- Advertisement -
ಬೆಂಗಳೂರು: ರಾಜ್ಯ ಸಾರಿಗೆ ಇಲಾಖೆ ಇದೀಗ ಬಸ್ ಪ್ರಯಾಣದರವನ್ನ ಏರಿಕೆ ಮಾಡಲು ಚಿಂತನೆ ಮಾಡಿದ್ದು, ಜೂನ್ ತಿಂಗಳಿನಿಂದ ನೂತನ ಬೆಲೆ ಜಾರಿಗೆ ಬರಲಿದೆ. ಬಿಎಂಟಿಸಿ ಮತ್ತು ಕೆಎಸ್ಆರ್ ಟಿಸಿ ಪ್ರಯಾಣದರ ಇನ್ನು ಮುಂದೆ ಹೆಚ್ಚಳವಾಗಲಿದೆ. ಈ ಬಗ್ಗೆ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಮಾಹಿತಿ ನೀಡಿದ್ದಾರೆ.
ಕೆಲದಿನಗಳ ಹಿಂದೆ ಶೇ.18 ರಷ್ಚು ದರ ಏರಿಕೆ ಮಾಡಲು ಸಾರಿಗೆ ಇಲಾಖೆ ಸಿಎಂ ಕುಮಾರಸ್ವಾಮಿಗೆ ಅರ್ಜಿ ಸಲ್ಲಿಸಿತ್ತು. ಆದ್ರೆ ಚುನಾವಣೆ ದಿನಾಂಕ ಘೋಷಣೆಯಾಗಿದ್ದರಿಂದ ಸಾರಿಗೆ ಇಲಾಖೆಯ ಈ ಪ್ರಸ್ತಾವನೆ ಕುರಿತಾದ ತೀರ್ಮಾನ ಕೈಗೊಳ್ಳಲಾಗಿರಲಿಲ್ಲ. ಇದೀಗ ಜೂನ್ ತಿಂಗಳಿನಿಂದ ಪರಿಷ್ಕೃತ ದರ ಜಾರಿಯಾಗಲಿದ್ದು. ಒಂದು ವೇಳೆ ಇಲಾಖೆ ಪ್ರಸ್ತಾವನೆಯಂತೆ ದರ ನಿಗದಿಪಡಿಸಿದ್ರೆ ಪ್ರಯಾಣಿಕರ ಮೇಲೆ ಹೊರೆಯಾಗಲಿದೆ.
ಧರ್ಮಸ್ಥಳ ಆಯ್ತು ಈಗ ಸಿದ್ಧಗಂಗಾ ಮಠ….. ! ಈ ವಿಡಿಯೋದಲ್ಲಿದೆ ಕಂಪ್ಲೀಟ್ ಡೀಟೇಲ್ಸ್. ತಪ್ಪದೇ ನೋಡಿ.
- Advertisement -