Tumakuru News: ಪುಂಡರ ವ್ಹೀಲಿಂಗ್ ಅಟ್ಟಹಾಸ, ಹಾಲು ತರಲು ಹೊರಟಿದ್ದ ವ್ಯಕ್ತಿ ಬಲಿ

Tumakuru News: ವ್ಹೀಲಿಂಗ್ ಮಾಡುತ್ತಿದ್ದ ಪುಂಡರ ಅಟ್ಟಹಾಸಕ್ಕೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಲಿಯಾದ ಘಟನೆ ತುಮಕೂರಿನಲ್ಲಿ ನಡೆದಿದೆ.

ಬೆಳಿಗ್ಗೆ ಹಾಲು ತರಲು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ವಿ.ಟಿ.ತಿಪ್ಪೇಸ್ವಾಮಿ ಹೊರಟಿದ್ದಾಗ, ಟುಡಾ ಕಚೇರಿಯ ಬಳಿ ವ್ಹೀಲಿಂಗ್ ಪುಂಡರ ಗಾಡಿಗೆ ಸಿಲುಕಿ ಅಪಘಾತವಾಗಿ, ಗಂಭೀರವಾಗಿ ಗಾಯಗೊಂಡಿದ್ದರು. ಬೈಕ್ ಡಿಕ್ಕಿ ಹೊಡೆದ ಪರಿಣಾಮ ತಿಪ್ಪೇಸ್ವಾಮಿ ಅವರ ತಲೆ, ಕಾಲಿಗೆ ಗಂಭೀರಗಾಯವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ, ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾರೆ.

ಇನ್ನು ಸ್ಥಳಕ್ಕೆ ಭೇಟಿ ನೀಡಿರುವ ಸಂಚಾರಿ ಪೊಲೀಸ್ ಠಾಣಾ ಅಧಿಕಾರಿಗಳು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಹುಡುಕಾಟಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

About The Author