Monday, December 11, 2023

Latest Posts

ಬಳ್ಳಾರಿಗೆ ಕಾಲಿಡಲು ಜನಾರ್ದನ ರೆಡ್ಡಿಗೆ ಗ್ರೀನ್ ಸಿಗ್ನಲ್..!

- Advertisement -

ಬಳ್ಳಾರಿ: ಗಣಿ ಧಣಿ ಜನಾರ್ದನ ರೆಡ್ಡಿ ಬಳ್ಳಾರಿಗೆ ಪ್ರವೇಶಿಸಲು ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ತಮ್ಮ ಮಾವನ ಅನಾರೋಗ್ಯ ಕಾರಣ ಕೊಟ್ಟು ಬಳ್ಳಾರಿಗೆ ಹೋಗಲು ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದ ರೆಡ್ಡಿಗೆ ಇದೀಗ ಬಳ್ಳಾರಿ ಪ್ರವೇಶಾವಕಾಶ ಸಿಕ್ಕಿದೆ.

ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದಿದ್ರೂ ಜನಾರ್ದನ ರೆಡ್ಡಿಗೆ ಬಳ್ಳಾರಿಗೆ ಹೋಗಲು ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿತ್ತು. ಒಂದು ವೇಳೆ ತೀರ್ಪು ಉಲ್ಲಂಘಿಸಿದ್ರೆ ಮತ್ತೆ ಶಿಕ್ಷೆ ಅನುಭವಿಸಬೇಕಾಗುತ್ತೆ ಅಂತ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿತ್ತು. ಆದ್ರೆ ಜನಾರ್ದನೆ ರೆಡ್ಡಿ , ತಮ್ಮಪತ್ನಿ ಅರುಣಾ ತಂದೆಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಬಳ್ಳಾರಿ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಜಾ ಕಾಲ ಪೀಠ ಜನಾರ್ದನ ರೆಡ್ಡಿಗೆ 2 ವಾರಗಳ ಕಾಲ ಬಳ್ಳಾರಿಯಲ್ಲಿರೋದಕ್ಕೆ ಅನುಮತಿ ನೀಡಿದೆ.

ಅನ್ನಭಾಗ್ಯ ಅಕ್ಕಿ ಕಡಿಮೆಯಾಗುತ್ತಾ…?ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=dZt5NTcgSh4
- Advertisement -

Latest Posts

Don't Miss