Devotional tips
ನಿಮ್ಮ ಮನೆಯಲ್ಲಿ ಅನಾರೋಗ್ಯ ಸಮಸ್ಯೆಗಳು ಪದೇ ಪದೇ ಕಾಡುತ್ತಿದ್ದರೆ ಗಂಡ ,ಹೆಂಡತಿ ಜಗಳ ಹೆಚಾಗುತ್ತಿದ್ದರೆ ಹಣಕಾಸಿನ ಸಮಸ್ಯೆ ಹೆಚ್ಚಾದರೆ ಅರಿಶಿಣದಿಂದ ಮನೆಯ ಯಜಮಾನಿ ಈ ಒಂದು ಚಿಕ್ಕ ಕೆಲಸವನ್ನು ನಿಯಮ ಬದ್ದವಾಗಿ ಮಾಡಬೇಕು .ಹಾಗಾದರೆ ಯಾವರೀತಿ ಯಾವದಿನ ಮಾಡಿದರೆ ವಿಶೇಷವಾಗಿ ಲಕ್ಷ್ಮೀದೇವಿಯು ಮನೆಗೆ ಬಂದು ಶಾಶ್ವವಾತವಾಗಿ ನೆಲೆಸುತ್ತಾಳೆ ಎಂದು ಇವತ್ತಿನ ಸಂಚಿಕೆಯಲ್ಲಿ ತಿಳಿದು ಕೊಳ್ಳೋಣ ಬನ್ನಿ .
ಅರಶಿನ ಅಂದರೆ ಸಾಕ್ಷಾತ್ ಮಹಾಲಕ್ಷ್ಮಿಯ ಸ್ವರೂಪ ,ಶಾಸ್ತ್ರಗಳಲ್ಲಿ ಅರಶಿನಕ್ಕೆ ಅದರದ್ದೇ ಅದ ಮಹತ್ವವಿದೆ , ನವಗ್ರಹಗಳಲ್ಲಿ ಗುರುವಿಗೆ ಅತ್ಯಂತ ಪ್ರಿಯವಾದದ್ದು , ಗುರುವಿನ ಅನುಗ್ರಹ ಪಡೆಯಬೇಕಾದರೆ ಹಾಗು ಗುರುಬಲ ಹೆಚ್ಚಾಗಬೇಕಾದರೆ ಅರಿಶಿನದಿಂದ ಈ ಒಂದು ಕೆಲಸವನ್ನು ಮಾಡಬೇಕು ಮನುಷ್ಯರಿಗೆ ಗುರುಬಲವಿದ್ದರೆ ಮಾಡುವ ಕಾರ್ಯಗಳಲ್ಲಿ ಯಶಸ್ಸು ಕಾಣಲು ಸದ್ಯವಾಗುತ್ತದೆ ಹಾಗು ಕೀರ್ತಿ ಪ್ರತಿಷ್ಠೆ ಗಳಿಸಲು ಸಾಧ್ಯವಾಗುತ್ತದೆ ,ಗುರುಬಲವಿದ್ದ ಮನೆಯಲ್ಲಿ ಕಷ್ಟಗಳು ಅವರ ಬಾಗಿಲ ಹತ್ತಿರಾನೂ ಬರುವುದಿಲ್ಲ ಎಂಬ ಮಾತಿದೆ .
ಹಾಗಾದರೆ ಗುರುಬಲ ಪ್ರಾಪ್ತಿಯಾಗಬೇಕು ಎಂದರೆ ನಾವು ಹೇಳುವ ಈ ಒಂದು ಚಿಕ್ಕ ಕೆಲಸ ಮಾಡಿದರೆ ಸಾಕು ಗುರುಬಲ ತಾನಾಗಿಯೇ ಹೆಚ್ಚಾಗುತ್ತದೆ .ಹಾಗಾದರೆ ಆ ಕೆಲಸ ಯಾವುದು ಹೇಗೆ ಮಾಡಬೇಕು ಎಂದು ತಿಳಿದು ಕೊಳ್ಳೋಣ ಬನ್ನಿ …
ಈ ಕೆಲಸವನ್ನು ಪ್ರತಿ ಗುರುವಾರದ ದಿನ ನೀವು ಮಾಡಬೇಕು ಹೇಗೆದ೦ರೆ ,ಮೊದಲು ಸ್ವಲ್ಪ ಅರಿಶಿನ ತೆಗೆದುಕೊಂಡು ನೀರಿನಿಂದ ಬೆರೆಸಿ ಹಣೆಗೆ ತಿಲಕವಾಗಿ ಪ್ರತಿ ಗುರುವಾರ ಇಡುತ್ತಾ ಬರಬೇಕು. ಈ ಕೆಲಸ ಮಾಡುವುದರಿಂದ ಲಕ್ಷ್ಮಿದೇವಿಯ ವಿಶೇಷವಾದ ಅನುಗ್ರಹದ ಜೊತೆಗೆ ಗುರುಬಲ ಹೆಚ್ಚಾಗುತ್ತಾ ಹೋಗುತ್ತದೆ. ಹಾಗು ನಿಮ್ಮ ತೊಂದರೆಗಳು ದಿನೇದಿನೇ ಕಡಿಮೆ ಯಾಗುತ್ತಾ ಹೋಗುವುದು ನೀವೇ ಗಮನಿಸ ಬಹುದು.
