ಪಂಜಾಬ್ ಗೆ ಇಬ್ಬರು ಉಪಮುಖ್ಯಮಂತ್ರಿಗಳು..!

www.karnatakatv.net :ಪಂಜಾಬ್ ಕಾಂಗ್ರೆಸ್ ನಲ್ಲಿ ರಾಜಕೀಯ ವೈಮನಸ್ಯದಿಂದಾಗಿ ಸಿಎಂ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಇಂದು ನೂತನ ಸಿಎಂ ಆಗಿ ಚರಣ್ ಜಿತ್ ಸಿಂಗ್ ಛನಿ ಅಧಿಕಾರವಹಿಸಿಕೊಳ್ಳಲಿದ್ದಾರೆ. ಇನ್ನು ರಾಜ್ಯದಲ್ಲಿ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ನೇಮಿಸಲು  ಕಾಂಗ್ರೆಸ್ ತೀರ್ಮಾನಿಸಿದೆ. 

ಜಾಟ್ ಸಿಖ್ ಹಾಗೂ ಹಿಂದು ಸಮುದಾಯದಿಂದ ಉಪ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದೆ. ಇನ್ನು ಉಪಮುಖ್ಯಮಂತ್ರಿ ರೇಸ್ ನಲ್ಲಿ ಜಾಟ್ ಸಿಖ್ ಸಮುದಾಯದ ಶಾಸಕ  ದೇರಾ ಬಾಬಾ ನಾನಕ್ ಸುಖಜಿಂದರ್ ಸಿಂಗ್ ರಾಂಧವಾ ಮತ್ತು ಹಿಂದೂ ಸಮುದಾಯದಿಂದ ಪಟಿಯಾಲ ಗ್ರಾಮೀಣ ಶಾಸಕ ಬ್ರಹ್ಮ ಸಿಂಗ್ ಮೊಹಿಂದ್ರಾ , ಸಂಗ್ರೂರ್ ಶಾಸಕರ ವಿಜಯ್ ಇಂದರ್ ಸಿಂಗ್ಲಾ, ಸಚಿವ ಭರತ್ ಭೂಷಣ್ ಅಶು ಅವರ ಹೆಸರುಗಳು ಕೇಳಿಬರುತ್ತಿದೆ.

About The Author