ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯ(Police Department) 9 ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ನೀಡಿದೆ. ಇತ್ತೀಚಿಗೆ ಹೆಚ್ಚಿಗೆ ಸುದ್ದಿಯಲ್ಲಿ ಇದ್ದಂತಹ ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ರನ್ನು ಸೇರಿ 9 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಅಪರಾಧಿ ತನಿಖಾದಳದ ಎಸ್ಪಿ ಆಗಿದಂತಹ ರವಿ ಡಿ ಚನ್ನಣ್ಣನವರ್(Ravi D Channannavar) ಅನ್ನು ಕರ್ನಾಟಕ ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ ಆಗಿ ನೇಮಕ ಮಾಡಿ ವರ್ಗಾವಣೆ ಮಾಡಿದೆ. ಜೊತೆಗೆ ಅಪರಾಧಿ ತನಿಖಾದಳದ ಮತ್ತೊಬ್ಬ ಅಧಿಕಾರಿ ಭೀಮಶಂಕರ್ ಎಸ್ ಗುಳೇದ್(Bhimashankar s Guled) ಅವರನ್ನು ಬೆಂಗಳೂರು ಪೂರ್ವ ಡಿಸಿಪಿಯಾಗಿ, ಎಸಿಬಿ ಎಸ್ಪಿ ಆಗಿದ್ದ ಅಬ್ದುಲ್ ಅಹ್ಮದ್(Abdul Ahmed)ಅವರನ್ನು ಕೆಎಸ್ಆರ್ಟಿಸಿ ನಿರ್ದೇಶಕರಾಗಿ, ಕೊಪ್ಪಳದ ಎಸ್ಪಿ ಆಗಿರುವ ಶ್ರೀಧರ್ ಅವರನ್ನು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಎಸ್ಪಿಯಾಗಿ, ಬೆಂಗಳೂರು ಜೈಲು ಎಸ್ಪಿ ಆಗಿದ್ದ ಶಿವಕುಮಾರ್ ಅವರನ್ನು ಚಾಮರಾಜನಗರದ ನೂತನ ಎಸ್ಪಿಯಾಗಿ, ಚಾಮರಾಜನಗರದ ಎಸ್ಪಿ ಆಗಿರುವ ದಿವ್ಯ ಸಾರಾ ಥಾಮಸ್ ಅವರನ್ನು ಮೈಸೂರು ಕರ್ನಾಟಕ ಪೊಲೀಸ್ ಅಕಾಡೆಮಿಯ ಡೆಪ್ಯೂಟಿ ಡೈರೆಕ್ಟರ್ ಆಗಿ ದೆಕ್ಕ ಕಿಶೋರ್ ಬಾಬು(Dekka Kishore Babu)ಅವರನ್ನು ಬೀದರ್ ಎಸ್ಪಿಯಾಗಿ, ಮೈಸೂರು ಎಸಿಬಿ ಎಸ್ಪಿ ಆಗಿರುವ ಅರುಣಂಗ್ಶು ಗಿರಿ ಅವರನ್ನು ಕೊಪ್ಪಳದ ಎಸ್ಪಿ ಆಗಿ ನೇಮಕ ಮಾಡಿ ವರ್ಗಾವಣೆ ಮಾಡುವುದರ ಜೊತೆಗೆ ಪೊಲೀಸ್ ಇಲಾಖೆಯಲ್ಲಿ ದೊಡ್ಡಮಟ್ಟದ ಸರ್ಜರಿಯನ್ನು ರಾಜ್ಯ ಸರ್ಕಾರ ಮಾಡಿದೆ.