Friday, October 17, 2025

Latest Posts

ಪ್ರತಿಭಟನೆ ವೇಳೆ ಇಬ್ಬರು ಬಿಜೆಪಿ ಸಂಸದರಿಗೆ ಗಾಯ: ರಾಹುಲ್ ಗಾಂಧಿ ವಿರುದ್ಧ FIR ದಾಖಲು

- Advertisement -

Political News: ಕೇಂದ್ರ ಗೃಹ ಸಚಿವ ಅಮಿತ್ ಶಾ ಅಂಬೇಡ್ಕರ್ ಬಗ್ಗೆ ಹೇಳಿದ ಹೇಳಿಕೆ ಖಂಡಿಸಿ, ನಿನ್ನೆ ಸಂಸತ್‌ನಲ್ಲಿ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿದರು.

ಈ ವೇಳೆ ರಾಹುಲ್ ಗಾಂಧಿ ಕಾರಣದಿಂದಾಗಿ, ಬಿಜೆಪಿಯ ಇಬ್ಬರು ಸಂಸದರಿಗೆ ಪೆಟ್ಟಾಗಿದೆ ಎಂದು ಆರೋಪಿಸಲಾಗಿದೆ. ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ರಾಹುಲ್ ಗಾಂಧಿ ನೂಕಿದ್ದರಿಂದಲೇ, ನಾನು ಬಿದ್ದು ನನಗೆ ಪೆಟ್ಟಾಗಿದೆ ಎಂದಿದ್ದಾರೆ. ಈ ಕಾರಣಕ್ಕೆ ರಾಹುಲ್ ಗಾಂಧಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಈ ಬಗ್ಗೆ ಮಾತನಾಡಿರುವ ಪ್ರತಾಪ್ ಸಾರಂಗಿ, ಪ್ರತಿಭಟನೆ ವೇಳೆ ರಾಹುಲ್ ಗಾಂಧಿ ಓರ್ವ ಸಂಸದನನ್ನು ತಳ್ಳಿದ್ದು, ಆ ಸಂಸದ ನನ್ನ ಮೇಲೆ ಬಂದು ಬಿದ್ದ ಕಾರಣ, ನನಗೆ ಪೆಟ್ಟಾಗಿದೆ ಎಂದು ಹೇಳಿದ್ದಾರೆ. ಈ ಆರೋಪಕ್ಕೆ ಉತ್ತರಿಸಿರುವ ರಾಹುಲ್ ಗಾಂಧಿ, ನಾನು ಸಂಸತ್ ಒಳಗೆ ಹೋಗಲು ಪ್ರಯತ್ನಿಸುತ್ತಿದ್ದೆ. ಈ ವೇಳೆ ನಮ್ಮನ್ನು ತಡೆಯುವ ಪ್ರಯತ್ನ ನಡೆದಿದೆ. ಹಾಗಾಗಿ ತಳ್ಳಾಟ, ನೂಕಾಾಟ ನಡೆದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರತಾಪ್ ಸಾರಂಗಿಗೆ ತಲೆಗೆ ಪೆಟ್ಟಾಗಿ ರಕ್ತ ಸುರಿದಿದ್ದು, ಸಂಸದ ಡಾ.ಮಂಜುನಾಥ್ ಅವರಿಗೆ ಚಿಕಿತ್ಸೆ ನೀಡಿದ್ದಾರೆ. ಇನ್ನೋರ್ವ ಬಿಜೆಪಿ ಸಂಸದರಿಗೆ ಗಾಯವಾಗಿದ್ದು, ಅವರು ಕೂಡ ತಮಗಾಗಿರುವ ಪೆಟ್ಟಿಗೆ ರಾಹುಲ್ ಗಾಂಧಿಯೇ ಕಾರಣ ಎಂದಿದ್ದಾರೆ.

- Advertisement -

Latest Posts

Don't Miss