Tumakuru News: ತುಮಕೂರು: ತುಮಕೂರಿನಲ್ಲಿ ಬಿಜೆಪಿ ಮುಖಂಡರೋರ್ವ ಅಧಿಕಾರಿಗಳಿಗೆ ಲಂಚ ನೀಡಲು ಭಿಕ್ಷೆ ಬೇಡಿದ್ದಾರೆ. ತಾಲ್ಲೂಕು ಪಂಚಾಯ್ತಿ ಎದುರು ಭಿಕ್ಷಾಟನೆ ಮಾಡುವ ಮೂಲಕ ಪ್ರತಿಭಟನೆ ಮಾಡಿದ್ದಾರೆ.
ತುಮಕೂರು ಜಿಲ್ಲೆ ಪಾವಗಡದಲ್ಲಿ ತಾಲೂಕು ಪಂಚಾಯ್ತಿ ಎದುರು ಈ ಘಟನೆ ನಡೆದಿದ್ದು, ಬಿಜೆಪಿ ಓಬಿಸಿ ಮುಖಂಡ ಮುರುಳಿ ಎಂಬುವರು ಅಧಿಕಾರಿಗಳಿಗೆ ಲಂಚ ನೀಡಲು ಭಿಕ್ಷೆ ಬೇಡಿದ್ದಾರೆ. ನಿವೇಶನದ ಖಾತೆ ಬದಲಾವಣೆಗೆ, ವೆಂಕಾಟಪುರ ಗ್ರಾಮ ಪಂಚಾಯ್ತಿ ಕಾರ್ಯದರ್ಶಿ ಹೇಮಂತ್ ಲಂಚ ಕೇಳಿದ್ದರೆಂದು ಮುರುಳಿ ಆರೋಪಿಸಿದ್ದು, ಇದಕ್ಕಾಗಿಯೇ ಅನಿತಾ ಎಂಬುವರ ಹೆಸರಿನಲ್ಲಿದ್ದ 30×40 ನಿವೇಶನದ ಖಾತೆ ಬದಲಾವಣೆಗೆ ವಿಳಂಬ ಮಾಡಲಾಗಿತ್ತು. ಅಲ್ಲದೇ ಅಗತ್ಯ ದಾಖಲೆ ನೀಡಿದ್ರೂ ಖಾತೆ ಬದಲಾಣೆಗೆ ಕಾರ್ಯದರ್ಶಿ ಹೇಮಂತ್ ಸತಾಯಿಸುತ್ತಿದ್ದ ಎನ್ನಲಾಗಿದೆ.
ಸರ್ಕಾರಿ ಶುಲ್ಕ ಪಾವತಿ ಮಾಡಿದ್ದರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದಕ್ಕಾಗಿ, ಪಂಚಾಯ್ತಿ ಅಧಿಕಾರಿಗೆ ಲಂಚ ನೀಡಲು ಕೈಲಾದಷ್ಟು ಹಣ ನೀಡುವಂತೆ ಮುರುಳಿ ಭಿಕ್ಷೆ ಬೇಡಿದ್ದಾರೆ. ಅಲ್ಲದೇ, ಗ್ರಾ ಪಂ ಕಾರ್ಯದರ್ಶಿ ಹೇಮಂತ್ ವಿರುದ್ದ ಕಾರ್ಯ ನಿರ್ವಾಹಕ ಅಧಿಕಾರಿಗೆ ದೂರು ನೀಡಲಾಗಿದ್ದು, ಭ್ರಷ್ಟ ಅಧಿಕಾರಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.

