Saturday, July 12, 2025

Latest Posts

ಕೊರೊನಾ ಸಂಕಷ್ಟ, ಶಾಂಘೈನಲ್ಲಿ ಕಪಲ್ ಮುತ್ತಿಡುವ ಹಾಗಿಲ್ಲ, ಅಪ್ಪಿಕೊಳ್ಳುವ ಹಾಗಿಲ್ಲ..

- Advertisement -

ಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ ಶುರುವಾಗಿದ್ದು, ದಿನಕ್ಕೆ ಲಕ್ಷ ಲಕ್ಷ ಜನ ಕೊರೊನಾದಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಶಾಂಘೈನಲ್ಲಿ ಕಂಡು, ಕೇಳರಿಯದ ರೂಲ್ಸ್ ಜಾರಿ ಮಾಡಲಾಗಿದೆ. ಇಷ್ಟು ದಿನ ಹೊರಗಡೆ ಓಡಾಡುವಂತಿಲ್ಲ, ಮನೆಯಲ್ಲೂ ಮಾಸ್ಕ್ ಹಾಕಿಕೊಂಡಿರಬೇಕು, ಸಾಕು ಪ್ರಾಣಿಗಳನ್ನ ಕೂಡ ಹೊರತರುವಂತಿಲ್ಲ, ಅವುಗಳನ್ನ ಮುಟ್ಟುವಂತಿಲ್ಲ. ಇತ್ಯಾದಿ ರೂಲ್ಸ್‌ಗಳು ಹಾಕಲಾಗಿತ್ತು. ಆದ್ರೆ ಇಂದು ವಿಚಿತ್ರವಾದ ರೂಲ್ಸ್ ಜಾರಿ ಮಾಡಿದ್ದಾರೆ. ಅದೇನಂದ್ರೆ ಕಪಲ್ಸ್ ಕಿಸ್ ಮಾಡುವ ಹಾಗಿಲ್ಲ ಮತ್ತು ಅಪ್ಪಿಕೊಳ್ಳುವ ಹಾಗಿಲ್ಲವೆಂದು.

ಶಾಂಘೈನಲ್ಲಿ ಸೂಪರ್ ಮಾರ್ಕೆಟ್, ಮಾಲ್, ದೊಡ್ಡ ದೊಡ್ಡ ದಿನಸಿ ಅಂಗಡಿಗಳೆಲ್ಲ ಬಂದ್ ಆಗಿದೆ. ಈ ಕಾರಣಕ್ಕೆ ಅಲ್ಲಿನ ಜನರಿಗೆ ದಿನ ನಿತ್ಯದ ವಸ್ತುವನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಇಂಥ ಪರಿಸ್ಥಿತಿಯಲ್ಲಿ, ಅಲ್ಲಿನ ಸರ್ಕಾರ, ಪ್ರತಿದಿನ ಒಂದಲ್ಲ, ಒಂದು ಹೊಸ ಹೊಸ ರೂಲ್ಸ್ ಜಾರಿ ಮಾಡುತ್ತಿದೆ. ಈ ಬಗ್ಗೆ ವೀಡಿಯೋ ಒಂದು ವೈರಲ್ ಆಗಿದ್ದು, ಈ ವೀಡಿಯೋದಲ್ಲಿ ಯುವತಿಯೊಬ್ಬಳು, ಕೋವಿಡ್ ರೂಲ್ಸ್ ಬಗ್ಗೆ ಘೋಷಣೆ ಮಾಡುತ್ತಿದ್ದಾಳೆ.

ಗಂಡ ಹೆಂಡತಿ ಇಂದಿನಿಂದ ಒಟ್ಟಿಗೆ ಮಲಗಬಾರದು. ಮುತ್ತು ಕೊಡಬಾರದು, ಅಪ್ಪಿಕೊಳ್ಳಬಾರದು. ಮನೆ ಜನ ಒಬ್ಬರಿಗೊಬ್ಬರು ಟಚ್ ಮಾಡಬಾರದು ಎಂದು ಆಕೆ ಘೋಷಣೆ ಮಾಡಿದ್ದಾಳೆ. ಇನ್ನೊಂದು ವೀಡಿಯೋದಲ್ಲಿ ಮಹಿಳೆಯೊಬ್ಬಳು, ತನಗೆ ದಿನ ನಿತ್ಯದ ಸಾಮಗ್ರಿ ಸಿಗುತ್ತಿಲ್ಲ ಎಂದು ಹಾಡು ಹಾಡಿದ್ದು, ಈ ವಿಷ ಗೊತ್ತಾದ ಹಾಗೆ, ಆಕೆಯ ಮನೆ ಬಳಿ ಡ್ರೋನ್ ಬಂದಿದೆ. ಅದರಲ್ಲಿ ನೀವು ಬಹುಬೇಗ ಕೊರೊನಾ ಹಾವಳಿಯಿಂದ ಮುಕ್ತರಾಗಬೇಕು ಎಂದಲ್ಲಿ, ನಿಮ್ಮ ಮನೆಯ ಕಿಟಕಿಯನ್ನ ತೆಗೆಯಬೇಡಿ ಎಂಬ ಸಂದೇಶ ಬಂದಿದೆ.

- Advertisement -

Latest Posts

Don't Miss