Turkey, Syria Earthquake
ಬೆಂಗಳೂರು(ಫೆ.8): ಟರ್ಕಿ, ಸಿರಿಯಾ ದೇಶದಲ್ಲಿ ಎಂದೂ ಕಂಡು ಕೇಳರಿಯದಂತೆ ಭೂಕಂಪನ ಸಂಭವಿಸಿದೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯಲ್ಲಿ ಏರಿಕೆಯಾಗುತ್ತಿದ್ದು, ಎಲ್ಲೆಲ್ಲೂ ಚೀರಾಟದ ಕೂಗು ಕೇಳಿಬರುತ್ತಿದೆ. ಕಟ್ಟಡಗಳು ಕುಸಿದು ಬಿದ್ದು, ಮಣ್ಣಿನ ಅಡಿ ಊತುಕೊಂಡ ಜನಗಳು ಸಾವು ಬದುಕಿನ ಅಡಿ ನರಳಿ, ಕೊನೆಗೆ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದೀಗ ಇಲ್ಲಿ ಸಂಭವಿಸಿರುವ ಸಾವಿನ ಸಂಖ್ಯೆ 7 ಸಾವಿರಕ್ಕೂ ಅಧಿಕವಾಗಿ ಕಂಡುಬರುತ್ತಿದೆ.
ಟರ್ಕಿ ದೇಶದಲ್ಲಿ ಇದೀಗ ವಾತಾವರಣವೂ ತೀವ್ರವಾದ ಬದಲಾವಣೆ ಆಗುತ್ತಿದ್ದು, ಕೊರೆವ ಚಳಿಯಲ್ಲಿ ಜನ ಜೀವನ ಇನ್ನೂ ಅಸ್ತವ್ಯಸ್ತವಾಗಿದೆ. ಅದೆಷ್ಟೋ ಜನಗಳ ಕನಸಿನ ಸೂರು ಒಂದೇ ಕ್ಷಣದಲ್ಲಿ ಭೂಕಂಪನಕ್ಕೆ ನಲುಗಿ ಹೋಗಿದೆ. ಕಟ್ಟಡಗಳು ಮುಗಿಲೆತ್ತರದಿಂದ ಕುಸಿದು ಬಿದ್ದಿವೆ. ಮಕ್ಕಳು, ವೃದ್ಧರು ಹೀಗೆ ಪ್ರತಿಯೊಬ್ಬರೂ ಮನೆಯಲ್ಲಿ ಇರಲು ಭಯಭೀತರಾಗಿದ್ದಾರೆ. ಇನ್ನು ತಜ್ಱರು ಮೃತರ ಸಂಖ್ಯೆಯಲ್ಲಿ ಇನ್ನೂ ಏರಿಕೆಯಾಗಬಹುದು ಎಂದು ಹೇಳಿದ್ದಾರೆ.
ಟರ್ಕಿ ಮತ್ತು ಸಿರಿಯಾ ಭೂಕಂಪ ಪ್ರದೇಶದ ದೃಶ್ಯಗಳು ಸ್ಮಶಾನ ಸದೃಶವಾಗಿವೆ. ಕಟ್ಟಡದ ಅವಶೇಷಗಳಿಗೆ ಚೀತ್ಕಾರಗಳು ಇನ್ನೂ ಕೇಳಿಬರುತ್ತಿವೆ. ಹಗಲಿರುಳೆನ್ನದೇ, ಕೊರೆವ ಚಳಿಯನ್ನೂ ಲೆಕ್ಕಿಸದೇ ರಕ್ಷಣಾ ಸಿಬ್ಬಂದಿ ರಕ್ಷಣೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಟರ್ಕಿ ಮತ್ತು ಸಿರಿಯಾ ದುರಂತಕ್ಕೆ ಮರುಕ ವ್ಯಕ್ತಪಡಿಸಿರುವ ಮಿತ್ರ ರಾಷ್ಟ್ರಗಳು ನೆರವಿನ ಹಸ್ತ ಚಾಚಿದ್ದು, ಇನ್ನು ನಾರ್ಮಲ್ ದಿನಗಳಾಗೋಕೆ ಹಲವಾರು ದಿನಗಳೇ ಬೇಕಾಗಿದೆ.