Tumakuru News: ತುಮಕೂರು: ಚಿತ್ರ ನಿರ್ಮಾಪಕನಿಂದ ಮಹಿಳಾ ನಟಿಯ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಚೌದರಿ ಮಾತನಾಡಿದ್ದಾರೆ.
ಸಂಬಂಧಪಟ್ಟ ಡಿಸಿಪಿಗೆ ಪತ್ರ ಬರೆದು ಸಂಪೂರ್ಣ ಮಾಹಿತಿ ಆಯೋಗಕ್ಕೆ ನೀಡುವಂತೆ ಸೂಚಿಸುತ್ತೇನೆ. ಲೈಂಗಿಕ ಕಿರುಕುಳ ಹಾಗೂ ಮಾನಸಿಕ ಹಿಂಸೆ ಬಗ್ಗೆ ಮಹಿಳೆಯರು ಆಯೋಗಕ್ಕೆ ದೂರು ಕೊಡುತ್ತಿರುವುದು ಸಂತೋಷಕರ ವಿಚಾರ. ಸಿನಿಮಾ ಕ್ಷೇತ್ರಗಳಲ್ಲಿ ಲೈಂಗಿಕ ಮಾನಸಿಕ ಕಿರುಕುಳ ಆದರೆ ಅದು ಹೊರಗಡೆ ಬರುವುದಿಲ್ಲ. ಇದರಿಂದ ಮಾನಹಾನಿ ಆಗುತ್ತದೆ ಎಂದು ಹೆದರುವವರೇ ಹೆಚ್ಚು. ಆದರೆ ಈಗ ಹೋರಾಟ ಮನೋಭಾವ ಬಂದಿರುವುದು ಖುಷಿ ವಿಚಾರ ಎಂದಿದ್ದಾರೆ.
ಸಿನಿಮಾ ನಿರ್ದೇಶಕ ಈ ರೀತಿ ಮಾಡಿದ್ದಾನೆ ಎಂದರೆ ಅವರ ಮನಸ್ಥಿತಿ ಮೊದಲು ಬದಲಾಗಬೇಕು.ರಾಮಾಯಣ ಮಹಾಕಾವ್ಯದಲ್ಲಿನ ಅರ್ಥ ಸತ್ಯ ನ್ಯಾಯ ನೀತಿ ಇರೋದು ಆದರೆ ಈಗ ಇದರಿಂದ ದೂರ ಸರಿದಿರುವುದೇ ಇಂತಹ ಘಟನೆಗಳಿಗೆ ಕಾರಣ. ಪೊಲೀಸರು ಪ್ರಕರಣ ದಾಖಲಿಸುತ್ತಾರೆ, ಚಾಜ್೯ ಶೀಟ್ ಸಲ್ಲಿಕೆ ಮಾಡ್ತಾರೆ. ನಂತರ ನ್ಯಾಯಾಲಯದಲ್ಲಿ ಪರ ವಿರೋಧ ಚರ್ಚೆ ಆಗುತ್ತೆ.
ನಮ್ಮ ಕಾನೂನುಗಳು ಏನು ದುರ್ಬಲವಾಗಿಲ್ಲ. ಅತ್ಯಾಚಾರಿ ಎಷ್ಟೇ ದೊಡ್ಡವನಾದರೂ ಕೂಡ ಆತನಿಗೆ ಶಿಕ್ಷೆ ಈ ನೆಲದಲ್ಲಿ ಆಗಿದೆ ಅನ್ನೋದು ನಿಮಗೆಲ್ಲ ಗೊತ್ತಿದೆ. ನಟಿಗೆ ಬ್ಲಾಕ್ ಮೇಲ್ ಅಥವಾ ಬೇರೆ ಏನೇ ಮಾಡಿದರೂ ಕೂಡ ಅದಕ್ಕೆ ತಕ್ಕ ಶಿಕ್ಷೆ ಆತ ಅನುಭವಿಸುತ್ತಾನೆ ಎಂದು ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.