Tumkuru News: ತುಮಕೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ ಇಂದು ತುಮಕೂರಿಗೆ ಭೇಟಿ ನೀಡಿದ್ದು, ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದ ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.
ಇನ್ಮುಂದೆ ಅಂಗನವಾಡಿ ಮಕ್ಕಳಿಗೆ ಶೂ ಹಾಗೂ ಬಟ್ಟೆ ಭಾಗ್ಯ ಕೊಡಬೇಕು. ಇವತ್ತು ನಾನು ಅಂಗನವಾಡಿಗೆ ಹೋಗಿದ್ದೆ ಅಲ್ಲಿ ಮಕ್ಕಳಿಗೆ ಸರಿಯಾಗಿ ಬಟ್ಟೆ ಹಾಗೂ ಚಪ್ಪಲಿ ಇಲ್ಲ. ನಾನು ಸಿಡಿಪಿಒ ಗೆ ಕೇಳಿದೆ ಏನ್ರಿ ಇದು ಅಂತ, ಅವರು ಸರ್ ಅಂಗನವಾಡಿ ಮಕ್ಕಳಿಗೆ ಎಲ್ಲ ಬಟ್ಟೆ ಶೂ ಕೊಡ್ತಿಲ್ಲ ಅಂದರು. ಮಕ್ಕಳಲ್ಲಿ ಸಮಾನತೆ ಬರಬೇಕು ಎಂದು ಯೂನಿ ಫಾರ್ಮ್ ಕೊಟ್ಟಿರೋದು.
ಸರ್ಕಾರ ಕೊಟ್ಟಿಲ್ಲ ಅಂದ್ರು ತತ್‌ಕ್ಷಣದಲ್ಲಿ ನಮ್ಮ ತಾಲೂಕಿನಲ್ಲಿ ವ್ಯವಸ್ಥೆ ಮಾಡೋಣ ಎಂದು ಎಸಿಯವರ ಜೊತೆ ಮಾತಾಡಿದ್ದೇನೆ. ಇದೀಗ ಬಜೆಟ್ ಮಾಡುವಂತಹ ಸಮಯದಲ್ಲಿ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು. ಅಂಗನವಾಡಿ ಮಕ್ಕಳಿಗೂ ಯೂನಿ ಪೊಅರ್ಮ್ ಹಾಗೂ ಒಳ್ಳೆಯ ಪಾದರಕ್ಷೆ ಗಳನ್ನು ಕೊಡಿಸಲು ಸರ್ಕಾರದ ಮೇಲೆ ಒತ್ತಡ ತಂದು ಅದನ್ನು ಮಾಡಿಸುತ್ತೇನೆ ಎಂಬ ವಿಶ್ವಾಸ ಇದೆ ಎಂದು ರಾಜಣ್ಣ ಹೇಳಿದ್ದಾರೆ.
ಅದೇನಾದ್ರೂ ತಡವಾದರೆ ನಮ್ಮ ಕ್ಷೇತ್ರದಲ್ಲಿ ಅದನ್ನು ಜಾರಿ ಮಾಡ್ತಿವಿ. ಬೇರೆ ಎಲ್ಲಾದ್ರೂ ಹಣವನ್ನು ಕ್ರೋಡಿಕರಿಸಿ ತತಕ್ಷಣ ಜಾರಿ ಮಾಡ್ಸೊಣ. ಸಿಎಂ ಸಿದ್ದರಾಮಯ್ಯ ಮಧುಗಿರಿಯಲ್ಲಿ ಶೂ ಭಾಗ್ಯಕ್ಕೆ ಚಾಲನೆ ನೀಡಿದ್ದರು. ಸಿಎಂ ಸಿದ್ದರಾಮಯ್ಯ ರನ್ನು ಮತ್ತೊಂದು ಭಾಗ್ಯಕ್ಕಾಗಿ ಓಲೈಸುವೆ ಎಂದು ಇದೇ ವೇಳೆ ರಾಜಣ್ಣ ಹೇಳಿದ್ದಾರೆ.



