www.karnatakatv.net : ರಾಯಚೂರು: ಕಳೆದ 28 ತಿಂಗಳಿನಿಂದ ವೇತನವನ್ನೇ ನೀಡದಿರೋ ಕುರಿತು ಹಟ್ಟಿ ಪಟ್ಟಣ ಪಂಚಾಯತಿ ಸಿಬ್ಬಂದಿ ಇಂದು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ರು.
ಹಟ್ಟಿ ಪಟ್ಟಣ ಪಂಚಾಯತಿ ನೌಕರಿಗೆ ಕಳೆದ ಎರಡುವರೆ ವರ್ಷದಿಂದ ವೇತನ ನೀಡಲಾಗಿಲ್ಲ. ಹೀಗಾಗಿ ಸಂಸಾರ ನಿಭಾಯಿಸೋದು ಕಷ್ಟವಾಗಿದೆ ಅಂತ ಜಿಲ್ಲಾಧಿಕಾರಿಗಳ ಬಳಿ ಇಂದು ಸಿಬ್ಬಂದಿ ಗೋಳು ತೋಡಿಕೊಂಡ್ರು. ಪಟ್ಟಣವನ್ನು ಕ್ಲೀನ್ ಮಾಡುವವರಿಂದ ಹಿಡಿದು ಬಿಲ್ ಕಲೆಕ್ಟರ್, ವಾಟರ್ ಮ್ಯಾನ್ ವರೆಗೂ ಯಾರೊಬ್ಬರಿಗೂ ಈವರೆಗೆ ಕಳೆದ 28 ತಿಂಗಳಿನಿಂದ ವೇತನ ನೀಡಲಾಗಿಲ್ಲ. ಈ ಕೂಡಲೇ ನಮಗೆ ವೇತನ ನೀಡಿ ಅಂತ ಜಿಲ್ಲಾಧಿಕಾರಿ ಕಚೇರಿಗೆ ಸುಮಾರು 40 ಕ್ಕೂ ಹೆಚ್ಚು ಸಿಬ್ಬಂದಿ ತೆರಳಿ ಮನವಿ ಪತ್ರ ಸಲ್ಲಿಸಿದ್ರು. ವೇತನ ನೀಡದ ಕಾರಣ ಯಾವೊಬ್ಬ ಸಿಬ್ಬಂದಿಯೂ ಕೆಲಸ ಮಾಡುತ್ತಿಲ್ಲ. ಹೀಗಾಗಿ ಪಟ್ಟಣ ಗಬ್ಬೆದ್ದು ನಾರುತ್ತಿದೆ. ಈ ಕೂಡಲೇ ಕಾರ್ಮಿಕರ ವೇತನ ಪಾವತಿ ಮಾಡಬೇಕು ಅಂತ ಮನವಿ ಮಾಡಿದ್ರು.
ಅನಿಲ್ ಕುಮಾರ್, ಕರ್ನಾಟಕ ಟಿವಿ- ರಾಯಚೂರು