Hubballi Political News: ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ನೇತೃತ್ವದಲ್ಲಿ ಜನವರಿ 27 ಮತ್ತು 28ರಂದು ನಗರದ ಕುಸುಗಲ್ ರಸ್ತೆಯಲ್ಲಿ ಗಾಳಿಪಟ ಉತ್ಸವ ಆಯೋಜನೆ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಾಳಿಪಟ ಉತ್ಸವದಲ್ಲಿ 15 ದೇಶದ 23 ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. ಜೊತೆಗೆ ಕುಸ್ತಿ, ಚಿತ್ರಕಲಾ ಸ್ಪರ್ಧೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ದೇಸಿ ಕ್ರೀಡೆಗಳಿಗೆ ಆದ್ಯತೆ ನೀಡಲು ಆಯೋಜನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ನವರು ಇಟಲಿ ತಳಿಗಳು: ಅರವಿಂದ ಬೆಲ್ಲದ್
ಕಾಂಗ್ರೆಸ್ನವರು ಇಟಲಿ ತಳಿಗಳು. ಕಾಂಗ್ರೆಸ್ಸಿಗರು ಪೋಪ್, ಚರ್ಚ್ ಬಗ್ಗೆ ಮಾತಾಡಿದರೆ ಖುಷಿಯಾಗುತ್ತಿದ್ದರು. ರಾಮ, ವಿಶ್ವನಾಥ ಬಗ್ಗೆ ಮಾತಾಡಿದರೆ ಇಟಲಿ ತಳಿಗಳಿಗೆ ಎಲ್ಲಿ ತಿಳಿಯುತ್ತೆ. ಕಾಂಗ್ರೆಸ್ಸಿಗರು ಕುಡಿದು ಹೇಗೆ ಜೀವಂತ ಇರ್ತಾರೆ ಅನ್ನೋದೆ ಪವಾಡ. ಕಾಂಗ್ರೆಸ್ನವರ ಪವಾಡವೇ ನಮಗೆ ತಿಳಿಯುತ್ತಿಲ್ಲ ಎಂದಿದ್ದಾರೆ.
ಕಾಂಗ್ರೆಸ್ನವರು ಏನು ಕುಡೀತಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇಟಲಿ ತಳಿಗಳಿಂದ ನಾವೇನೂ ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ. ರಾಹುಲ್ ಗಾಂಧಿ ಮುತ್ತಜ್ಜ ನಮ್ಮ ದೇಶದ ಮೊದಲ ಪ್ರಧಾನಮಂತ್ರಿ. ನಮ್ಮ ದೇಶದ ಗೌರವ, ಅಭಿಮಾನ, ಧರ್ಮ ಬಗ್ಗೆ ಯಾವ ಕಲ್ಪನೆ ಇಲ್ಲ. ದೇಶದಲ್ಲಿ ರಾಮ ಒಬ್ಬನೇ, ಗಾಂಧಿಗೂ ಅದೇ ರಾಮ, ನಮಗೂ ಅದೇ ರಾಮ ಎಂದು ಹೇಳಿದ್ದಾರೆ.
ವೀರಪ್ಪ ಮೊಯ್ಲಿ ಅವರು ಪ್ರಭುದ್ಧ ರಾಜಕಾರಣಿ. ಅವರು ಈ ರೀತಿ ಟೀಕೆ ಮಾಡುತ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ. ಜಗದೀಶ್ ಶೆಟ್ಟರ್ ಬಿಜೆಪಿಗೆ ಬರೋದು ಗೊತ್ತಿಲ್ಲ. ತಳಬುಡ ಇಲ್ಲದ ಚರ್ಚೆ, ಊಹಾಪೋಹದ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.
‘ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡಕೋದು ಬಿಡಬೇಕು. ಎಲ್ಲದರಲ್ಲೂ ರಾಜಕೀಯ ಬೆರೆಸಬಾರದು’
ಅನ್ಯಾಯದ ಕಾಡ್ಗಿಚ್ಚನ್ನು ಆರಿಸಿ, ನ್ಯಾಯದ ಹಣತೆ ಬೆಳಗುವ ವರೆಗೆ ನಾವು ವಿರಮಿಸುವುದಿಲ್ಲ: ಸಿಎಂ
ರಾಮನು ಎಲ್ಲರಿಗೂ ಸೇರಿದವನು, ಆತ ಯಾರ ಆಸ್ತಿಯೂ ಅಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್