Tuesday, April 15, 2025

Latest Posts

ಪ್ರಪಂಚದಲ್ಲಿರುವ ಸುಂದರ ನವಿಲುಗಳ ಬಗ್ಗೆ ಚಿಕ್ಕ ಮಾಹಿತಿ ಇಲ್ಲಿದೆ ನೋಡಿ..

- Advertisement -

ಪಕ್ಷಿಗಳಲ್ಲಿ ಅತ್ಯಂತ ಸುಂದರವಾದ, ನೋಡಲು ಖುಷಿ ಕೊಡುವ ಪಕ್ಷಿ ಅಂದ್ರೆ ನವಿಲು. ನವಿಲು ಗರಿ ಬಿಚ್ಚಿ ಕುಣಿಯುವುದನ್ನ ನೋಡುವುದೇ ಕಣ್ಣಿಗೊಂದು ಹಬ್ಬವಿದ್ದಂತೆ. ನಾವು ನೀವು ಸಾಮಾನ್ಯವಾದ ನವಿಲುಗಳನ್ನ ಸುಮಾರು ಬಾರಿ ನೋಡಿರ್ತೀವಿ. ಆದ್ರೆ ನಾವಿವತ್ತು, ಪ್ರಪಂಚದಲ್ಲಿರುವ ಸುಂದರವಾದ ನವಿಲುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಆ ಬಗ್ಗೆ ತಿಳಿಯೋಣ ಬನ್ನಿ..

ಕಾಂಗೋ ಪೀಫಾಲ್- ಈ ನವಿಲನ್ನ ಆಫ್ರಿಕನ್ ಪೀ ಫಾಲ್ ಅಂತಾನೂ ಕರಿಯಲಾಗುತ್ತದೆ.  ಈ ನವಿಲು ಹೆಚ್ಚಾಗಿ ಆಫ್ರಿಕಾದಲ್ಲಿ ಕಾಣ ಸಿಗುತ್ತದೆ. ಇದರ ರೆಕ್ಕಿ ಚಿಕ್ಕದಿರುತ್ತದೆ. ಇದು ಬೇರೆ ನವಿಲುಗಳಿಗಿಂತ ವಿಭಿನ್ನವಾಗಿರುತ್ತದೆ. ಸಾಮಾನ್ಯವಾಗಿ ಹೆಣ್ಣು ನವಿಲಿಗಿಂತ ಗಂಡು ನವಿಲು ಸುಂದರವಾಗಿರುತ್ತದೆ. ಆದ್ರೆ ಪೀಫಾಲ್ ನವಿಲಿನಲ್ಲಿ ಹೆಣ್ಣು ನವಿಲು ಸುಂದರವಾಗಿರುತ್ತದೆ.

ಎರಡನೇಯದ್ದು ವೈಲ್ಡ್ ಪಲಾವನ್ ಪೀಫೌಲ್. ಇದು ಪ್ರಪಂಚದ ಆಕರ್ಷಕ ನವಿಲಾಗಿದೆ. ಇದು ಫಿಲಿಪೈನ್ಸ್ ನ ಐಲ್ಯಾಂಡ್‌ನಲ್ಲಿ ಕಾಣಸಿಗುವ ನವಿಲಾಗಿದ್ದು, ಇದರ ಬಣ್ಣ ಸಖತ್ ಡಿಫ್ರೆಂಟ್ ಆಗಿದೆ. ಮೆಟಾಲಿಕ್ ಬ್ಲೂ ಪರ್ಪಲ್ ಅಂದ್ರೆ ಗಾಢ ನೀಲಿ ಮತ್ತು ನೇರಳೆ ಬಣ್ಣದಿಂದ ಕೂಡಿದ ಸುಂದರ ಬಣ್ಣವನ್ನು ಇದು ಹೊಂದಿದೆ. ಆದ್ರೆ ಇದೆಲ್ಲ ಅಂಶಗಳು ಬರೀ ಗಂಡು ವೈಲ್ಡ್ ಪಲಾವನ್ ಪೀಫೌಲ್‌ನಲ್ಲಿ ಕಂಡು ಬರುತ್ತದೆ. ಆದ್ರೆ ಹೆಣ್ಣು ನವಿಲು ಮಾತ್ರ ತುಂಬಾ ಸಿಂಪಲ್ ಆಗಿರುತ್ತದೆ.

ಮೂರನೇಯದ್ದು ಗ್ರೇಟ್ ಆರ್ಗಯೂಸ್ ಪ್ರೆಸೆಂಟ್. ಎಲ್ಲ ನವಿಲುಗಳು ಹಿಂದೆ ಗರಿ ಬಿಚ್ಚಿ ಕುಣಿದರೆ, ಈ ನವಿಲು ಮಾತ್ರ ಮುಂದೆ ಗರಿ ಬಿಚ್ಚಿ ಕುಣಿಯುತ್ತದೆ. ಇದರ ಬಣ್ಣವೂ ಕೂಡ ತುಂಬಾ ವಿಭಿನ್ನ. ಇದು ಚಿನ್ನದ ಬಣ್ಣದ್ದಾಗಿದ್ದು, ಇದರ ರಕ್ಕೆಯ ಬಳಿ ಇರುವ ಬಾಲ, ಎಲ್ಲ ನವಿಲುಗಳಿಗಿಂತ ದೊಡ್ಡದಾಗಿರುತ್ತದೆ.

ನಾಲ್ಕನೇಯದ್ದು ಆಸಲೇಟೆಡ್ ಟರ್ಕಿ. ಟರ್ಕಿ ಪಕ್ಷಿಯಂತೆ ಇರುವ ಈ ನವಿಲಿನ ಮುಖದ ಮೇಲೆ ಕಲರ್ ಕಲರ್ ಚುಕ್ಕೆಗಳಿರುತ್ತದೆ. ಇದು ಸ್ವಲ್ಪ ಚಿಕ್ಕ ನವಿಲಾದರೂ ಕೂಡ, ಸುಂದರವಾದ ನವಿಲಾಗಿದೆ. ಇದರ ಇನ್ನೊಂದು ವಿಷೇಶತೆ ಅಂದ್ರೆ  ಇದು ಹಾರುವುದಿಲ್ಲ, ಬರೀ ನಡೆಯುತ್ತದೆ.

ಐದನೇಯದ್ದು ವೈಟ್ ಪೀಫೌಲ್. ಇದು ಹೆಸರಿಗೆ ತಕ್ಕಂತೆ ಬೆಳ್ಳಿಗಿರುತ್ತದೆ. ಇದರ ಇಡೀ ದೇಹ ಬಿಳಿ ಬಿಳಿಯಾಗಿರುತ್ತದೆ. ಈ ನವಿಲಿನ ಬಗ್ಗೆ ಹಲವರಿಗೆ ಗೊತ್ತಿರದ ಸಂಗತಿ ಅಂದ್ರೆ, ಇದು ನೀಲಿ ಬಣ್ಣದ ನವಿಲಿನ ಜಾತಿಯದ್ದೇ ಆಗಿದೆ. ಆದರೆ ಜೆನೆಟಿಕ್ ಸಮಸ್ಯೆಯಿಂದ ಇದರ ಬಣ್ಣ ಬಿಳಿಯಾಗಿದೆ ಅಷ್ಟೆ.

- Advertisement -

Latest Posts

Don't Miss