Ph.D ಕೋರ್ಸ್ ವರ್ಕ್ ತರಗತಿಗಳನ್ನ ಆರು ತಿಂಗಳಲ್ಲಿ ಪೂರ್ಣಗೊಳಿಸಿ, ಪರೀಕ್ಷೆಯಾದ ಒಂದೇ ಗಂಟೆಯಲ್ಲೇ ಫಲಿತಾಂಶ ಪ್ರಕಟಿಸಿ, ಅದೇ ದಿನ ತಾತ್ಕಾಲಿಕ ನೋಂದಣಿ ದೃಢೀಕರಣ ಪತ್ರ ವಿತರಿಸುವ ಅತ್ಯಂತ ತ್ವರಿತ ವ್ಯವಸ್ಥೆ ಅಳವಡಿಸಿಕೊಂಡಿದೆ. ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ವೇಣುಗೋಪಾಲ್ ಶ್ಲಾಘಿಸಿದರು. ಜೊತೆಗೆ ಕೋಲಾರದ ವಿಶ್ವವಿದ್ಯಾಲಯದ ಆಡಳಿತ ಕಚೇರಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಮಾಣಪತ್ರ ವಿತರಿಸಿದರು
ಟಮಕದಲ್ಲಿರುವ ಉತ್ತರ ವಿಶ್ವವಿದ್ಯಾಲದ ಆಡಳಿತ ಕಚೇರಿಯಲ್ಲಿ 9 ವಿಷಯಗಳ ಪಿ.ಎಚ್‌ಡಿ ಕೋರ್ಸಿನ 78 ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದ್ದಾರೆ. ವಿವಿಧ ಕೋರ್ಸುಗಳಿಗೆ ನೀಡಿರುವ ಅವಕಾಶ, ಆಡಳಿತ, ಬೋಧನಾ ವೈಖರಿ ಮಾದರಿಯಾಗಿದೆ. ಇದರಿಂದಾಗಿ ಸಂಶೋಧನಾರ್ಥಿಗಳು ಅತಿ ಕಡಿಮೆ ಅವಧಿಯಲ್ಲಿ ಕೋರ್ಸ್ ಮುಗಿಸಿ ಡಾಕ್ಟರೇಟ್ ಪದವಿ ಪಡೆಯಲು ಸಹಕಾರಿಯಾಗಿದೆ ಎಂದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ನಿರಂಜನ್ ವಾನಳ್ಳಿ ಮಾತನಾಡಿ, ವಿಶ್ವವಿದ್ಯಾಲಯ ಸ್ಥಾಪನೆಯಾದ ಬಳಿಕ ನಡೆಸಿದ ಮೊದಲ Ph.D ಕಾರ್ಯಕ್ರಮವೇ ಇದು. ನಾವು ಈ ಅವಧಿಯಲ್ಲಿ ಹಲವು ದಾಖಲೆಗಳನ್ನು ನಿರ್ಮಿಸುವ ದಿಟ್ಟ ಪ್ರಯತ್ನ ನಡೆಸುತ್ತಿದ್ದೇವೆ. ಒಂದೇ ದಿನದಲ್ಲಿ ನೋಂದಣಿ ದೃಢೀಕರಣ ಪತ್ರ ವಿತರಣೆ ಮಾಡಿರುವುದು ನಮ್ಮ ವೇಗದ ಕಾರ್ಯಪಟುತ್ವದ ನಿದರ್ಶನವಾಗಿದೆ ಎಂದು ತಿಳಿಸಿದರು.
B.Ed ಮತ್ತಿತರ ಪರೀಕ್ಷಾ ಫಲಿತಾಂಶ ಸಹ ಒಂದೇ ದಿನದಲ್ಲಿ ಮೌಲ್ಯಮಾಪನ ಮಾಡಿ ನೀಡಿದ ಖ್ಯಾತಿ ಹೊಂದಿದೆ. ಮೌಲ್ಯಮಾಪನ ಕುಲಸಚಿವ ಪ್ರೊ. ಲೋಕನಾಥ್ ಮಾತನಾಡಿ, ಸಂಶೋಧನಾ ವಿದ್ಯಾರ್ಥಿಗಳಿಗೆ ನಮ್ಮ ವಿ.ವಿ ಉತ್ತಮ ಅವಕಾಶ ಕಲ್ಪಿಸಿದೆ. ಅತಿ ಶೀಘ್ರವಾಗಿ ಸಂಶೋಧನೆ ಮುಕ್ತಾಯ ಮಾಡಿ ಮಹಾಪ್ರಬಂಧ ಸಲ್ಲಿಸಿ ಉಳಿದೆಲ್ಲಾ ವಿಶ್ವವಿದ್ಯಾಲಯಗಳಿಗಿಂತ ಉತ್ತಮ ಮಟ್ಟದಲ್ಲಿ ಪ್ರಗತಿ ಸಾಧಿಸಬೇಕು ಎಂದು ಕಿವಿಮಾತು ಹೇಳಿದರು.
ವರದಿ : ಲಾವಣ್ಯ ಅನಿಗೋಳ

