ಬೆಂಗಳೂರು: ರಾಜ್ಯದಲ್ಲಿ ತಿಮ್ಮಪ್ಪನ ಬೃಹತ್ ದೇವಸ್ಥಾನ ತಲೆಯೆತ್ತಲಿದೆ. ಈ ಬಗ್ಗೆ ಮುಜರಾಯಿ ಇಲಾಖೆ ಸಚಿವ ಪರಮೇಶ್ವರ್ ನಾಯ್ಕ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸ್ಥಳ ಕೂಡ ನಿಗದಿಪಡಿಸಿದ್ದಾರೆ.
ತಿರುಮಲ ತಿರುವತಿ ದೇವಸ್ಥಾನದಂತೆಯೇ ರಾಜ್ಯದಲ್ಲೂ ತಿಮ್ಮಪ್ಪನ ಬೃಹದಾಕಾರದ ದೇಗುಲ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ದೇಗುಲ ನಿರ್ಮಾಣಕ್ಕಾಗಿ ಸಿಎಂ ಕುಮಾರಸ್ವಾಮಿ ರಾಮನಗರದಲ್ಲಿ 15 ಎಕರೆ ಪ್ರದೇಶವನ್ನ ಮಂಜೂರು ಮಾಡಿ ಈಗಾಗಲೇ ಆದೇಶ ಹೊರಡಿಸಿದ್ದಾರೆ. ಅಲ್ಲದೆ ಮುಜರಾಯಿ ಇಲಾಖೆಯಡಿ ಬರುವ ರಾಜ್ಯದ 6 ದೇವಸ್ಥಾನದ ಜೀರ್ಣೋದ್ಧಾರಕ್ಕೂ ಸರ್ಕಾರ ಅಸ್ತು ಎಂದಿದೆ.
ಇನ್ನು ತಿರುಮಲ ಮಾದರಿಯಲ್ಲೇ ರಾಮನಗರದಲ್ಲೂ ತಿಮ್ಮಪ್ಪನ ದೇಗುಲ ನಿರ್ಮಾಣವಾಗಲಿದ್ದು ಇದರ ನಿರ್ಮಾಣದ ಉಸ್ತುವಾರಿಯನ್ನು ಸಂಪೂರ್ಣವಾಗಿ ಟಿಟಿಡಿ ವಹಿಸಿಕೊಳ್ಳಲಿದೆ. ಈ ಬಗ್ಗೆ ಟಿಟಿಡಿ ಈ ಹಿಂದೆಯೇ ಜಮೀನು ಮಂಜೂರು ಮಾಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.
ಪರ್ಜನ್ಯ ಹೋಮದಿಂದ ಮಳೆ ಬರುತ್ತಾ…??ಮಿಸ್ ಮಾಡದೇ ಈ ವಿಡಿಯೋ ನೋಡಿ