Friday, November 22, 2024

Latest Posts

Crime News: ಉಡುಪಿ ತಾಯಿ- ಮಕ್ಕಳ ಕೊಲೆ ಪ್ರಕರಣದ ಆರೋಪಿ ಪ್ರವೀಣ್ ಚೌಗಲೆ ಬಂಧನ

- Advertisement -

Udupi News: ಉಡುಪಿಯಲ್ಲಿ ತಾಯಿ ಮತ್ತು ಮೂವರು ಮಕ್ಕಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಪ್ರವೀಣ್ ಚೌಗಲೆ(39)ಯನ್ನು ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ.

ಉಡುಪಿಯ ನೇಜಾರಿನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಆರೋಪಿ ಪ್ರವೀಣ್‌ನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, 14 ದಿನ ನ್ಯಾಯಾಂಗ ಬಂಧನದಲ್ಲಿ ಇರಿಸಲು ಆದೇಶ ನೀಡಲಾಗಿದೆ. ಮಹಾರಾಷ್ಟ್ರದ ಸಾಂಗ್ಲಿಯವನಾಗಿದ್ದ ಪ್ರವೀಣ್ ಚೌಗಲೆ, ಈ ಕೊಲೆಯ ಬಳಿಕ, ಬೆಳಗಾವಿಯ ರಾಯಬಾಗ್‌ನಲ್ಲಿರುವ ತನ್ನ ಸಂಬಂಧಿಕರ ಮನೆಯಲ್ಲಿ ಅಡಗಿ ಕುಳಿತಿದ್ದ. ಆದರೆ ಆತನ ಮೊಬೈಲ್ ಟವರ್ ಲೊಕೇಶನ್ ಆಧರಿಸಿ, ಅವನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರವೀಣ್ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ. ಅದೇ ಸ್ಥಳದಲ್ಲಿ ಕೊಲೆಯಾದ ಅಯ್ನಾಜ್ ಕೂಡ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದಳು. ಅಲ್ಲೇ ಇಬ್ಬರಿಗೂ ಪರಿಚಯವಾಗಿ, ಇಬ್ಬರೂ ಆತ್ಮೀಯರಾಗಿದ್ದರು. ಆದರೆ ಕೆಲ ದಿನಗಳ ಬಳಿಕ, ಅಯ್ನಾಜ್ ಪ್ರವೀಣ್ ಜೊತೆ ಮಾತನಾಡುವುದನ್ನೇ ಬಿಟ್ಟಿದ್ದಳು.

ಇದರಿಂದ ಮುನಿಸಿಕೊಂಡಿದ್ದ ಪ್ರವೀಣ್, ಹಲವು ಬಾರಿ ಆಕೆಯನ್ನು ಮಾತನಾಡಿಸಲು ಪ್ರಯತ್ನಿಸಿದ್ದ. ಆದರೆ ಅಯ್ನಾಜ್ ಪ್ರವೀಣ್ ಸಹವಾಸವೇ ಬೇಡವೆಂಬಂತೆ ದೂರ ಉಳಿದಿದ್ದಳು. ಹೀಗಾಗಿ ಅಯ್ನಾಜ್ ಕೊಲೆ ಮಾಡಲು ಪ್ರವೀಣ್ ನಿರ್ಧರಿಸಿದ್ದ. ಅಯ್ನಾಜ್ ಮನೆಗೆ ಹೋಗಿ, ಪ್ರವೀಣ್ ಆಕೆಯ ಕೊಲೆ ಮಾಡಿದ್ದು, ಆಕೆಯನ್ನು ರಕ್ಷಿಸಲು ಬಂದ ತಾಯಿ ಮತ್ತು ಸಹೋದರಿಯನ್ನೂ ಕೊಂದಿದ್ದಾನೆ. ಅಲ್ಲದೇ ಇದೇ ವೇಳೆ ಅಯ್ನಾಜ್ ತಮ್ಮ ಆ ಮನೆಗೆ ಬಂದಿದ್ದು, ಅವನು ಸಾಕ್ಷಿ ಹೇಳಬಹುದೆಂದು ಅಂದಾಜಿಸಿ, ಅವನನ್ನೂ ಪ್ರವೀಣ್ ಕೊಲೆ ಮಾಡಿದ್ದಾನೆ. ಹೀಗೆ ಪ್ರೀತಿಯಲ್ಲಿ ಶುರುವಾಗಿದ್ದ ಅಯ್ನಾಜ್, ಪ್ರವೀಣ್ ಕಥೆ, ಕೊಲೆಯ ಮೂಲಕ ಅಂತ್ಯವಾಗಿದೆ.

ಇನ್ನು ಪ್ರವೀಣ್ ಅಯ್ನಾಜ್ ಮನೆಗೆ ಹೋಗುತ್ತಿರುವ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದರ ಸಾಕ್ಷಿಯಾಧಾರದ ಮೇಲೆ ಪ್ರವೀಣ್‌ ಆರೋಪಿ ಎಂದು ಸಾಬೀತಾಗಿದೆ. ಸದ್ಯ ಪ್ರವೀಣ್‌ನನ್ನು ಪೊಲೀಸರು ಬಂಧಿಸಿದ್ದು, 14 ದಿನ ನ್ಯಾಯಾಂಗ ಬಂಧನದಲ್ಲಿರಿಸಲು ಆದೇಶ ನೀಡಲಾಾಗಿದೆ.

”ವಹಿಸಿರುವುದು ಅಧಿಕಾರವಲ್ಲ ಹೊಣೆಗಾರಿಕೆ’ ಎಂದರಿತು ಕಾರ್ಯಕರ್ತನಾಗಿ ಹೆಜ್ಜೆ ಇಡಲಿದ್ದೇನೆ’

ಗಾಜಾದಲ್ಲಿರುವ ಹಮಾಸ್ ಉಗ್ರರ ಸಂಸತ್ತ ಕಟ್ಟಡವನ್ನೇ ವಶಪಡಿಸಿಕೊಂಡ ಇಸ್ರೇಲ್ ಸೇನೆ

ಪ್ರಧಾನಿ ಮೋದಿಯವರೇ, ನಿಮಗೆ ನಾಚಿಕೆ ಆಗತ್ತೋ ಇಲ್ಲವೋ?: ಸಿಎಂ ಸಿದ್ದರಾಮಯ್ಯ

- Advertisement -

Latest Posts

Don't Miss