Tumakuru: ತಿಪಟೂರು: ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ಎಡವಟ್ಟಿನಿಂದ ರಾತ್ರಿ ಸುರಿದ ಮಳೆ ನೀರು ಕ್ರೈಸ್ತ ಪ್ರಾರ್ಥನಾ ಮಂದಿರಕ್ಕೆ ಭಾರೀ ಅವಾಂತರ ಸೃಷ್ಠಿಮಾಡಿದ್ದು,ಭಕ್ತರು ಸೇರಿದಂತೆ ನೂರಾರು ಜನ ಮಹಿಳೆಯರು ಮಕ್ಕಳು ಪರದಾಡಿದ ಘಟನೆ ನಗರದ ಹೊರಹೊಲಯದ ಹುಚ್ಚಗೊಂಡನಹಳ್ಳಿ ಬಳಿ ಇರುವ ಕಲ್ವರಿ ಪ್ರಾರ್ಥನಾ ಮಂದಿರದಲ್ಲಿ ನಡೆದಿದೆ.
ಹೆದ್ದಾರಿಯಲ್ಲಿ ಬೀಳುವ ಮಳೆನೀರು ಸರಾಗವಾಗಿ ಹರಿದುಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಮಾಡಿಲ್ಲ.ಹೆದ್ದಾರಿ ಅಧಿಕಾರಿಗಳು ಈ ಹಿಂದೆ ಪ್ರಾರ್ಥನ ಮಂದಿರಕ್ಕೆ ನಿರ್ಮಾಣವಾಗಿದ, ಚರಂಡಿಯನ್ನ ಮುಚ್ಚಿದ್ದಾರೆ.ಹೆದ್ದಾರಿಯ ತಗ್ಗು ಪ್ರದೇಶದಲ್ಲಿಯೇ ಚರ್ಚ್ ಇರುವ ಕಾರಣ ಕೊಳಚೆ ನೀರು ಪ್ರಾರ್ಥನಾ ಮಂದಿರಕ್ಕೆ ನುಗ್ಗಿದ ಕಾರಣ ಪ್ರಾರ್ಥನ ಮಂದಿರದ ವಸ್ತುಗಳು ಹಾಳಾಗಿದ್ದು.ರಾತ್ರಿ ಪ್ರಾರ್ಥನೆಗೆ ಬಂದಿದ ಭಕ್ತರು ನೀರು ಹೊರಹಾಕಲು ಪರದಾಡಿದ್ದಾರೆ.ಇನ್ನೂಂದೆಡೆ ಹತ್ತಾರು ಹಾವು ಚೇಳುಗಳು ಚರ್ಚ್ ಒಳಗಡೆ ನುಗ್ಗಿ ಭಕ್ತರು ಪ್ರಾಣಾಪಾಯಕ್ಕೆ ಸಿಲುಕುವಂತ್ತಾಗಿದು.ತಕ್ಷಣ ಭಕ್ತರು ಹಾಗೂ ಸ್ಥಳೀಯರ ಸಹಾಯದಿಂದ ಹಾವು ಚೇಳುಗಳನ್ನ ಹೊರಹಾಕಲಾಗಿದೆ. ಚರ್ಚ್ ಮುಂಭಾಗದಲ್ಲಿ ಸುಮಾರು 20ಅಡಿ ಆಳದ ಕಲ್ಲುಬಾವಿಗೆ ಹೆದ್ದಾರಿಯಿಂದ ನೀರು ಕಲ್ಲುಬಾವಿಗೆ ತುಂಬಿದ್ದು. ಪ್ರಾರ್ಥನೆಗೆ ಬರುವ ಮಹಿಳೆಯರು ಹಾಗೂ ಮಕ್ಕಳ ವೃದ್ದರು ಅಪಾಯ ಎದುರಿಸುವಂತ್ತಾಗಿದು.
ಹೆದ್ದಾರಿ ತಡೆಗೋಡೆ ಇಲ್ಲದೆ ಸ್ಪಲ್ಪ ಎಚ್ಚರತಪ್ಪಿದರು ಪ್ರಾಮಾಣಿಕರು ವಾಹನ ಸವಾರರು ಪ್ರಾಣಾಪಾಯಕ್ಕೆ ಸಿಲುಕುವ ಅಪಾಯವಿದೆ.ಪ್ರತಿದಿನ ಪ್ರಾರ್ಥನೆಗಾಗಿ ನೂರಾರು ಮಹಿಳೆಯರು ಚರ್ಚ್ ಗೆ ಆಗಮಿಸುತ್ತಾರೆ,ಕಲ್ಲುಬಾವಿ ತುಂಬಿದ್ದು ಯಾವುದೇ ರಕ್ಷಣೆ ಬೇಲಿಯಾಗಲಿ ತಡೆಗೋಡೆಯಾಗಲಿ ಇಲ್ಲದೆಇರುವ ಕಾರಣ,ಅಪಾಯ ಎದುರಾಗುವ ಸಂಭವವಿದೆ.ಪ್ರಾರ್ಥನ ಮಂದಿರಹಾಗೂ ಭಕ್ತರ ಹಿತಕಾಯಬೇಕಾದ ಜಿಲ್ಲಾಡಳಿತ ಅನೇಕ ಭಾರಿ ಮನವಿ ಮಾಡಿದರು ಯಾವುದೇ ಕ್ರಮಕೈಗೊಳ್ಳದೆ ಕೈಕಟ್ಟಿಕುಳಿತಿದೆ,ಚರ್ಚ್ ನ ಯಾವುದೇ ಭಕ್ತರಿಗೆ ಅಪಾಯವಾದರೂ ಜಿಲ್ಲಾಡಳಿತ ನೇರ ಹೊಣೆಯಾಗಬೇಕಿದೆ.ಹೆದ್ದಾರಿ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಕಲ್ವರಿ ಪ್ರಾರ್ಥನಾ ಮಂದಿರದ ಧರ್ಮಾಧಿಕಾರಿ ಫಾಸ್ಟರ್ ಜಾಯ್ ಜಾಕೇಬ್ ಒತ್ತಾಯಿಸಿದ್ದಾರೆ.