Thursday, June 19, 2025

Latest Posts

ಭಾರತದಲ್ಲಿ ಎಷ್ಟು ರೀತಿಯ ಗೂಬೆಗಳಿದೆ ಗೊತ್ತಾ..?

- Advertisement -

ಪ್ರಾಣಿ ಪಕ್ಷಿಗಳಲ್ಲಿ ಹಲವು ವಿಧಗಳಿದೆ. ಅದೇ ರೀತಿ ಗೂಬೆಗಳಲ್ಲೂ ಹಲವು ರೀತಿಯ ಗೂಬೆಗಳಿದೆ. ಗೂಬೆಗಳು ಕಾಣಸಿಗುವುದೇ ಅಪರೂಪ. ಅದರಲ್ಲೂ ವಿವಿಧ ತರಹದ ಗೂಬೆಗಳನ್ನ ನಾವು ಟಿವಿ, ಸಾಮಾಜಿಕ ಜಾಲತಾಣಗಳಲ್ಲಷ್ಟೇ ನೀವು ನೋಡಬಹುದು. ಅಂಥ ಗೂಬೆಗಳ ಬಗ್ಗೆ ಮಾಹಿತಿ ತಿಳಿಯೋಣ ಬನ್ನಿ..

ಗೂಬೆ ಅಂದ್ರೆ ಸಾಕು ನಮ್ಮಲ್ಲಿ ಅದು ಅನಿಷ್ಟ ಪಕ್ಷಿ, ಅಪಶಕುನದ ಪಕ್ಷಿ, ಅದು ಮನೆಗೆ ಬಂದ್ರೆ ಒಳ್ಳೆದಲ್ಲ. ಹೀಗೆ ಇತ್ಯಾದಿ ಯೋಚನೆ ತಲೆಗೆ ಬರತ್ತೆ. ಅಲ್ಲದೇ ಗೂಬೆ ಲಕ್ಷ್ಮೀಯ ವಾಹನವಾಗಿದ್ದು, ಇದು ಶುಭ ಶಕುನ ತರುವ ಪಕ್ಷಿ ಅಂತಾನೂ ಕೆಲವರು ಹೇಳ್ತಾರೆ. ಇದು ಎಷ್ಟು ಸತ್ಯವೋ, ಸುಳ್ಳೋ ಗೊತ್ತಿಲ್ಲಾ. ಆದ್ರೆ ಗೂಬೆ ಕ್ಯೂಟ್ ಪಕ್ಷಿ ಅನ್ನೋದಂತೂ ನಿಜ. ಇಂಥ ಕ್ಯೂಟ್ ಪಕ್ಷಿಗಳಲ್ಲಿ ಸುಮಾರು ವೆರೈಟಿಗಳಿದೆ. ಅದೂ ಕೂಡ ಭಾರತದಲ್ಲೇ ವಿವಿಧ ತಳಿಯ ಗೂಬೆಗಳು ಕಂಡು ಬರುತ್ತದೆ.

ಮೊದಲನೇಯದಾಗಿ ಇಂಡಿಯನ್ ಈಗಲ್ ಓವಲ್. ಇದು ಅತ್ಯುತ್ತಮವಾಗಿ ಶಿಕಾರಿ ಮಾಡುವ ಗೂಬೆ. ಯಾಕಂದ್ರೆ ಇದರ ಕಿವಿ ತುಂಬಾ ಸೂಕ್ಷ್ಮ ಸದ್ದನ್ನ ಗುರುತಿರುವ ಅರ್ಹತೆಯನ್ನ ಹೊಂದಿದೆ. ಹಾಗಾಗಿ ಇದು ಬೇಟೆಯಾಡುವ ಗೂಬೆಯಾಗಿದೆ.  ಎರಡನೇಯದಾಗಿ ಬ್ರೌನ್ ಫಿಶ್ ಓವಲ್. ಇದು ಹೆಚ್ಚು ತೂಕದ, ದೊಡ್ಡ ಗಾತ್ರದ ಗೂಬೆ. ಕಾಡಿನಲ್ಲಿ ಹೆಚ್ಚಾಗಿ ವಾಸಿಸುವ ಈ ಗೂಬೆ, ಸುಮಾರು ವರ್ಷದ ತನಕ ಒಂದೇ ಸ್ಥಳದಲ್ಲಿರಲು ಇಷ್ಟಪಡುತ್ತದೆ.

ಮೂರನೇಯದಾಗಿ ಶಾರ್ಟ್ ಈಯರ್ಡ್ ಓವಲ್. ಇದು ಗಾತ್ರದಲ್ಲಿ ಕೊಂಚ ಚಿಕ್ಕದಾಗಿರುತ್ತದೆ. ಮುಸ್ಸಂಜೆ ಗೊತ್ತು, ರಾತ್ರಿ ಹೊತ್ತಷ್ಟೇ ಅಲ್ಲದೇ, ಬೆಳಗ್ಗಿನ ಸಮಯದಲ್ಲೂ ಇದು ಬೇಟೆಯಾಡುತ್ತದೆ. ಇದರ ಬಣ್ಣ, ಮುಖವೆಲ್ಲ ಎಷ್ಟು ಚಂದವೆಂದರೆ, ಇದನ್ನ ಸಾಕಬೇಕು ಎನ್ನಿಸುವಷ್ಟು ಈ ಗೂಬೆ ಸುಂದರವಾಗಿರುತ್ತದೆ. ನಾಲ್ಕನೇಯದಾಗಿ ಸ್ಪಾಟೆಡ್ ಆವ್ಲೆಟ್. ಇದು ಚಿಕ್ಕ ಗೂಬೆಯಾಗಿದ್ದು, ಸಿಟಿಗಳಲ್ಲಿ ವಾಸವಿರುತ್ತದೆ. ಇದರ ಮೈಮೇಲೆ ಬಿಳಿ ಬಿಳಿ ಚುಕ್ಕೆಗಳಿರುವ ಕಾರಣಕ್ಕೆ, ಇದನ್ನ ಸ್ಪಾಟೆಡ್ ಆವ್ಲೆಟ್ ಅಂತಾ ಕರೆಯಲಾಗುತ್ತದೆ.

- Advertisement -

Latest Posts

Don't Miss