‘ಮತ್ತೆ 4 ವರ್ಷ’ ಎಂಬ ಘೋಷಣೆಯಡಿಯಲ್ಲಿ ಅಮೆರಿಕದಾದ್ಯಂತ ಡೊನಾಲ್ಡ್ ಟ್ರಂಪ್ ಚುನಾವಣಾ ಱಲಿ ನಡೆಸುತ್ತಿದ್ದಾರೆ. ಇಂಡಿಯನ್ ಅಮೆರಿಕನ್ಸ್ ಮತಗಳನ್ನ ಸೆಳೆಯೋಕೆ ಟ್ರಂಪ್ ಪ್ರಧಾನಿ ಮೋದಿ ಹೆಸರನ್ನ ಬಳಸಿಕೊಳ್ತಾನೇ ಇದ್ದಾರೆ. ಅದೇ ರೀತಿ ಟ್ವಿಟರ್ನಲ್ಲೂ ಸಹ ಮೋದಿ ಹಾಗೂ ಟ್ರಂಪ್ ಜೊತೆ ಇರೋ ವಿಡಿಯೋ ಒಂದನ್ನ ಶೇರ್ ಮಾಡಲಾಗಿದ್ದು ಇದನ್ನ 10 ಮಿಲಿಯನ್ ಅಮೆರಿಕನ್ನರು ವೀಕ್ಷಣೆ ಮಾಡಿದ್ದಾರೆ.

ಟ್ರಂಪ್ರ ಸಹಾಯಕ ನಿರ್ದೇಶಕಿ ಕಿಮ್ಬರ್ಲಿ ಗುಲಿಫೊಯ್ಲೆ ಕಳೆದ ತಿಂಗಳು ಮೋದಿ ಹಾಗೂ ಟ್ರಂಪ್ ನಡೆದುಕೊಂಡು ಹೋಗ್ತಿದ್ದ ವಿಡಿಯೋವನ್ನ ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ರು. ಈ ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆಗಿರೋದು ಮಾತ್ರವಲ್ಲದೇ ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲೂ ಹರಿದಾಡ್ತಿದೆ. ಇನ್ನು ಟ್ವಿಟರ್ನಲ್ಲಿ ಕಮೆಂಟ್ ಮಾಡಿರೋ ಟ್ರಂಪ್ ಅಭಿಮಾನಿಗಳು ಭಾರತದ ಜೊತೆಗಿನ ಅಮೆರಿಕದ ಸ್ನೇಹ ಕಂಡು ಖುಷಿಯಾಗ್ತಿದೆ ಅಂತಾ ಬರೆದುಕೊಂಡಿದ್ದಾರೆ.
