Tumakuru News: ನಕಲಿ ಮದ್ಯ ಸೇವಿಸಿ ಆಸ್ಪತ್ರೆ ಪಾಲಾದ ಕರ್ನಾಟಕ- ಆಂಧ್ರ ಗಡಿ ಗ್ರಾಮಸ್ಥರು

Tumakuru News: ತುಮಕೂರು: ನಕಲಿ ಮದ್ಯ ಸೇವಿಸಿದ ಹಿನ್ನೆಲೆ ಕರ್ನಾಟಕ- ಆಂಧ್ರ ಗಡಿ ಗ್ರಾಮಸ್ಥರು ಅನಾರೋಗ್ಯಕ್ಕೀಡಾಗಿ, ಆಸ್ಪತ್ರೆಗೆ ಸೇರುವ ಸ್ಥಿತಿ ಬಂದಿದೆ.

ತುಮಕೂರು ಜಿಲ್ಲೆ ಗಡಿಭಾಗದ ಚರ್ಲೋಪಲ್ಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ತುಮಕೂರು ಮಧುಗಿರಿಯ ತೆರಿಯೂರು- ಚಿಕ್ಕದಾಳವಟ್ಟ ಗ್ರಾಮದ 10 ಮಂದಿ ಅಸ್ವಸ್ಥರಾಗಿದ್ದು,  ಆಂಧ್ರದ ಚೌಲೂರು ಗ್ರಾಮದ 5 ಮಂದಿ ಸೇರಿ 13 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಹಿಂದೂಪುರದ ಆಸ್ಪತ್ರೆಯಲ್ಲಿ ಆಂದ್ರದ ಚೌಲೂರು ಗ್ರಾಮದ ನಾಗರಾಜು, ನಿಂಗಕ್ಕ, ಮಾರಪ್ಪ, ದಾಸಪ್ಪ, ಚಿಕ್ಕನರಸಿಂಹಯ್ಯ, ನಾಗರಾಜುಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಬೆಂಗಳೂರಿನ ನಿಮ್ಹಾನ್ ನಲ್ಲಿ ಟಿ ನಾಗರಾಜು ಚಿಕಿತ್ಸೆ, ಹನುಮಕ್ಕ, ದಾಸಪ್ಪ ಚಿಕಿತ್ಸೆ ಪಡೆದು, ಡಿಚ್ಚಾರ್ಜ್ ಆಗಿದ್ದಾರೆ.

ವಾರದ ಬಳಿಕ ತಪಾಸಣೆಗೆ ಬರುವಂತೆ ವೈದ್ಯರು ಹನುಮಕ್ಕ, ದಾಸಪ್ಪರಿಗೆ ಸೂಚಿಸಿದ್ದಾರೆ. ಆದರೆ ತೆರಿಯೂರು ಗ್ರಾಮದ ಸುಮಾರು 10 ಕ್ಕೂ ಕುಟುಂಬಗಳ ಸದಸ್ಯರು ಆಸ್ಪತ್ರೆಯಲ್ಲೇ ವಾಸ್ತವ್ಯ ಹೂಡಿದ್ದಾರೆ.

About The Author