International News: ಇರಾನ್‌ನಲ್ಲಿ ಅವಳಿ ಬಾಂಬ್ ಸ್ಪೋಟಗೊಂಡು, 103 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ, 141ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಇರಾನ್‌ನ ಕೆರ್ಮಾನ್‌ನಲ್ಲಿ ಕಮಾಂಡರ್ ಕಾಸ್ಸೇಮ್ ಸುಲೇಮಾನಿ ಅವರ ಸ್ಮರಣೆಯ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ದುಷ್ಕರ್ಮಿಗಳು ಬಾಂಬ್ ಸಿಡಿಸಿದ್ದು, 103 ಜನ ಸಾವನ್ನಪ್ಪಿದ್ದಾರೆ. 141ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನು ಯಾರು ಈ ಕಮಾಂಡರ್ ಕಾಸ್ಸೇಮ್ ಸುಲೇಮಾನಿ ಎಂದರೆ, ಇವರು ಇರಾನ್ ಸೇನೆಯ ಕಮಾಂಡರ್ ಆಗಿದ್ದು, 2020ರಲ್ಲಿ ಅಮೆರಿಕ ಬಾಗ್ದಾದ್ ಮೇಲೆ ನಡೆಸಿದ ಡ್ರೋಣ್ ದಾಳಿಯಲ್ಲಿ ಇವರು ಮೃತಪಟ್ಟಿದ್ದರು. ಅಂದಿನಿಂದ ಪ್ರತೀ ವರ್ಷ, ಅವರ ಸಮಾಧಿ ಬಳಿಯೇ, ಸ್ಮರಣಾರ್ಥ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.
ಅದೇ ರೀತಿ, ಈ ಬಾರಿಯೂ ಸ್ಮರಣಾ ಕಾರ್ಯಕ್ರಮ ನಡೆಯುವಾಗ, ಕೆಲ ದುಷ್ಕರ್ಮಿಗಳು, ಅನಿಲ ತುಂಬಿದ ಡಬ್ಬಿಗಳನ್ನು ಒಂದಾದ ಮೇಲೊಂದರಂತೆ ಸಿಡಿಸಿದ್ದು, ಈ ಮೂಲಕ ದುರಂತ ಸಂಭವಿಸಿದೆ. ಕೆಲವರು ಸ್ಥಳದಲ್ಲೇ ಮೃತಪಟ್ಟರೆ, ಇನ್ನು ಕೆಲವರು ಆಸ್ಪತ್ರೆ ದಾಖಲಿಸುವಾಗ ಮಾರ್ಗ ಮಧ್ಯೆ, ಮತ್ತೆ ಕೆಲವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು, ಇದರಲ್ಲಿ ಉಗ್ರರ ಕೈವಾಡವಿದೆಯೆಂದು ಶಂಕಿಸಲಾಗಿದೆ.
ಗೋಧ್ರಾ ವಿವಾದಾತ್ಮಕ ಹೇಳಿಕೆ: ಹರಿಪ್ರಸಾದರನ್ನು ಬಂಧಿಸಿ ಎಂದ ಪ್ರಮೋದ್ ಮುತಾಲಿಕ್
ಹಿಂದೂ ರಾಷ್ಟ್ರ ಮಾಡೇ ಮಾಡ್ತೀವಿ ಗಂಡಸ್ತನ ಇದ್ರೆ ತಡಿರಿ: ಕಾಂಗ್ರೆಸ್‌ಗೆ ಮುತಾಲಿಕ್ ಸವಾಲ್
ಜೋಶಿ ಬದಲು ಶ್ರೀಕಾಂತ್ ಗೆ ಟಿಕೆಟ್ ಕೊಡಿ ಅಭಿಯಾನ ಆರಂಭಿಸಿದ ಕಾಂಗ್ರೆಸ್..!