ಎರಡನೇಯದಾಗಿ ಹುಣ್ಣಿಮೆಯ ದಿನ ಸಾಯಂಕಾಲ ಆರುಗಂಟೆಯ ನಂತರ ಹರಿಶಿನ ಹಾಗು ತುಪ್ಪವನ್ನು ಬೆರಸಿ ಮನೆಯ ಬಾಗಿಲಿನ ಮೇಲೆ ಈ ಒಂದು ಕೆಲಸವನ್ನು ಮಾಡಬೇಕು ಅದೇನೇದ೦ರೆ ಬಾಗಿಲಿನ ಮೇಲೆ ಮೂರೂ ಚಿಕ್ಕದಾದ ಸ್ವಸ್ತಿಕ್ ಚಿನ್ಹೆಯ್ನನು ಬಿಡಿಸಬೇಕು ,ಬಿಡಿಸಿದ ನಂತರ ಮನೆಯಲ್ಲಿ ದೀಪಾರಾಧನೆ ಮಾಡಬೇಕು ,ಹೀಗೆ ಪ್ರತಿ ಹುಣ್ಣಿಮೆಯ ದಿನ ಸಂಜೆ ಆರು ಗಂಟೆಯ ನಂತರ ಈ ರೀತಿ ಯಾರು ಮಾಡುತ್ತಾ ಬರುತ್ತಾರೋ ಅವರ ಮನೆಗೆ ನಕಾರಾತ್ಮಕ ಶಕ್ತಿಗಳು ಒಳಗಡೆ ಪ್ರವೇಶಿಸುವುದಿಲ್ಲ .ಹೀಗೆ ಮಾಡಿದರೆ ಲಕ್ಷ್ಮೀದೇವಿಯ ಅನುಗ್ರಹದಿಂದ ಮನೆಯಲ್ಲಿ ವಿಶೇಷವಾದ ಬದಲಾವಣೆಗಳನ್ನು ನೀವು ಕಾಣಬಹುದು ,ಹಾಗು ಮನೆಯ ಯಜಮಾನ ಮಾಡುವ ಎಲ್ಲ ಕೆಲಸಗಳು ಸಫಲವಾಗಿ ಕೂಡಿಬರುತ್ತದೆ. .
ಈ ಎರಡು ಕೆಲಸದ ಜೊತೆಗೆ ಮತ್ತೊಂದು ವಿಶೇಷವಾದ ಅರಿಶಿನದ ತಂತ್ರವನ್ನು ಮಾಡಬೇಕು. ಅದೇನೇದ೦ರೆ ಆರು ಶುಕ್ರವಾರ ಮನೆಯ ಯಜಮಾನಿ ಅಥವಾ ಯಜಮಾನ ಅರಶಿನದ ಜೊತೆಗೆ ತುಪ್ಪವನ್ನು ಬೆರಸಿ ಸ್ನಾನದ ಮುಂಚೆ ಮೈಗೆ ಹಚ್ಚಿಕೊಂಡು ಸ್ನಾನ ಮಾಡಿದರೆ ಸಾಕ್ಷಾತ್ ಲಕ್ಷ್ಮೀದೇವಿಯಾ ಅನುಗ್ರಹ ಲಭಿಸುತ್ತದೆ . ಹಾಗು ಲಕ್ಷ್ಮೀದೇವಿಯು ನಿಮ್ಮ ಮನೆಗೆ ಬಂದು ನೆಲೆಸುತ್ತಾಳೆ ,ಹಣಕಾಸಿನ ತೊಂದ್ರೆಗಳು ದೂರವಾಗುತ್ತದೆ , ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ ಹಾಗು ಪ್ರತಿನಿತ್ಯ ಸ್ನಾನ ಮಾಡುವಗ ನೀರಿಗೆ ಸ್ವಲ್ಪ ಅರಿಶಿನ ಬೆರಸಿ ಸ್ನಾನ ಮಾಡಿದರೆ ಅದ್ಭುತವಾದ ಫಲಿತಾಂಶವನ್ನು ನೋಡಬಹುದು .ಈ ಮೂರು ರೀತಿಯಾದ ಅರಿಶಿನದ ಮಹತ್ವವನ್ನು ಮಾಡುತ್ತಾ ಬಂದರೆ ನಿಮಗೂ ನಿಮ್ಮ ಕುಟುಂಬಕ್ಕೂ ಲಕ್ಷ್ಮೀದೇವಿಯ ಆಶೀರ್ವಾದ ಲಭಿಸುತ್ತದೆ .