Trip Tips: ನೀವು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೆ ನಾಲ್ಕೈದು ಬಾರಿ ಪ್ರವಾಸಕ್ಕೆ ಅಥವಾ ಸಂಬಂಧಿಕರ ಮನೆಗೆ ಹೋಗುವವರಾಗಿದ್ದರೆ, ನಿಮ್ಮ ಬಳಿ ನಿಮ್ಮದೇ ಆಗಿರುವಂಥ ಕೆಲವು ವಸ್ತುಗಳಿರಬೇಕು. ಕೆಲವರು ಸಂಬಂಧಿಕರ ಮನೆಗೆ ಹೋದಾಗ, ಸಂಬಂಧಿಕರಿಗೆ ಸೇರಿದ ಕೆಲ ವಸ್ತುಗಳನ್ನು ಬಳಸುತ್ತಾರೆ. ಇದರಿಂದ ಅವರಿಗೆ ಮುಜುಗರ ಉಂಟಾಗುತ್ತದೆ. ಅದನ್ನು ತಪ್ಪಿಸಬೇಕು ಅಂದ್ರೆ ನೀವು ಕೆಲ ವಸ್ತುಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಲೇಬೇಕು. ಅದೇನು ಅಂತಾ ತಿಳಿಯೋಣ ಬನ್ನಿ.
ಪೌಚ್. ನಿಮ್ಮ ಬ್ಯಾಗ್‌ನಲ್ಲಿ ಒಂದು ಮೀಡಿಯಂ ಸೈಜ್ ಪೌಚ್ ಇರಲೇಬೇಕು. ಅದರಲ್ಲಿ ನಿಮ್ಮ ಬಾಚಣಿಗೆ, ಪೌಡರ್, ಲಿಪಸ್ಟಿಕ್, ಲಿಪ್‌ಬಾಮ್, ಕಿವಿಯೋಲೆ, ಸರ, ಬಳೆ, ವಾಚ್ ಸೇರಿ, ನಿಮ್ಮೆಲ್ಲ ವಸ್ತುಗಳಿರಬೇಕು.
ಇನ್ನೊಂದು ಪೌಚ್. ಇನ್ನೊಂದು ಚಿಕ್ಕ ಪೌಚ್‌ನಲ್ಲಿ ನೀವು ಫೇಸ್‌ವಾಶ್, ಸೋಪ್, ಬ್ರಶ್ ಇವೆಲ್ಲವನ್ನೂ ಇರಿಸಿಕೊಳ್ಳಬೇಕು. ಬ್ರಶ್ ಮತ್ತು ಸೋಪ್ ಹಾಕಲು ಬೇಕಾದ ಕವರ್‌ಗಳು ಆನ್‌ಲೈನ್‌ನಲ್ಲಿ ಲಭ್ಯವಿರುತ್ತದೆ. ಅವುಗಳ ಬಳಕೆಯಿಂದ ನಿಮ್ಮ ಬ್ರಶ್ ಸ್ವಚ್ಛವಾಗಿರುತ್ತದೆ. ಸೋಪ್‌ನಿಂದ ನೀರು ಸೋರಿ, ನಿಮ್ಮ ಪೌಚ್ ಕೂಡ ಗಲೀಜಾಗುವುದಿಲ್ಲ. ಫೇಸ್‌ವಾಶ್, ಕ್ರೀಮ್, ಶ್ಯಾಂಪೂ, ಕಂಡಿಶ್ನರ್, ಹೇರ್ ಸೇರಮ್, ಫೇಸ್ ಸೇರಮ್ ಸೋರದಂತೆ ಹಾಕಲು, ಬಾಟಲಿಗಳು ಲಭ್ಯವಿದೆ. ಅದನ್ನು ಕೂಡ ಬಳಸುವುದು ಉತ್ತಮ. ಇಲ್ಲವಾದಲ್ಲಿ, ಇವೆಲ್ಲವೂ ಸೋರಿ, ನಿಮ್ಮ ಬ್ಯಾಗ್ ಗಲೀಜಾಗಬಹುದು.
