National News: ತೃಣಮೂಲ ಕಾಂಗ್ರೆಸ್ ಇಂದು ಲೋಕಸಭಾ ಚುನಾವಣೆಯ ಮೊದಲ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿತು. 42 ಲೋಕಸಭಾ ಅಭ್ಯರ್ಥಿಗಳ ಪಟ್ಟಿ ರಿಲೀಸ್ ಮಾಡಿದ್ದು, ಕ್ರಿಕೇಟಿಗ ಯುಸೂಫ್ ಪಠಾಣ್‌ರನ್ನು ಕೂಡ ಕಣಕ್ಕಿಳಿಸಿದ್ದಾರೆ.
ಪಶ್ಚಿಮ ಬಂಗಾಳದ ಬರ್ಹಂಪುರ ಕ್ಷೇತ್ರದಿಂದ ಅಭ್ಯರ್ಥಿಯಾಗಿ, ಲೋಕಸಭಾ ಚುನಾವಮೆಗೆ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಧಿರಂಜನ್ ಚೌದರಿ ಗೆದ್ದು ಸಂಸದರಾಗಿದ್ದರು. ಇದೀಗ ಯುಸೂಫ್ ಈ ಕಾಂಗ್ರೆಸ್ ನಾಯಕನ ವಿರುದ್ಧ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಇನ್ನು ತೃಣಮೂಲ ಕಾಂಗ್ರೆಸ್ ಯಾಕೆ ಯುಸೂಫ್ ಪಠಾಣ್‌ಗೆ ಟಿಕೇಟ್ ನೀಡಿದೆ ಅಂದ್ರೆ, ಐಪಿಎಲ್ ಕ್ರಿಕೇಟ್‌ನಲ್ಲಿ ಯುಸೂಫ್ ಕೊಲ್ಕತ್ತಾ ನೈಟ್ ರೈಡರ್ಸ್ ಟೀಮ್‌ನಲ್ಲಿ ಆಡಿದ್ದರು. ಹೀಗಾಗಿ ಯುಸೂಫ್ ಬಂಗಾಲಿಗರ ಅಚ್ಚುಮೆಚ್ಚಿನ ಆಟಗಾರರಾಗಿದ್ದಾರೆ. ಪ್ರಸಿದ್ಧ ಆಟಗಾರರನ್ನು ತಮ್ಮ ಪಕ್ಷದ ಮೂಲಕ ಕಣಕ್ಕಿಳಿಸಿದರೆ, ಜಯ ಗಳಿಸಬಹುದು ಎಂಬುದು ದೀದಿ ತಂತ್ರಗಾರಿಕೆ. ಹೀಗಾಗಿ ಪಠಾಣ್‌ರನ್ನು ಚುನಾವಣಾ ಕಣಕ್ಕಿಳಿಸಲಾಗಿದೆ. ಈಗಾಗಲೇ ಕ್ರಿಕೇಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿರುವ ಪಠಾಣ್, ಚುನಾವಣೆಯಲ್ಲಿ ಗೆಲ್ಲುತ್ತಾರಾ ಅಂತಾ ಕಾದು ನೋಡಬೇಕಿದೆ.
ಆಂಧ್ರಪ್ರದೇಶ ಲೋಕಸಭೆ ಚುನಾವಣೆಗೆ ಬಿಜೆಪಿ, ಟಿಡಿಪಿ,ಜೆಎಸ್‌ಪಿ ಮೈತ್ರಿ ಸ್ಪರ್ಧೆ
ಜಪಾನ್‌ನಲ್ಲಿ ಅಮೀರ್ ಖಾನ್ ಮಗ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ ಪಾರ್ಟಿ..