಿ ಪ್ರತಿ ಜಿಲ್ಲೆಯಲ್ಲಿ ಒಂದು ಡೇ-ಕೇರ್‌ ಕಿಮೋಥೆರಪಿ ಕೇಂದ್ರ.
  • ಆರೋಗ್ಯ ಇಲಾಖೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ದುರಸ್ತಿ ಮತ್ತು ಉನ್ನತೀಕರಣಕ್ಕೆ ₹75 ಕೋಟಿ.
  • ಕೆ.ಸಿ. ಜನರಲ್ ಆಸ್ಪತ್ರೆ, ಬೆಂಗಳೂರು,ಉಡುಪಿ,ಕೋಲಾರ,ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಿಗೆ Colposcopy ಉಪಕರಣಗಳ ಖರೀದಿಗೆ ₹21 ಕೋಟಿ.
  • ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡಕ್ಕೆ ₹150 ಕೋಟಿ ಅನುದಾನ.
  • ಎರಡು ವರ್ಷಗಳಲ್ಲಿ ₹350 ಕೋಟಿ ವೆಚ್ಚಗಳಲ್ಲಿ 25 ಪ್ರಾಥಮಿಕ ಆರೋಗ್ಯ ಕೇಂದ್ರ ಉನ್ನತೀಕರಣ ಪ್ರಸಕ್ತ ಸಾಲಿನಲ್ಲಿ 199 ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಕಟ್ಟಡ ಕಾಮಗಾರಿಗೆ ₹130 ಕೋಟಿ ಅನುದಾನ.
  • ಕಲ್ಯಾಣ ಕರ್ನಾಟಕ ಭಾಗದಲ್ಲಿ ₹221 ಕೋಟಿ ವೆಚ್ಚದಲ್ಲಿ 46 ಹೊಸ ಪ್ರಾಥಮಿಕ ಕೇಂದ್ರಗಳ ಸ್ಥಾಪನೆ.
  • ರಾಜ್ಯದ 13 ಜಿಲ್ಲಾ ಆಸ್ಪತ್ರೆಗಳಲ್ಲಿ ಅಗ್ನಿಶಾಮಕ ವ್ಯವಸ್ಥೆಗಾಗಿ ₹6 ಕೋಟಿ ಅನುದಾನ.
  • ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕ್ಷಯರೋಗ ತಪಾಸಣೆಗಾಗಿ 87 True-Nat ಯಂತ್ರ ಖರೀದಿಗೆ ₹6 ಕೋಟಿ.
  • ಬೆಂಗಳೂರಿನಲ್ಲಿ ಬಡಜನರಿಗೆ ಉಚಿತ ಪ್ರಯೋಗಾಲಯ ಸೇವೆಗಾಗಿ ಎರಡು ವರ್ಷಗಳಲ್ಲಿ HUB and Spoke ಮಾದರಿಯಲ್ಲಿ 430 ಪ್ರಯೋಗಾಲಯ ಸ್ಥಾಪನೆಗೆ ₹20 ಕೋಟಿ.

‘ಬಜೆಟ್ ಮಂಡಿಸುವಾಗ ವಾಕ್ ಔಟ್ ಮಾಡಿದ ನಿದರ್ಶನ ಇಲ್ಲ. ಆದರೆ ಬಿಜೆಪಿಗರು ಬಾಯಿಗೆ ಬಂದಂತೆ ಮಾತನಾಡಿದ್ದಾರೆ’

‘ಇದು ದೇವೇಗೌಡರ ಜಿಲ್ಲೆ, ಇಲ್ಲಿ ಕಾಂಗ್ರೆಸ್‌ಗೆ ಅನುಕೂಲ ಆಗಲ್ಲ ಅಂತ ನಮ್ಮ ಜಿಲ್ಲೆಯನ್ನು ಕಡೆಗಣಿಸಿದ್ದಾರೆ’

‘ನಮ್ಮ ಹಾಸನ ಜಿಲ್ಲೆಗೆ ಒಂದು ರೂಪಾಯಿ ಹಣ ಕೊಟ್ಟಿಲ್ಲ. ಸಂಪೂರ್ಣ ಫೇಲ್ಯೂರ್ ಆಗಿರುವ ಬಜೆಟ್’

- Advertisement -

Latest Posts

Don't Miss