ಟವಲ್. ಪ್ರವಾಸಕ್ಕಾಗಲಿ ಸಂಬಂಧಿಕರ ಮನೆಗಾಾಗಲಿ, ಎಲ್ಲಿ ಹೋಗಬೇಕಾದರೂ ನಿಮ್ಮದೇ ಟವೆಲ್, ಕರ್ಚೀಫ್ ಬಳಸಬೇಕು. ಬೇರೆಯವರ ಟವೆಲ್, ಕರ್ಚೀಫ್ ಬಳಸುವುದು ಒಳ್ಳೆಯದಲ್ಲ. ಇದರೊಂದಿಗೆ ನಿಮಗೆ ಅವಶ್ಯಕವಿರುವ ಬಟ್ಟೆ, ಒಳಉಡುಪು ಸಹ ಮರೆಯದೇ ಪ್ಯಾಕ್ ಮಾಡಿ.
ನೆಕ್ ಪಿಲ್ಲೋ. ನೀವು ಪ್ರವಾಸಕ್ಕೆ ಹೋಗುವಾಗ, ಕಾರಿನಲ್ಲಿ ಅಥವಾ ಬಸ್‌ನಲ್ಲಿ ಪ್ರಯಾಣಿಸುವಾಗ ನಿದ್ರಿಸಬೇಕಾದರೆ, ಅಲ್ಲಿ ಇಲ್ಲಿ ವಾಲಬೇಕಾಗುತ್ತದೆ. ಹಾಗಾಗಬಾರದು, ನಿಮ್ಮ ಕುತ್ತಿಗೆ ಸರಿಯಾಗಿರಬೇಕು. ಕುತ್ತಿಗೆ ನೋವು ಬರಬಾರದು. ಉತ್ತಮ ನಿದ್ದೆ ಬರಬೇಕು ಎಂದಲ್ಲಿ ನೀವು ನೆಕ್ ಪಿಲ್ಲೋ ಬಳಸಬಹುದು.
ಶೂಸ್. ಇನ್ನು ನೀವು ಫ್ಯಾಶನ್ ಪ್ರಿಯರಾಗಿದ್ದೀರಿ. ನೀವು ಪ್ರವಾಸಕ್ಕೆ ಹೋಗುವಾಗಲೂ ತರಹೇವಾರಿ ಶೂಸ್, ಚಪ್ಪಲಿ ಬಳಸಲೇಬೇಕು ಎಂದಲ್ಲಿ, ಅದಕ್ಕೂ ಪೌಚ್ ಲಭ್ಯವಿದೆ. ಅದನ್ನು ಬಳಸಿ, ಬ್ಯಾಗ್ ಪ್ಯಾಕ್ ಮಾಡಿದ್ದಲ್ಲಿ. ಜಾಗ ಉಳಿತಾಯವಾಗುತ್ತದೆ.
ಚಾರ್ಜರ್, ಪವರ್ ಬ್ಯಾಂಕ್, ಮೊಬೈಲ್, ಪರ್ಸ್, ಎಟಿಎಂ ಕಾರ್ಡ್, ದುಡ್ಡು. ಇವೆಲ್ಲವೂ ನಿಮ್ಮ ಬಳಿ ಖಂಡಿತವಾಗಿಯೂ ಇರಲೇಬೇಕಾದ ವಸ್ತುಗಳು. ಯಾವುದನ್ನು ಮರೆತರೂ ನೀವು ಇದನ್ನು ಮಾತ್ರ ಪ್ರವಾಸದ ವೇಳೆ ಮರೆಯುವಂತಿಲ್ಲ. ಜೊತೆಗೆ ಒಂದಿಷ್ಟು ತಿಂಡಿ ತಿನಿಸು, ನೀರಿನ ಬಾಟಲಿ, ಸ್ಯಾನಿಟೈಸರ್, ಟಾರ್ಚ್, ಪ್ಲಾಸ್ಟಿಕ್ ಚೀಲಗಳು ಕೂಡ ಅವಶ್ಯಕವಾಗಿರುತ್ತದೆ.